jaji album song released by challenging star Darshan. ಜಾಜಿ ಆಲ್ಬಂ ಗೀತೆಗೆ ಚಾಲನೆ ನೀಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್
ಜಾಜಿ ಆಲ್ಬಂ ಗೀತೆಗೆ ಚಾಲನೆ ನೀಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಡಿ.ಬೀಟ್ಸ್ ಸಂಸ್ಥೆಯ ಮೂಲಕ ಈ ಆಲ್ಬಂ ಗೀತೆ ಹೊರ ಹೊಮ್ಮಿದ್ದು ಶೈಲಜ ನಾಗ್ ಹಾಗೂ ಹರಿಕೃಷ್ಣ ವೇದಿಕೆಯಲ್ಲಿ ಶುಭಕೋರಿದರು. ಭಜರಂಗಿ ಮೋಹನ್ ನೃತ್ಯ ನಿರ್ದೇಶನದಲ್ಲಿ ಹರ್ಶಿತ್ ಗೌಡ ಸಂಗೀತ ಹಾಗೂ ಸಾಹಿತ್ಯದಲ್ಲಿ ಗೀತೆ ಅದ್ಬುತವಾಗಿ ಹೊರ ಹೊಮ್ಮಿದೆ.

ಈ ವಿಭಿನ್ನ ಗೀತೆಗೆ ನಾಲ್ಕು ಶೈಲಿಯಲ್ಲಿ ಹೆಜ್ಜೆ ಹಾಕಿದ ಹೊಸ ಪ್ರತಿಭೆ ಜಾಜಿಗೆ ಶುಭಕೋರಿದ ಗಣ್ಯರ ಕಣ್ಣಲ್ಲಿ ಮೆಚ್ಚುಗೆಯ ಖುಷಿ ಎದ್ದು ಕಾಣುತ್ತಿತ್ತು. ತಾಯಿ ಮೊದಲ ಗುರು ಎಂಬಂತೆ ತಾಯಿ ಸುನೀತ ಹಾಗೂ ಪ್ರತೀ ಹೆಜ್ಜೆಗೂ ಸಾಥ್ ನೀಡಿದ ತಂದೆ ಮೋಹನ್ ರಾಜ್ ರವರ ಮಾರ್ಗ ದರ್ಶನದಲ್ಲಿ ಭರತನಾಟ್ಯ ಕಲಾವಿದೆಯಾಗಿ ಎರಡೂವರೆ ವರ್ಷ ಮಗುವಾಗಿದ್ದಾಗಲೇ ವೇದಿಕೆಯಲ್ಲಿ ನಾಟ್ಯಮಾಡಿ ಎನಿಸಿಕೊಂಡಿದ್ದ ಬಾಲೆ ಇಂದು ಒಬ್ಬ ಎಲ್ಲಾ ಶೈಲಿಯಲ್ಲಿ ಹೆಜ್ಜೆ ಹಾಕಬಲ್ಲ ಬಾಲೆಯಾಗಿ ಹೊರ ಹೊಮ್ಮಿ ತಾತ ರಾಜ್ಯೋತ್ಸವ ಪ್ರಶಸ್ತಿ ಭಾಜನರಾದ ಶ್ರೀ ಬಿ. ಬೋರೆಗೌಡರ ಮೊಮ್ಮಗಳಾಗಿ ಅವರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಜಾಜಿಯ ಹೆಜ್ಜೆಯ ಗೆಜ್ಜೆ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಲಿ ಎಂಬುದು ನಮ್ಮ ಆಶಯ.