Kaala Pathar Kannada movie review. ಕಾಲಾಪತ್ಥರ್ ಚಿತ್ರ ವಿಮರ್ಶೆ. ಮಾನಸಿಕ ತುಮುಲಗಳ ಕಪ್ಪುಶಿಲೆ

ಚಿತ್ರ: ಕಾಲಾಪತ್ಥರ್
ನಿರ್ಮಾಣ: ಭುವನ್ ಮೂವಿಸ್  ನಿರ್ಮಾಪಕರು –  ಸುರೇಶ್ , ನಾಗರಾಜ್
ನಿರ್ದೇಶನ: ವಿಕ್ಕಿ ವರುಣ್
ಸಂಗೀತ – ಅನೂಪ್ ಸೀಳಿನ್
ಛಾಯಾಗ್ರಹಣ – ಸಂದೀಪ್ ಕುಮಾರ್.
ಸಂಕಲನ – ದೀಪು ಎಸ್. ಕುಮಾರ್
ತಾರಾಗಣ: ನಾಗಾಭರಣ, ವಿಕ್ಕಿ ವರುಣ್, ಧನ್ಯ ರಾಮಕುಮಾರ್, ರಾಜೇಶ್ ನಟರಂಗ, ಅಚ್ಯುತ್ ಕುಮಾರ್ ಮುಂತಾದವರು.
ರೇಟಿಂಗ್ – 3/5.

ಮಾನಸಿಕ ತುಮುಲಗಳ ಕಪ್ಪುಶಿಲೆ
ಕಾಲಾಪತ್ಥರ್ ಅಂದರೆ ಕಪ್ಪುಶಿಲೆ ಎಂದರ್ಥ ಆದರೆ ಇದರ ಒಳಾರ್ಥಗಳು ಬೇರೆಯದ್ದೇ ಇದೆ.

ಅದೊಂದು ಪುಟ್ಟ ಹಳ್ಳಿ, ಆ ಹಳ್ಳಿಯ ಯುವಕ ಕೆಲಸಕ್ಕಾಗಿ ಸೇರೋದು ದೇಶ ಸೇವೆ ಮಾಡಲು ಸೈನ್ಯ ಸೇರುತ್ತಾನೆ.
ಸೈನ್ಯದಲ್ಲಿ ದುಷ್ಟರ ಸದೆ ಬಡಿದು ಹೋರಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಅದು ದೇಶವೇ ಮೆಚ್ಚುವಂತ ಶ್ಲಾಘನೀಯ ಕಾರ್ಯ, ದೇಶವೇ ಹೊಗಳುವಾಗ ಇನ್ನು ಆ ಊರಿನ ಜನ ಕೇಳಬೇಕೆ. ತೀಟೆ ಶಾಮರ TRP ಗಾಗಿ ಊರಿನ ಮುಖಂಡನ ಮುಖದ ಮುಂದಿದ್ದ ಮೈಕುಗಳ ಮುಲಾಜಿಗೆ ಊರ ದೇವಾಲಯದ ಮುಂದೆ ಯೋಧನ ಪುತ್ತಳಿ ಅನಾವರಣ ಮಾಡುವುದಾಗಿ ಮಾತು ಕೊಡುತ್ತಾರೆ. ಅಲ್ಲಿಗೆ ಚಾನಲ್ ನವರು ಅವತ್ತಿನ TRP ಕೋಟಾ ಮುಗಿಸಿಕೊಂಡರೆ, ಮುಂದೆ ಆ ಊರಿನಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತದೆ ಎನ್ನುವುದೇ ಚಿತ್ರದ ಅಸಲಿ ಕಥೆ.


ಇಲ್ಲಿ ನಿರ್ದೇಶಕರೇ ನಾಯಕ ನಟ ಆಗಿರುವುದರಿಂದ ಪುತ್ತಳಿ ಕಾಯುವ ಕಾಯಕವನ್ನು ಚನ್ನಾಗಿ ಸೃಷ್ಟಿಸಿಕೊಂಡಿದ್ದಾರೆ. ಚಿತ್ರದ ಕಥೆ ಯೋಧನ ಪುತ್ತಳಿ ಸುತ್ತ ಸುತ್ತುವುದರಿಂದ, ನಾಯಕ ನಾಯಕಿಗೆ ಮರ ಸುತ್ತುವ ಕಾರ್ಯ ಹೆಚ್ಚಾಗಿಲ್ಲ.

ಈ ಚಿತ್ರದ ಮುಖ್ಯ ಜೀವಾಳ ಕನ್ನಡಿಗರ ಆರಾಧ್ಯದೈವ ಡಾ,, ರಾಜಕುಮಾರ್. ಹೌದು ನಾಯಕ ನಟ ಚಿಕ್ಕಂದಿನಿಂದ ರಾಜಕುಮಾರ್ ಅಭಿಮಾನಿ, ಹಲವಾರು ಸನ್ನಿವೇಶಗಳಲ್ಲಿ ರಾಜಣ್ಣನವರ ಜೊತೆ ನಾಯಕ ಮಾನಸಿಕವಾಗಿ ಅವರೊಂದಿಗೆ ಮಾತಾಡುವಂತ ಭಾವನಾತ್ಮಕ ಸನ್ನಿವೇಶಗಳನ್ನು ಚಿತ್ರಿಸುವ ಮೂಲಕ ರಾಜಕುಮಾರ್ ರವರನ್ನು ಮತ್ತೆ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು. ಇದು ರಾಜ್ ಅಭಿಮಾನಿಗಳಿಗೆ ಖುಷಿ ತರುವಂತ ವಿಷಯ.

ನಿರ್ದೇಶಕ ದುನಿಯಾ ಸೂರಿ ಗರಡಿಯಲ್ಲಿ ತಯಾರಾದ ವಿಕ್ಕಿ ನಾಯಕನಾಗಿ ಕೆಂಡದಲ್ಲಿ ಅರಳಿದ ಸಂಪಿಗೆ, ಈಗ ತಾನೆ ಸ್ವತಃ ನಿರ್ದೇಶಕನಾಗಿ ಹೊರ ಹೊಮ್ಮಿರುವ ಕಾಲಾಪತ್ಥರ್. ಈತ ತನ್ನ ಮೊದಲ ಪ್ರಯತ್ನದಲ್ಲಿ ನಿರ್ದೇಶಿಸಿರುವ ಕಪ್ಪು ಶಿಲೆಯ ಚಿತ್ರ ಇಂದು ತೆರೆ ಕಂಡಿದೆ. ಚಿತ್ರದಲ್ಲಿ ಮೊದಲೇ ಹೇಳಿದಂತೆ ಒಂದಷ್ಟು ಒಳ ಅರ್ಥಗಳಿವೆ, ಒಂದಷ್ಟು ಪುರುಷಾರ್ಥಗಳು, ಒಂದಷ್ಟು ಅನರ್ಥಗಳು ಪ್ರೇಕ್ಷಕನ ಕಾಡುತ್ತವೆ.
ಇಲ್ಲಿ ಸೈನಿಕ ಗಡಿಯಲ್ಲಿ ದೇಶ ಕಾಯುವುದಕ್ಕಿಂತ ಊರೊಳಗೆ ತನ್ನ ಪುತ್ತಳಿಗೆ ತಾನೆ ರಕ್ಷಣೆ ಒದಗಿಸುವ ಕಾರ್ಯದಿಂದ ಹೈರಾಣಾಗುತ್ತಾನೆ. ತನ್ನ ಊರಿನ ಜನ ಕುಡಿಯಲು ನೀರಿಲ್ಲದೇ ಕಷ್ಟಪಡುವುದನ್ನು ನೋಡಿ ಕೊರಗಿ ಕೃಷವಾಗುತ್ತಾನೆ ಅದು ಯಾವ ಪರಿ ಎಂದರೆ ಚಿಕ್ಕಂದಿನಿಂದ ತನ್ನನ್ನೇ ಪ್ರೀತಿಸಿ ತನ್ನನ್ನೇ ಮದುವೆ ಆಗಬೇಕೆಂದು ಪಣ ತೊಟ್ಟಿದ್ದ ಹುಡುಗಿ ಬೇರೆಯವರ ಕೈಗೆ ಉಂಗುರ ತೊಡೆಸಿದರು ಅದರ ಬಗ್ಗೆ ಅರಿವು ಇರುವುದಿಲ್ಲ ಅಷ್ಟರ ಮಟ್ಟಿಗೆ ಯೋದ ತನ್ನ ಕರ್ತವ್ಯದಲ್ಲಿ ಮುಳುಗಿ ಹೋಗಿರುತ್ತಾನೆ.

ಇನ್ನೂ ನಾಯಕಿ ಧನ್ಯಾ ರಾಮ್  ಸ್ಕೂಲ್ ಟೀಚರ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಇಲ್ಲಿ ಅಷ್ಟೇನು ನಾಯಕಿಗೆ ವಿಶೇಷ ಪ್ರಾಮುಖ್ಯತೆ ಇಲ್ಲ, ಎಲ್ಲಾ ಚಿತ್ರಗಳಂತೆ ನಾಯಕಿ ನಾಯಕನೊಂದಿಗೆ ಪ್ರೇಮ ಪ್ರಸಂಗಗಳನ್ನು ಬಿಟ್ಟರೆ  ನಾಯಕಿಗೆ ಹೆಚ್ಚು ಕೆಲಸವಿಲ್ಲ. ತಾನು ಪ್ರೀತಿಸಿದ ಹುಡುಗ ತನ್ನ ಬಗ್ಗೆ ಹೆಚ್ಚು ಗಮನ ಕೊಡದೇ ಹೋದರೆ ಏನಾಗಬಹುದು ಎನ್ನುವುದನ್ನು ನಿರ್ದೇಶಕರು ತೋರಿಸಿದ್ದಾರೆ.
ಧನ್ಯಾ ರಾಮ್ ಮೊದಲ ಬಾರಿಗೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ಸಾಧಾರಣವಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ. ಜೊತೆಗೆ ಅವರ ತಾತ ರಾಜಕುಮಾರ್ ಕೂಡ ಚಿತ್ರದ ಒಂದು ಪಾತ್ರವಾಗಿರುವುದರಿಂದ ಧನ್ಯಾರವರಿಗೆ ಖುಷಿ ವಿಚಾರ ಎನ್ನಬಹುದು.

ಚಿತ್ರದ ಮತ್ತೊಂದು ಪ್ರಮುಖ ಪಾತ್ರವೆಂದರೆ ನಾಗಾಭರಣ ರವರ ಊರ ಗೌಡನ ಪಾತ್ರ ನಟ, ನಿರ್ದೇಶಕರಾದ ನಾಗಾಭರಣ ತುಂಬಾ ದಿನಗಳ ನಂತರ ಬಣ್ಣ ಹಚ್ಚಿ ಚನ್ನಾಗಿ ಅಭಿನಯಿಸಿದ್ದಾರೆ, ಶಾಸಕನ ಪಾತ್ರದಲ್ಲಿ ರಾಜೇಶ್ ನಟರಂಗ ಅಭಿನಯಿಸಿದ್ದಾರೆ.
ಮುಖ್ಯವಾಗಿ ಒಬ್ಬ ಮನುಷ್ಯನಿಗೆ ರಾತ್ರೋ ರಾತ್ರಿ ಗೌರವ, ಹೆಸರು, ಕೀರ್ತಿ ಬಂದರೆ ಅವನ ಮಾನಸಿಕ ಸ್ಥಿತಿ ಏನಾಗುತ್ತದೆ, ಅದರಿಂದ ಹೊರಗೆ ಬರಲು ಆತ ಏನೆಲ್ಲಾ ಬವಣೆಗಳನ್ನು ಎದುರಿಸ ಬೇಕಾಗುತ್ತದೆ ಎನ್ನುವುದನ್ನು  ನಿರ್ದೇಶಕ ವಿಕ್ಕಿ ವರುಣ್ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ಚಿತ್ರದಲ್ಲಿ  ಸಂಗೀತದ ಜವಾಬ್ದರಿಯನ್ನು ಹೊತ್ತಿರುವ ಅನೂಪ್ ಸೀಳಿನ್ ಕಥೆಗೆ ತಕ್ಕಂತೆ ಮ್ಯೂಸಿಕ್‌ ಕಾರ್ಯಕ್ಕೆ ನ್ಯಾಯ ಒದಗಿಸಿದ್ದಾರೆ.

ಸಂದೀಪ್ ಕುಮಾರ್  ಛಾಯಾಗ್ರಹಣ ಹಳ್ಳಿಯ ಸುತ್ತಾ ಮುತ್ತಾ ನಡೆಯುವುದರಿಂದ ಹೆಚ್ಚಾಗಿ ನಿರೀಕ್ಷಣೆ ಮಾಡುವಂತಿಲ್ಲ ಆದರೂ ಕಥೆಯ ಸುತ್ತಳತೆಯಲ್ಲಿ ಸರಿಯಾದ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ಹಾಗೆ ಯುದ್ಧ ಭೂಮಿಯ ಸನ್ನಿವೇಶಗಳನ್ನು ಆಕರ್ಷಕವಾಗಿ ಚಿತ್ರೀಕರಿಸಿದ್ದಾರೆ.
ದೀಪು ಎಸ್. ರವರ ಸಂಕಲನ ಕಾರ್ಯ ಕೂಡ ಅಚ್ಚುಕಟ್ಟಾಗಿದೆ ಆದರೆ ಕೆಲವು ಅನಾವಶ್ಯಕ ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು.
ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಒಬ್ಬ ವೀರ ಯೋಧನ ಕಥೆಯ ಕಾಲಾಪತ್ಥರ್ ಚಿತ್ರವನ್ನು ಯಾವುದೇ ಮುಜುಗರ ವಿಲ್ಲದೆ ನೋಡಬಹುದು. ಮನರಂಜನಾತ್ಮಕವಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor