Kangaroo movie review “ಕಾಂಗರೂ” ಚಿತ್ರ ವಿಮರ್ಶೆ ಇದೊಂದು ಸೈಕಲಾಜಿಕಲ್, ಥ್ರಿಲ್ಲರ್, ಸಸ್ಪೆನ್ಸ್ ಚಿತ್ರ.
ಚಿತ್ರ – ಕಾಂಗರೂ
ನಿರ್ಮಾಣ ಸಂಸ್ಥೆ – ಆರೋಹ ಪ್ರೊಡಕ್ಷನ್
ನಿರ್ಮಾಪಕರು – ರಮೇಶ್ ಬಂಡೆ, ರವಿ ಕೀಲಾರ, ಸ್ವಾಮಿ ಚಕ್ರಭಾವಿ, ಕೆ.ಜಿ. ಆರ್. ಗೌಡ, ಚನ್ನಕೇಶವ,
ನಿರ್ದೇಶನ – ಕಿಶೋರ್ ಮೇಗಳಮನೆ
ಸಂಗೀತ – ಸಾಧುಕೋಕಿಲ
ಛಾಯಾಗ್ರಹಣ – ಉದಯಲೀಲಾ
ಕಲಾವಿದರು – ಆದಿತ್ಯ, ರಂಜನಿ ರಾಘವನ್, ಕರಿಸುಬ್ಬು , ಅಶ್ವಿನ್ ಹಾಸನ್, ಶಿವಮಣಿ, ನಾಗೇಂದ್ರ ಅರಸ್, ಮುಂತಾದವರು.
ರೇಟಿಂಗ್-3.5/5
ಈ ವಾರ ಬಿಡುಗಡೆಯಾದ ಚಿತ್ರಗಳಲ್ಲಿ “ಕಾಂಗರೂ” ಕೂಡ ಒಂದು. ಇದೊಂದು ಸೈಕಲಾಜಿಕಲ್, ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ಮರ್ಡರ್ ಮಿಸ್ಟರಿ ಚಿತ್ರ.
ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೆನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲಾರ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ನಿರ್ಮಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ, ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ
ಉಳಿದಂತೆ ನಟ ಕರಿಸುಬ್ಬು , ಅಶ್ವಿನ್ ಹಾಸನ್, ಶಿವಮಣಿ, ನಾಗೇಂದ್ರ ಅರಸ್, ಮುಂತಾದವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರದ ಮೊದಲ ದೃಶ್ಯದಲ್ಲಿ ಚಿಕ್ಕಮಗಳೂರಿನ ಆ್ಯಂಟೋನಿ ಗೆಸ್ಟ್ ಹೌಸ್ ಗೆ ಬಂದ ಗಂಡ-ಹೆಂಡತಿಗೆ ರಾತ್ರಿ ಎರಡು ಘಂಟೆಗೆ ವಿಚಿತ್ರವಾದ ಅನುಭವವಾಗುತ್ತದೆ ಅದರಿಂದಾಗಿ ಗಂಡ ( ನಾಗೇಂದ್ರ ಅರಸ್ ) ರೂಮಿನಲ್ಲಿ ನೇಣು ಬಿಗಿದಂತ ಸ್ಥಿತಿಯಲ್ಲಿ ನಿಗೂಡವಾಗಿ ಸಾಯುತ್ತಾನೆ ಅಲ್ಲಿಂದ ಚಿತ್ರದ ಕಥೆ ತೆರೆದು ಕೊಳ್ಳುತ್ತದೆ.
ಆ್ಯಂಟೋನಿ ಗೆಸ್ಟ್ ಹೌಸ್ ಗೆ ಬಂದವರಿಗೆಲ್ಲಾ ಅದರಲ್ಲೂ ಗಂಡ ಹೆಂಡತಿಯರಿಗೆ ವಿಚಿತ್ರ ಅನುಭವಗಳಾಗುತ್ತಿರುತ್ತದೆ. ಅಲ್ಲಿಂದ ಹೆದರಿ ವಾಪಸ್ಸು ಹೋದವರು ಒಂದೋ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೂ ಕೆಲವರು ನಿಗೂಢವಾಗಿ ಕಣ್ಮರೆಯಾಗುತ್ತಿರುತ್ತಾರೆ.
ಈ ಎಲ್ಲಾ ಘಟನೆಗಳಿಗೆ ಕಾರಣ ಯಾರು ಎನ್ನುವುದೇ ಸಸ್ಪೆನ್ಸ್.

ಪೋಲಿಸ್ ಅಧಿಕಾರಿಯಾಗಿ ಚಿಕ್ಕಮಗಳೂರಿಗೆ ವರ್ಗವಾಗಿ ಬರುವ ನಾಯಕ ಪೃಥ್ವಿ (ಆದಿತ್ಯ) ನಿಗೆ ಅಲ್ಲಿ ಹೀಗೆಲ್ಲಾ ಆಗುತ್ತಿದೆ ಎಂದು ಆತನಿಗೂ ಗೊತ್ತಿರುವುದಿಲ್ಲ. ಅಲ್ಲಿ ಕ್ರೈಮ್ ಜಾಸ್ತಿಯಾಗುತ್ತಿದೆ ಮತ್ತು ಅದನ್ನು ತಹಬದಿಗೆ ತರಬೇಕು ಎಂದು ಆತನನ್ನು ಅಲ್ಲಿಗೆ ವರ್ಗ ಮಾಡಲಾಗಿರುತ್ತದೆ.
ಅಲ್ಲಿಗೆ ಹೋದ ಮೇಲೆ ಪೃಥ್ವಿಗೆ ಆ್ಯಂಟೋನಿ ಲಾಡ್ಜ್ ನಲ್ಲಿ ನಡೆಯುತ್ತಿರುವ ವಿಷಯ ಗೊತ್ತಾಗುತ್ತದೆ.
70 ಸಾವುಗಳು ಹಾಗೂ 125 ಕಣ್ಮರೆ ಕೇಸುಗಳ ಬೆನ್ನತ್ತಿದಾಗ ಆ್ಯಂಟನಿ ಗೆಸ್ಟ್ ಹೌಸ್ ನಲ್ಲಿ ದೆವ್ವದ ಕಾಟವಿದೆಯಾ? ಇದೊಂದು ಮಾನಸಿಕ ಸಮಸ್ಯೆಯಾ? ಅಥವಾ ಇದರ ಹಿಂದೆ ಬೇರೆ ಯಾರಾದರೂ ಇದ್ದಾರ ಎಂದು ಈ ಕೊಲೆಗಳು ಹಾಗೂ ನಾಪತ್ತೆಯಾದವರ ಹಿಂದೆ ಬಿದ್ದು ಅವುಗಳನ್ನು ಹೇಗೆ ಭೇದಿಸುತ್ತಾರೆ ಅನ್ನುವುದನ್ನ ತಮ್ಮ ಅಭಿನಯದ ಮೂಲಕ ಚನ್ನಾಗಿ ಪ್ರೇಕ್ಷಕರ ಮುಂದೆ ತಮ್ಮ ನನಾ ಕೌಶಲ್ಯವನ್ನು ಆದಿತ್ಯ ತೆರೆದಿಟ್ಟಿದ್ದಾರೆ.

ಆದಿತ್ಯ ಈ ಚಿತ್ರದಲ್ಲಿ ಒಬ್ಬ ಪೋಲಿಸ್ ಅಧಿಕಾರಿಯಾಗಿ ಚನ್ನಾಗಿ ಅಭಿಯಿಸಿದ್ದಾರೆ.
ನಿರ್ದೇಶಕರು ಹೆಚ್ಚಾಗಿ ಬಿಲ್ಡಪ್ ಗಳನ್ನು ಕೊಡದೇ, ಕಥೆ ತನ್ನ ಪರಿಮಿತಿಯ ಗಡಿಯನ್ನು ಮೀರದೇ ಸರಿಯಾದ ನಿರೂಪಣೆಯಲ್ಲಿ ಸಾಗುವಂತೆ ನೋಡಿಕೊಂಡಿದ್ದಾರೆ ಚಿತ್ರದ ಮೊದಲಾರ್ಧ ಸರಾಗವಾಗಿ ಮುಗಿಯುವುದೇ ಗೊತ್ತಾಗುವುದಿಲ್ಲ ಹಾಗೆ ದ್ವಿತೀಯಾರ್ಧದಲ್ಲಿ ಒಂದಷ್ಟು ಟ್ವಿಷ್ಟ್ ಗಳು ಪ್ರೇಕ್ಷಕನಿಗೆ ಗೊಂದಲ ಮೂಡಿಸುತ್ತದೆ ಯಾದರೂ ಇನ್ನೂ ಚನ್ನಾಗಿ ಮಾಡಬಹುದಿತ್ತೇನೋ ಎನಿಸುತ್ತದೆ. ಆದರೂ ಚಿತ್ರದ ಕಥೆ ಹೊಸತನದಿಂದ ಕೂಡಿದೆ ನಿರೂಪಣೆಯ ಶೈಲಿಯೂ ನಿರ್ದೇಶಕನ ಜಾಣ್ಮೆಯನ್ನು ತೋರಿಸುತ್ತದೆ.

ಈ ಹಿಂದೆ “ಎದೆಗಾರಿಕೆ” ಚಿತ್ರದಲ್ಲಿ ‘ನೀನೊಂದು ಮುಗಿಯದ ಮೌನ’ ಹಾಡಿಗೆ ಧ್ವನಿಯಾಗಿದ್ದ ಸಾಧು ಕೋಕಿಲ. ಈ ಚಿತ್ರದಲ್ಲೂ ಒಂದು ಹಾಡನ್ನು ಹಾಡಿದ್ದಾರೆ ಸಂಗೀತ ನಿರ್ದೇಶನದ ಜೊತೆಗೆ ಸಾಧುಕೋಕಿಲ ಹಾಡನ್ನು ಹಾಡಿರುವುದು ಚಿತ್ರಕ್ಕೆ ಪೂರಕವಾಗಿದೆ.
ಹಾಗೇ ಉದಯ್ ಲೀಲಾ ಅವರ ಛಾಯಾಗ್ರಹಣ ಬಹಳ ಚನ್ನಾಗಿ ಮೂಡಿಬಂದಿದ್ದು ಕಥೆಯ ಓಟಕ್ಕೆ ಸಾಥ್ ನೀಡಿದೆ.
ಚಿತ್ರದಲ್ಲಿ ರಂಜನಿ ರಾಘವನ್ ನಾಯಕಿ ನಟಿಯಾಗಿ ಒಬ್ಬ ಸೈಕಾಲಜಿಕಲ್ ಡಾಕ್ಟರ್ ಆಗಿ ತಮ್ಮ ವಿಭಿನ್ನ ಅಭಿನಯದಿಂದ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುವ ಜೊತೆಗೆ ತಮ್ಮ ಪಾತ್ರಕ್ಕೆ 100% ನ್ಯಾಯ ಒದಗಿಸಿದ್ದಾರೆ.
ಚಿತ್ರವನ್ನು ಶೃಂಗೇರಿ, ಚಿಕ್ಕಮಗಳೂರು, ಕೊಪ್ಪ ಹಾಗೂ ಹೊರನಾಡು ಸುತ್ತಮುತ್ತ ಚಿತ್ರೀಕರಿಸಿದ್ದಾರೆ.
ನಿರ್ಮಾಪಕರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಲು ಚನ್ನಾಗಿ ಹಣ ಸುರಿದಿದ್ದಾರೆ ಚಿತ್ರದ ಮೊದಲ ದೃಶ್ಯದಿಂದ ಹಿಡಿದು ಚಿತ್ರಮಂದಿರದ ಮುಂದೆ ಚಿತ್ರರಂಗದ ಒಳಿತಿಗಾಗಿ ಹಾಗೂ ತಮ್ಮ ಸಿನಿಮಾದ ಯಶಸ್ಸಿಗಾಗಿ ಹೋಮ ಮಾಡುವ ವರೆಗೂ ಹಣವನ್ನು ಹರಿಸಿದ್ದಾರೆ. ಇಂತಹ ನಿರ್ಮಾಪಕರ ಹಾಗೂ ಚಿತ್ರ ತಂಡದ ಶ್ರಮಕ್ಕೆ ನ್ಯಾಯ ಒದಗಿಸಬೇಕಾದದ್ದು ಪ್ರೇಕ್ಷಕರು.

ಜನರ ಸಾವು ಹಾಗೂ ನಾಪತ್ತೆ ಹೇಗಾಯ್ತು,
ಆಂತೋಣಿ ಗೆಸ್ಟ್ ಹೌಸ್ ನಲ್ಲಿ ನಡೆವ ನಿಗೂಢ ಸಾವುಗಳಿಗೆ ಕಾರಣ ಯರು, ಇದು ಕೊಲೆಯೋ, ದೆವ್ವಗಳಿಂದ ಆದ ಸಾವುಗಳಾ, ಸೈಕಲಾಜಿಕಲ್ ನಿಂದ ಆದ ಸಾವುಗಳಾ ಅಥವಾ ಆತ್ಮಹತ್ಯೆಯೋ ಎನ್ನುವ ನಿಗೂಡತೆಯ ಥ್ರಿಲ್ಲರ್ ಅನ್ನು ಅನುಭಿಸಲು ಪ್ರೇಕ್ಷಕರು ಚಿತ್ರ ನೋಡಬೇಕಾಗುತ್ತದೆ.