Kaiva movie 2nd week running. ಎರಡನೇ ವಾರಕ್ಕೆ ಕಾಲಿಟ್ಟ ಕೈವ
ರಾಜ್ಯದಾದ್ಯಂತ ಚಿತ್ರ ಮಂದಿರಗಳಲ್ಲಿ ಎರಡನೇ ವಾರಕ್ಕೆ ಕೈವ ಚಿತ್ರ ಮುಂದುವರೆದಿದೆ. ಮೊದಲ ಬಾರಿಗೆ ಜಯತೀರ್ಥ ನಿರ್ದೇಶನದಲ್ಲಿ ಒಂದು ಮಾಸ್ ಮತ್ತು ಲವ್ ಸ್ಟೋರಿ ಚಿತ್ರ ಮೂಡಿ ಬಂದಿದ್ದು ಇದು ರೆಟ್ರೋ ಪ್ರೇಮ ಹಾಗೂ ರಿವೇಂಜ್ ಸತ್ಯಕಥೆಯಾದಾರಿದ ಚಿತ್ರವಾಗಿದ್ದು ಕಳೆದ ವಾರ ಬೆಳ್ಳಿತೆರೆಯ ಮೇಲೆ ಅಬ್ಬರಿಸಿದೆ. ಧನ್ವೀರ್ ಹಾಗೂ ಮೇಘಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಕೈವ ನಾಡಿನ ಹಲವಾರು ಚಿತ್ರ ಮಂದಿರಗಳಲ್ಲಿ ಈ ವಾರವೂ ಕೂಡ ಮುಂದುವರೆದಿದೆ.