Just pass movie song release by Vishveshwar That on 18th. January ಜಸ್ಟ್ ಪಾಸ್ ಸಿನಿಮಾದ ಸಾಂಗ್ 18ನೇ ತಾರೀಕುವಿಶ್ವೇಶ್ವರ ಭಟ್ ಬಿಡುಗಡೆ ಮಾಡಲಿದ್ದಾರೆ
ಜಸ್ಟ್ ಪಾಸ್ ಆದವರೊಂದಿಗೆ ಪರಿಶ್ರಮದ ಸಾಧಕ,
ಪ್ರದೀಪ್ ಈಶ್ವರ್ ಅನ್ನೋ ನಾಯಕ
ಪ್ರದೀಪ್ ಈಶ್ವರ್ ರಾಜಕಾರಣದಲ್ಲಿ ತಮ್ಮದೇ ಮಾತಿನ ಧಾಟಿಯಿಂದ ಚಿರಪರಿಚಿತರು
ಚಿಕ್ಕ ಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕರು
ಪರಿಶ್ರಮ ಅಕಾಡೆಮಿ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸಾಧನೆಯ ಮೆಟ್ಟಿಲಾಗಿರುವ ಪ್ರದೀಪ್ ಈಶ್ವರ್ ರವರು ರಾಯ್ಸ್ ಎಂಟರ್ಟ್ರೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೆ ವಿ ಶಶಿಧರ್ ನಿರ್ಮಾಣದ ಜಸ್ಟ್ ಪಾಸ್ ಸಿನಿಮಾದ ವಿಡಿಯೋ ಸಾಂಗ್ ಒಂದನ್ನ 18ನೇ ತಾರೀಕು ವಿಶ್ವವಾಣಿಯ ವಿಶ್ವೇಶ್ವರ ಭಟ್ ರವರ ಜೊತೆಗೂಡಿ ಬಿಡುಗಡೆ ಮಾಡಲಿದ್ದಾರೆ

ಜಸ್ಟ್ ಪಾಸ್ ಆದವರಿಗೆ ಕಾಲೇಜ್ ಒಂದು ಓಪನ್ ಆಗಿ ಎಜುಕೇಶನ್ ನೀಡುವ ಕಥೆ ಎಂಬುವುದನ್ನ ಕೇಳಿದ ಕೂಡಲೇ ಈ ಸಿನಿಮಾಗೆ ನನ್ನ ಸಂಪೂರ್ಣ ಸಹಕಾರ ಇರುತ್ತೆ ಎಂದು ತುಂಬಾ ಸಂತೋಷದಿಂದ ಒಪ್ಪಿ ಕೊಂಡರು ಎಂದು ನಿರ್ದೇಶಕ ಕೆ ಎಂ ರಘು ತಿಳಿಸಿದರು
ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಹಾಗು ಒಂದು ವಿಡಿಯೋ ಸಾಂಗ್ ಮೂಲಕ ಈ ವರ್ಷದ ಒಂದು ಯಶಸ್ವಿ ಸಿನಿಮಾ ಆಗುವ ಎಲ್ಲಾ ಸೂಚನೆ ನೀಡಿರುವ
ಚಿತ್ರ ತಂಡಕ್ಕೆ ಪ್ರದೀಪ್ ಈಶ್ವರ್ ಬೆಂಬಲದಿಂದ ಮತ್ತಷ್ಟು ಸಂತೋಷ ವಾಗಿದೆ,

ಈ ಹಾಡನ್ನ ಕವಿರಾಜ್ ಸಾಹಿತ್ಯ ಬರೆದಿದ್ದು ಹರ್ಷವರ್ದನ್ ರಾಜ್ ಸಂಗೀತ, ಭೂಷಣ್ ಕೊರಿಯೋಗ್ರಫಿ, ಸುಜಯ್ ಕುಮಾರ್ ಛಾಯಾಗ್ರಹಣ ಕೆ ಎಂ ಪ್ರಕಾಶ್ ಸಂಕಲನ
ಜಸ್ಟ್ ಪಾಸ್ ಹುಡುಗರ ಅದ್ಭುತ ಪರ್ಫಾಮ್ ಕಾಲೇಜ್ ನ ಯೂತ್ ಹುಡುಗರಿಗೆ ಅಚ್ಚುಮೆಚ್ಚು ಆಗೋದು ಖಂಡಿತ ಎನ್ನುತ್ತಿದೆ ಚಿತ್ರತಂಡ.

ಜಸ್ಟ್ ಪಾಸ್ ಸಿನಿಮಾ ತಾರಾಬಳಗದಲ್ಲಿ ಶ್ರೀ, ಪ್ರಣತಿ ರಂಗಾಯಣರಘು ಸಾಧು ಕೋಕಿಲ ಸುಚೇಂದ್ರ ಪ್ರಸಾದ್ ಪ್ರಕಾಶ್ ತುಮ್ಮಿನಾಡು, ದಾನಪ್ಪ,ದೀಪಕ್ ರೈ
ಜಿ ಜಿ, ಹೀಗೆ ಕಲಾವಿದರ ದಂಡೆ ಇದೇ ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ,