Javan poster released ಜವಾನ್’ ಚಿತ್ರದಲ್ಲಿನ ನಯನತಾರಾ ಪೋಸ್ಟರ್ ಬಿಡುಗಡೆ ಮಾಡಿದ ಶಾರುಖ್ ಖಾನ್

ಆಕೆ ಬಿರುಗಾಳಿಗೂ ಮುಂಚೆ ಬರುವ ಗುಡುಗು
‘ಜವಾನ್’ ಚಿತ್ರದಲ್ಲಿನ ನಯನತಾರಾ ಪೋಸ್ಟರ್ ಬಿಡುಗಡೆ ಮಾಡಿದ ಶಾರುಖ್ ಖಾನ್

ಇತ್ತೀಚೆಗಷ್ಟೇ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರದ ಪ್ರಿವ್ಯೂ, ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಈಗ ಚಿತ್ರದಲ್ಲಿನ ನಯನತಾರಾ ಅವರ ಪಾತ್ರದ ಪೋಸ್ಟರನ್ನು ನಾಯಕ ನಟ ಶಾರುಖ್ ಖಾನ್ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ಇಂಟರ್ನೆಟ್ ನಲ್ಲಿ ಸಾಕಷ್ಟು ವೈರಲ್ ಆಗಿದೆ.
ಪ್ರಿವ್ಯೂನಲ್ಲಿ ನಯನತಾರಾ ಅವರನ್ನು ಆಕ್ಷನ್ ದೃಶ್ಯಗಳಲ್ಲಿ ಪ್ರೇಕ್ಷಕರು ನೋಡಿ ಅವಕ್ಕಾಗಿದ್ದರು. ಆಕೆಯನ್ನು ಇನ್ನಷ್ಟು ನೋಡಬಯಸಿದ್ದರು. ಈಗ ನಯನತಾರಾ ಪೋಸ್ಟರ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ನಯನತಾರಾ ಅವರ ಪಾತ್ರವನ್ನು ‘ಬಿರುಗಾಳಿಗೂ ಮುಂಚೆ ಬರುವ ಗುಡುಗು’ ಎಂದು ಶಾರುಖ್ ಖಾನ್ ವರ್ಣಿಸಿದ್ದು, ಆಕೆಯ ಪಾತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿದೆ.
ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಮತ್ತು ನಯನತಾರಾ, ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಜವಾನ್’ನಲ್ಲಿ ನಯನತಾರಾ, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಇಡೀ ಚಿತ್ರದ ಹೈಲೈಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಸಾಕಷ್ಟು ಸಾಹಸಮಯ ದೃಶ್ಯಗಳಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಗೌರಿ ಖಾನ್ ನಿರ್ಮಿಸಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಗೌರವ್ ವರ್ಮ ಈ ಚಿತ್ರದ ಸಹನಿರ್ಮಾಪಕರು. ಸೆಪ್ಟೆಂಬರ್ 7ರಂದು ಈ ಚಿತ್ರವು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor