Janaka movie trailer and song released. “ಜನಕ ” ಟ್ರೈಲರ್ ಹಾಡು ಬಿಡುಗಡೆ,ತಂದೆ-ಮಗನ ಬಾಂಧವ್ಯದ ಕಥೆ….

” ಜನಕ ” ಟ್ರೈಲರ್ ಹಾಡು ಬಿಡುಗಡೆ,

ತಂದೆ-ಮಗನ ಬಾಂಧವ್ಯದ ಕಥೆ….

ಮಗನ ಕನಸಿಗೆ ತಾಯಿಯೇ ಬಂಡವಾಳ !

ತಂದೆ ಮಗನ ಸುತ್ತ ನಡೆಯೋ ಹೃದಯಂಗಮ ಕಥಾಹಂದರ ಹೊಂದಿರುವ ಚಿತ್ರ ‘ಜನಕ’ ಬಿಡುಗಡೆಗೆ ಸಿದ್ದವಾಗಿದೆ. ಮನು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜೊತೆಗೆ ಚಿತ್ರದ ನಾಯಕನಾಗೂ ಅಭಿನಯಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಎರಡು ಹಾಡುಗಳ ಪ್ರದರ್ಶನ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು.
ಓಂ‌ಶಕ್ತಿ ಕ್ರಿಯೇಶನ್ಸ್ ಲಾಂಛನದಲ್ಲಿ ನಾಯಕನ ತಾಯಿಯೂ ಆದ ಎ.ಪ್ರೇಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮನು ಹಾಗೂ ಅವರ ತಾಯಿ ಇಬ್ಬರೂ ಸಿನಿಮಾ ಪ್ರೇಮಿಗಳು.
ನನ್ನ ತಾಯಿಯ ಆಸೆಯಂತೆ ತಾನು ನಿರ್ದೇಶನ ಹಾಗೂ ನಟನೆ ಎರಡನ್ನೂ ನಿಭಾಯಿಸಿದ್ದೇನೆ ಎಂದು ನಾಯಕ ಮನು ಹೇಳಿದರು. ಕಳೆದ ಎರಡು ವರ್ಷಗಳ ಹಿಂದೆಯೇ ಈ ಚಿತ್ರದ ಕಥೆ ರೆಡಿ ಮಾಡಿಕೊಂಡು ಚಿತ್ರೀಕರಣಣ ಆರಂಭಿಸಿದೆವು. ಚಿತ್ರದಲ್ಲಿ ತಂದೆಗೆ ತನ್ನ ಮಗನನ್ನು ಒಬ್ಬ ಡಾಕ್ಟರ್ ಮಾಡಬೇಕೆಂಬ ಆಸೆ, ಅದಕ್ಕಾಗಿ ಮಗನನ್ನು ಮೆಡಿಕಲ್ ಓದಿಸುತ್ತಾನೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಹಳ್ಳಿಯಲ್ಲಿ ಮೊದಲ ನಾಯಕಿ ಇದ್ದರೆ, ನಾಯಕ ಕಾಲೇಜ್ ಓದುವಾಗ ಒಬ್ಬ ಹುಡುಗಿಯ ಜತೆ ಲವ್ವಾಗುತ್ತದೆ. ನಾಯಕ. ತಂದೆಯ ಆಸೆಯಂತೆ ಡಾಕ್ಟರ್ ಆಗ್ತಾನಾ ಇಲ್ವಾ ಅನ್ನೋದೇ ಜನಕ ಚಿತ್ರದ ಕಾನ್ಸೆಪ್ಟ್. ಚಿತ್ರದಲ್ಲಿ 5 ಹಾಡುಗಳಿದ್ದು, ರಾಘವ ಸುಭಾಷ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಫ್ಯಾಮಿಲಿ ಎಂಟರ್ ಟೈನರ್ ಜತೆಗೆ ಸಸ್ಪೆನ್ಸ್, ಆಕ್ಷನ್ ಕೂಡ ಚಿತ್ರದಲ್ಲಿದೆ.


ಹಂಪಿ, ಹೊಸಪೇಟೆ, ಮಲ್ಲಾಪುರ ಸುತ್ರ ಮುತ್ತ ಸುಮಾರು 50 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ ಎಂದರು. ಇನ್ನು ಈ ಚಿತ್ರದಲ್ಲಿ ರಕ್ಷಾ ಹಾಗೂ ಶಾಲಿನಿ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸುರೇಶ್ ಬಾಬು, ರಾಜಲಕ್ಷ್ಮಿ, ಆನಂದ್ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ.


ರಣಧೀರ ಅವರ. ಛಾಯಾಗ್ರಹಣ, ಕೌರವ್ ವೆಂಕಟೇಶ್ ಅವರ ಸಾಹಸ ಸಂಯೋಜನೆ, ಸಲಾಂ ವೀರೋಲಿ ಅವರ ಹಿನ್ನೆಲೆ ಸಂಗೀತವಿದೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಪ್ರಥಮಪ್ರತಿ ಸಿದ್ದವಾಗಿದ್ದು ಸದ್ಯದಲ್ಲೇ ಸೆನ್ಸಾರ್ ಮನೆಗೆ ತೆರಳಲಿದೆ. ಮುಂದಿನ ತಿಂಗಳ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor