Kagada movie review. ಇದು ಎರಡು ಧರ್ಮಗಳ ನಡುವೆ ನಡೆಯುವ ಕಾಗದದ ಮೇಲಿನ  ಪ್ರೇಮ ಕಥೆಯ ವಿಮರ್ಶೆ.

ಕಗದ ಚಿತ್ರದ ವಿಮರ್ಶೆ

ಚಿತ್ರ: ಕಾಗದ
ನಿರ್ಮಾಣ: ಅರುಣ್ ಕುಮಾರ್ ಆಂಜನೇಯ
ನಿರ್ದೇಶನ:  – ರಂಜಿತ್‍
ತಾರಾಗಣ:  -ಆದಿತ್ಯ, ಅಂಕಿತ ಜಯರಾಂ, ನೇಹಾ ಪಾಟೀಲ್, ಬಲ ರಾಜವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವ ಮಂಜು ಮುಂತಾದವರು

RATING – 3/5.

ಇದು ಎರಡು ಧರ್ಮಗಳ ನಡುವೆ ನಡೆಯುವ ಕಾಗದದ ಮೇಲಿನ  ಪ್ರೇಮ ಕಥೆ.
ಪ್ರೇಮ ಕಥೆಗಳು ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ನಿರ್ಮಾಣವಾಗುತ್ತಲೇ ಇವೆ. ಪ್ರೀತಿ ಪ್ರೇಮ ಸಿನಿಮಾಗಳ ಮೂಲ ಸರಕು ಗಳಾಗಿವೆ ಎನ್ನಬಹುದು. ಅದರಲ್ಲೂ ಎರಡು ಧರ್ಮಗಳ, ಎರಡು ಸಮುದಾಯಗಳ ನಡುವಿನ ತಿಕ್ಕಾಟದ ನಡುವೆ ಅರಳುವ ಪ್ರೇಮದ ಬೆಂಕಿಗೆ ಆಹುತಿಯಾಗುವುದು ಕೊನೆಗೆ ಪ್ರೇಮಿಗಳೇ ಅನ್ನೋದಕ್ಕೆ ಈ ವಾರ ತೆರೆ ಕಂಡ “ಕಾಗದ” ಚಿತ್ರ ಮತ್ತೊಂದು ನಿದರ್ಶನ.

ಈ ಪ್ರೇಮ ಕಥೆಯನ್ನು  ನಿರ್ದೇಶಕರಾದ  ರಂಜಿತ್ ಸ್ವಲ್ಪ ವಿಭಿನ್ನವಾಗಿ  ನಿರೂಪಣೆ ಮಾಡಿದ್ದಾರೆ. ಹಾಗೆಯೇ ವಿಷಯ ಹಳೆಯದಾದರೂ ನಿರ್ದೇಶಕರು ಕಥೆಯ ಮೇಲೆ ಹಿಡಿತ ಸಾಧಿಸಿದ್ದಾರೆ.  ಸಹಜವಾಗಿ ಎರಡು ಧರ್ಮದ , ಎರಡು ಜಾತಿಗಳ ಪ್ರೇಮಿಗಳು ಒಂದಾದರೆ ಸಮಾಜದ ವಿರೋಧ ಎದುರಾಗುತ್ತದೆ. ಅದು ವಾಸ್ತವ ಕೂಡ ಹೌದು ಆದರೆ ಅವೆಲ್ಲವನ್ನೂ ಮೀರಿ  ಚಿತ್ರವು ಮನ ತಟ್ಟುತ್ತದೆ.


ಎದೆಯೊಳಗಿನ ಧರ್ಮದ ಕಿಚ್ಚು ಮಾನವೀಯತೆಯಿಂದ ತಣ್ಣಗಾಗುತ್ತದೆ. ಕೋಮು ದಳ್ಳುರಿ ಎರಡು ಎಳೆಯ ಮನಸ್ಸುಗಳ ಪ್ರಬುದ್ಧತೆಗೆ ತಲೆ ತಗ್ಗಿಸುವಂತೆ ನಿರ್ದೇಶಕ ರಂಜಿತ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.
ಸಂಭವಾಮಿ ಯುಗೇ ಯುಗೇ ಎನ್ನುವುದು ಕೇವಲ ಹಿಂದೂ ಧರ್ಮಕ್ಕಷ್ಟೇ ಸೀಮಿತವೇ ನಾವು ಮುಸಲ್ಮಾನರು ಅಂತ ಶ್ರೀಕೃಷ್ಣ ನಮ್ಮನ್ನು ಕಾಪಾಡಲು ಬರುವುದಿಲ್ಲವೇ ಎನ್ನುವ ಕೈಮ್ಯಾಕ್ಸ್ ದೃಶ್ಯ ಮನ ಕಲಕುವಂತಿದೆ.

ಹಿಂದೂ ಹುಡುಗ ಮುಸಲ್ಮಾನರ ಹುಡುಗಿಯ ಮದ್ಯೆ ನಡೆಯುವ ಕಾಗದದಿಂದಲೇ ಶುರುವಾಗಿ ಕಾಗದದಿಂದಲೇ ಮುಗಿಯುವ ಪ್ರೇಮ ಕಥೆಗೆ ಭಗವದ್ಗೀತೆ ಮತ್ತು ಕುರಾನ್ ಸಾಕ್ಷಿಯಾಗಿವೆ.

ಚಿತ್ರದ ಮೊದಲಾರ್ಧ ಹಳ್ಳಿಯ ಪರಿಸರದ ಜೊತೆಯಲ್ಲಿ ಕಥೆಯ  ಪಾತ್ರಗಳ ಪರಿಚಯ ಮಾಡಿಕೊಡುವುದರಲ್ಲಿ ಮುಗಿದು ಹೋಗುತ್ತೆ.

ದ್ವಿತೀಯಾರ್ಧದಲ್ಲಿ. ನಾಯಕ ಶಿವು ಮತ್ತು ನಾಯಕಿ ಆಯೇಷಾ ಪ್ರೀತಿಯ ಬಗ್ಗೆ ಊರಿನವರಿಗೆ ಗೊತ್ತಾಗುತ್ತದೋ ಅಲ್ಲಿಂದ ಚಿತ್ರದ ಕಥೆಯ ವೇಗ, ಮತ್ತು ಅದರ ಅರ್ಥ ಬೇರೆ ರೀತಿಯಲ್ಲಿ ತಿರುಗುತ್ತದೆ. ಹಿಂದೂ ಹುಡುಗ ಕುರಾನ್, ಮುಸಲ್ಮಾನರ ಹುಡುಗಿ ಭಗವದ್ಗೀತೆ ಓದುವುದು ವಿಭಿನ್ನವಾಗಿ ಪ್ರೇಕ್ಷಕರು ಉಬ್ಬೇರಿಸುವಂತದ್ದು.

ಇದು 2005ರಲ್ಲಿ ನಡೆವ ಪ್ರೇಮಕಥೆ.  ಮೊಬೈಲ್ ಇಲ್ಲದ ಕಾಲಘಟ್ದದ ಕಥೆಗೆ ಕಾಗದವೇ ಸಾರಥ್ಯ ವಹಿಸಿದೆ.

ಮಲೆನಾಡಿನ ಭೈರವಕೋಟೆ ಎಂಬ ಊರಿನಲ್ಲಿ ಶಿವು (ಆದಿತ್ಯ) ಎಂಬ ಬುದ್ಧಿವಂತ ಹುಡುಗನನ್ನು. ಡಾಕ್ಟರ್‍ ಮಾಡಿಸಬೇಕು ಎಂದು ಅವನ ತಂದೆ-ತಾಯಿ ಊರಿನನವರೆಲ್ಲರ ಆಸೆ. ಹೀಗಿರುವಾಗ. ಆ ಊರಿಗೆ ಪೈಲೆಟ್ ಆಗಬೇಕೆಂಬ ಆಸೆಯ ಕಥಾ ನಾಯಕಿ ಆಯೇಷಾ (ಅಂಕಿತ ಜಯರಾಂ) ಬರುತ್ತಾಳೆ.
ಶಿವು ಓದುತ್ತಿರುವ ಕಾಲೇಜಿಗೇ ಸೇರುತ್ತಾಳೆ.
ಕಾಲ ಕ್ರಮೇಣ ಸಹಜವಾಗಿ ಶಿವು ಮತ್ತು ಆಯೇಷಾ ನಡುವೆ ಪ್ರೇಮಾಂಕುರವಾಗುತ್ತದೆ.

ಅದೇ ಕಾಲಕ್ಕೆ ಮತಾಂದ, ಮತ್ತು ಧರ್ಮಾಂದರ ಆಗಮನವಾಗುತ್ತದೆ.
ಆಣ್ಣ ತಮ್ಮಂದಿರಂತಿದ್ದ ಎರಡು ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ಹುನ್ನಾರ ನಡೆಸುತ್ತಾರೆ.

ಶಾಂತವಾಗಿದ್ದ ಆ ಊರಿನಲ್ಲಿ ಕ್ರಮೇಣ ಅಶಾಂತಿ ಹೆಚ್ಚುತ್ತದೆ. ಅದಕ್ಕೆ ಶಿವು ಮತ್ತು ಆಯೇಷಾ ಪ್ರೇಮ ಉರಿವ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ.
ಚಿತ್ರದ ಸಂಭಾಷಣೆ ಪ್ರೇಮಿಗಳ ಪ್ರಬುದ್ಧತೆಯನ್ನು ಕಾಪಾಡಿ ಕೊಂಡದೆ.

  ಇದು ಎರಡು ಧರ್ಮದ ನಡುವಿನ ಪ್ರೇಮ ಮತ್ತು ದಳ್ಳುರಿಯ ಕಥೆಯಾದರೂ  ಯಾರ ಮನಸ್ಸಿಗೂ ನೋವಾಗದ ಹಾಗೆ ಅಷ್ಟೇ ಸೂಕ್ಷ್ಮವಾಗಿ ತೋರಿಸಿರುವುದು ವಿಶೇಷ.

ಧರ್ಮ ಗ್ರಂಥಗಳಲ್ಲಿ ಇಲ್ಲದ ವಿಷಯಗಳನ್ನು ಬಲವಂತವಾಗಿ ಹೇಗೆ ಸಾಮಾನ್ಯರ ಮೇಲೆ ಹೇರಲಾಗುತ್ತಿದೆ.
ಅದರಿಂದ ಸಮಾಜದ ಶಾಂತಿ ಹೇಗೆ ಹಾಳಾಗುತ್ತಿದೆ,
ಮಸೀದಿ, ಮಂದಿರಗಳ ಹೆಸರಲ್ಲಿ ದುಷ್ಟತನಗಳು ಹೇಗೆ ರಾರಾಜಿಸುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.


ಹೊಸ ಕಲಾವಿದರ ನೈಜ ಮತ್ತು   ನಾಯಕ-ನಾಯಕಿಯ ಮುಗ್ಧ ಅಭಿನಯ, ಇಡೀ ಚಿತ್ರವನ್ನು ಕಟ್ಟಿಕೊಟ್ಟಿರುವ ರೀತಿ ಚನ್ನಾಗಿದೆ.

ನಟಶಿವು ಮತ್ತು ನಟಿ ಆಯೇಷಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಮೊದಲ ಚಿತ್ರದಲ್ಲೇ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ನಟಿಸಿದ್ದಾರೆ.
ಇನ್ನು ಆದಿತ್ಯ ಮತ್ತು ಅಂಕಿತಾ ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ನಟಿ ನೇಹಾ ಪಾಟೀಲ್ ಮೊದಲ ಬಾರಿಗೆ ಮೆಚ್ಯೂರಿಟಿಯಾದ ಪಾತ್ರದಲ್ಲಿ ಅದರಲ್ಲೂ ಒಬ್ಬ ವಿದ್ಯಾವಂತ ಮುಸ್ಲಿಂ ಹುಡುಗಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಇನ್ನೂ ಚಿತ್ರದಲ್ಲಿ ಮಠ ಕೊಪ್ಫಳ, ನೀನಾಸಂ ಅಶ್ವತ್ಥ್, ಶಿವಮಂಜು ಮುಂತಾದ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣ. ಚಿತ್ರಕ್ಕೆ ಬೆನ್ನೆಲುಬಾಗಿದೆ ಹಾಗೆ ಪ್ರದೀಪ್‍ ವರ್ಮ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಉಸಿರಾಗಿದೆ ಎನ್ನಬಹುದು.


ಸಿನಿಮಾ ಅಂದ ಮೇಲೆ ಸಣ್ಣ ಪುಟ್ಠ ನ್ಯೂನತೆಗಳಿರುವುದು ಸಹಜ ಆದರೆ ಚಿತ್ರವನ್ನು ಯಾವುದೇ ಮುಜುಗರವಿಲ್ಲದೇ ನೋಡಬಹುದಾಗಿದೆ.

ಒಂದೊಳ್ಳೆಯ ಚಿತ್ರವನ್ನು ಪ್ರೇಕ್ಷಕರು ಆಪ್ಪಿಕೊಳ್ಳಬೇಕಿದೆ.
ಎಲ್ಲಾ ಧರ್ಮದವರು ತಮ್ಮೊಳಗಿನ ಗೊಂದಲಕ್ಕೆ ಚಿತ್ರದಲ್ಲಿ ಹಲವಾರು ಉತ್ತರಗಳಿವೆ.
ನಿರ್ಮಾಪಕರಾದ ಅರುಣ ಆಂಜನೇಯ
ಈ ಸಿನಿಮಾ ನಿರ್ಮಾಣಕ್ಕೆ ಕೈಹಾಕಿ ಒಳ್ಳೆಯ ಚಿತ್ರವನ್ನು ನೀಡಿದ್ದಾರೆ  ಆದರೆ ನಿರ್ಮಾಪಕರನ್ನು ಗೆಲ್ಲಿಸುವ ಜವಾಬ್ದಾರಿ ಪ್ರೇಕ್ಷಕರದ್ದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor