Kanunu Astra ಸಾಲ ಮಾಡಿ ತುಪ್ಪ ತಿಂದು ಸಿಕ್ಕಿಕೊಂಡವರಿಗೆ ಕಾನೂನು ಅಸ್ತ್ರ

ಸಾಲದ ಸುಳಿಯಲ್ಲಿ ಸಿಕ್ಕವರಿಗೆ ಕಾನೂನು ಅಸ್ತ್ರ ಈ ಹಿಂದೆ ಡಿಸೆಂಬರ್ 24 ಎಂಬ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದ ನಾಗರಾಜ್ ಎಂ.ಜಿ.ಗೌಡ ಅವರು ಸದ್ದಿಲ್ಲದೆ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಚಿತ್ರದ ಹೆಸರು ಕಾನೂನು ಅಸ್ತ್ರ. ಈ ಚಿತ್ರದ ಮುಹೂರ್ತ ಸಮಾರಂಭ ಸುಂಕದಕಟ್ಟೆಯ ನಿರ್ಮಾಪಕರ ಕಛೇರಿಯಲ್ಲಿ ನಡೆಯಿತು.
ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವಿಲ್ಲದವರು ಹೇಗೆ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಅಸ್ತ್ರ ಉಪಯೋಗಿಸಿಕೊಂಡು ಅದರಿಂದ ಹೇಗೆ ಪಾರಾಗಬಹುದು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಮದ್ಯಮವರ್ಗದ ಜನ ವಾಹನ ಸಾಲ ಪಡೆದುಕೊಂಡು, ಕಂತು ಕಟ್ಟುವುದು ಸ್ವಲ್ಪ ತಡವಾದರೂ ಅವರ ಮೇಲೆ ಸೀಜಿಂಗ್ ನವರ ನಡೆಸುವ ದೌರ್ಜನ್ಯ, ಗೃಹ ಸಾಲ ಪಡೆದವರ ಮೇಲೆ ಬ್ಯಾಂಕ್ ಗಳು ಬೇಕಾಬಿಟ್ಟಿ ಬಡ್ಡಿ ವಿಧಿಸುವಿಕೆ, ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳು, ಗಂಡ ಹೆಂಡತಿ ನಡುವಿನ ಸಂಸಾರ ಕಲಹಗಳು, ಡೈವೊರ್ಸ್ ಗೆ ಕಾರಣಗಳು, ನಿರಪರಾಧಿಯ ಮೇಲೆ ಕೊಲೆ ಅಪರಾಧ ಬಂದಾಗ ಕಾನೂನು ಅಂತಹವರನ್ನು ಹೇಗೆ ಸಂರಕ್ಷಿಸುತ್ತದೆ ಎಂಬ ಹಲವಾರು ಅಂಶಗಳನ್ನು ಹೇಳುವ ಚಿತ್ರವೇ ಕಾನೂನು ಅಸ್ತ್ರ. ಬಡವ, ಶ್ರೀಮಂತ, ಗಂಡು, ಹೆಣ್ಣು, ಸಾಲದ ಸುಳಿಯಿಂದ ಪಾರಾಗುವುದಕ್ಕೆ ಕಾನೂನು ಅಸ್ತ್ರ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನವಿದು. ಇದೆ 15 ರಿಂದ ಆರಂಭಿಸಿ ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು.
ಪುಟ್ಟೇಗೌಡ. ಎನ್. ಪ್ರೊಡಕ್ಷನ್ ಅಡಿಯಲ್ಲಿ ಪುಟ್ಟೇಗೌಡ ಎನ್. ಅವರು ಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ನಾಗರಾಜ್ ಎಂ.ಜಿ. ಗೌಡ ನಿರ್ದೇಶನ ಮಾಡುತ್ತಿದ್ದು, ವೆಂಕಿ ಯು.ಡಿ.ವಿ. ಅವರ ಸಂಕಲನ, ವಿನಯ್ ಗೌಡ ಅವರ ಛಾಯಾಗ್ರಹಣ, ಚಿತ್ರದ 5 ಹಾಡುಗಳಿಗೆ ಮಂಜು ಮಹದೇವ್ ಅವರ ಸಂಗೀತ, ಚಂದ್ರು ಬಂಡೆ ಅವರ ಸಾಹಸ, ಬಾಲು ಮಾಸ್ಟರ್ ಅವರ ಕೊರಿಯೋಗ್ರಫಿ ಇದೆ. ಅಲ್ಲದೇ
ಪುಟ್ಟೇಗೌಡ. ಎನ್, ಜಗದೀಶ್. ಹೆಚ್.ಜಿ. ದೊಡ್ಡಿ,
ಬಾಬು. ಬಿ.ಬಿ.ಆರ್, ಲಕ್ಷ್ಮಿನಾರಾಯಣ್, ಕವಿತ, ಸಾನ್ವಿ ಗೌಡ, ಯೋಗೇಶ್, ಮಂಜುನಾಥ್, ಶೈಲೇಶ್ ಮುಂರಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ‌.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor