Kapati movie review. ಕಪಟಿ ಚಿತ್ರ ವಿಮರ್ಶೆ.ಅಂತರ್ಜಾಲದ ಕತ್ತಲ ಕರಾಳ ಮುಖ. Rating – 3/5.
ಚಿತ್ರ ವಿಮರ್ಶೆ – ಕಪಟಿ
Rating – 3/5.
ಚಿತ್ರ: ಕಪಟಿ
ನಿರ್ಮಾಣ: ದಯಾಳ್ ಪದ್ಮನಾಭನ್
ನಿರ್ದೇಶನ: ರವಿಕಿರಣ್, ಚೇತನ್ SP.
ಸಂಗೀತ : ಜಾನ್ ಶೇವನೇಶ್
ಛಾಯಾಗ್ರಹಣ : ಸತೀಶ್ ರಾಜೇಂದ್ರನ್
ಸಂಕಲನ : ಸಂತೋಷ್ T.
ಕಲಾವಿದರು: ಸುಕೃತವಾಗ್ಲೆ, ದೇವ್ ದೇವಯ್ಯ , ಸಾತ್ವಿಕ್ ಕೃಷ್ಣನ್, ಪವನ್ ವೇಣುಗೋಪಾಲ್ , ನಂದಗೋಪಾಲ್ , ಅಜಿತ್ ಕುಮಾರ್ ಮುಂತಾದವರು.
ವಿಕೃತ ಮನಸ್ಸಿನ ಸೈಕೋ, ಕ್ರೈಂ, ಥ್ರಿಲ್ಲರ್ ಕಥೆ
ನಿರ್ದೇಶಕ, ನಿರ್ಮಾಪಕ, ಮತ್ತು ನಟ ದಯಾಳ್ ಸಿನಿಮಾ ಅಂದ್ರೆ ಆ ಚಿತ್ರದಲ್ಲಿ ಏನಾದರು ಹೊಸತನ ಇದ್ದೇ ಇರುತ್ತೆ. ಅವರ ಹಿಂದಿನ ಸಿನಿಮಾಗಳು ಸಮಾಜ ಮುಖಿ ಕಥೆಗಳಿಂದ ಕೂಡಿರುತಿತ್ತು. ಅದೇ ರೀತಿಯಲ್ಲಿ ಸಮಾಜವನ್ನು ಎಚ್ಚರಿಸುವಂತ ಕಥೆಯನ್ನು ಕಪಟಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಆದರೆ ಈ ಬಾರಿ ವಿಕೃತ ಮನಸ್ಸಿನ ದುಷ್ಟರು, ಸಮಾಜಘಾತುಕರು , ಇಂಟರ್ ನೆಟ್ ಮೂಲಕ ಜನರ ಬದುಕಿನ ಜೊತೆ ಹೇಗೆ ಆಟವಾಡುತ್ತಾರೆ ಎನ್ನುವುದನ್ನು ಬಿಡಿಸಿಟ್ಟಿದ್ದಾರೆ.
ಡಾರ್ಕ್ ವೆಬ್ ನಲ್ಲಿ ನಡೆಯುತ್ತಿರುವ ರೋಚಕವಾದ , ಸಮಾಜವನ್ನು ಬೆಚ್ಚಿ ಬೀಳಿಸುವ ವಿಷಯವನ್ನು ಹೇಳಿದ್ದಾರೆ ನಿರ್ದೇಶಕರು. ಈ ಚಿತ್ರಕ್ಕೆ ಇಬ್ಬರು ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಕೇಂದ್ರ ಬಿಂದು ನಟಿ ಸುಕೃತವಾಗ್ಲೆ. ಸುಕೃತವಾಗ್ಲೆ ಈ ಹಿಂದೆ ನಟಿಸಿರುವ ಸಿನಿಮಾಗಳ ಮೂಲಕ ತಾನೊಬ್ಬ ಒಳ್ಳೆಯ ನಟಿ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ಒಬ್ಬ ಕಾಷ್ಟೂಮ್ ಡಿಸೈನರ್ ಆಗಿ, ಡಾರ್ಕ್ ವೆಬ್ ನವರಿಂದ ಟ್ರ್ಯಾಪ್ ಆಗುವಂತ ಸನ್ನಿವೇಶಗಳನ್ನು ಚನ್ನಾಗಿ ನಿಭಾಯಿಸಿದ್ದಾರೆ.
ರವಿಕಿರಣ್ ಹಾಗೂ ಚೇತನ್ ಇಬ್ಬರು ನಿರ್ದೇಶಕರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೊದಲರ್ಧ ಸ್ವಲ್ಪ ನಿಧಾನಗತಿಯಿಂದ ಸಾಗಿದೆ ಇಂಟರ್ ವೆಲ್ ನಂತರ ಚಿತ್ರ ಬೇರೆಯದೇ ರೀತಿಯಲ್ಲಿ ವೇಗ ಹೆಚ್ಚುತ್ತದೆ.
ಜಾನ್ ಶೇವನೇಶ್ ಸಂಗೀತದಲ್ಲಿ ಥ್ರಿಲ್ಲರ್ ಸಬ್ಜೆಕ್ಟ್ ಗೆ ಪೂರಕವಾಗಿದೆ. ಚಿತ್ರದ ಕ್ಯಾಮರಾ ವರ್ಕ್ ಕೂಡ ಹೊಸತನದಿಂದಿದೆ.
ಒಟ್ಟಿನಲ್ಲಿ ದಯಾಳ್ ಸಂಸ್ಥೆಯಿಂದ ಒಂದು ಹೊಸ ವಿಷಯದ ಚಿತ್ರ ಕಪಟಿಯನ್ನು ನೋಡಬಹುದು.