Jigar Kannada movie this week ready to release ಈ ವಾರ ತೆರೆಗೆ ಪ್ರವೀಣ್ ತೇಜ್ ಅಭಿನಯದ “ಜಿಗರ್”
ಈ ವಾರ ತೆರೆಗೆ ಪ್ರವೀಣ್ ತೇಜ್ ಅಭಿನಯದ “ಜಿಗರ್” .
ಯು.ಕೆ .ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿರುವ, ಸೂರಿ ಕುಂದರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ” ಜಿಗರ್” ಚಿತ್ರ ಈ ವಾರ (ಜುಲೈ 5) ರಂದು ರಾಜ್ಯಾದ್ಯಂತ ಬಿಡುಗಡೆಯಗುತ್ತಿದೆ.

ಈಗಾಗಲೇ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಜನಮನ ಗೆದ್ದಿದೆ. ಚಿತ್ರ ಕೂಡ ಯಶಸ್ವಿಯಾಗುವ ಭರವಸೆ ಚಿತ್ರತಂಡಕ್ಕಿದೆ. ಶಿವಸೇನ ಛಾಯಾಗ್ರಹಣ, ಜ್ಞಾನೇಶ್ ಮಠದ್ ಸಂಕಲನ, ಧನಂಜಯ ಬಿ ನೃತ್ಯ ನಿರ್ದೇಶನ ಹಾಗೂ ಚೇತನ್ ಡಿಸೋಜ ಅವರ ಸಾಹಸ ನಿರ್ದೇಶನವಿರುವ “ಜಿಗರ್” ಚಿತ್ರಕ್ಕೆ ಸುನೀಲ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಹಾಗೂ ಗಣೇಶ್ ಪರಶುರಾಮ್ ಹಾಡುಗಳನ್ನು ರಚಿಸಿದ್ದಾರೆ.

ಪ್ರವೀಣ್ ತೇಜ್ ಅವರಿಗೆ ನಾಯಕಿಯಾಗಿ ವಿಜಯಶ್ರೀ ನಟಿಸಿದ್ದಾರೆ. ವಿನಯಪ್ರಸಾದ್, ಯಶ್ವಂತ್ ಶೆಟ್ಟಿ , ಬಲರಾಜ್ ವಾಡಿ, ಭವ್ಯ ಪೂಜಾರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.