“ಇಲ್ಲಿಂದ ಆರಂಭವಾಗಿದೆ” ಸೆಸ್ಪೆನ್ಸ್ ಹಾರರ್ ಚಿತ್ರದ ಹಾಡುಗಳ ಅನಾವರಣ
ಡಾ.ರಾಜ್‌ಕುಮಾರ್ ಅಭಿಮಾನಿಯಾದ ಟಾಲಿವುಡ್ ನಿರ್ಮಾಪಕ ಬಿ.ನರಸಿಂಹರೆಡ್ಡಿ ಅವರು ಕನ್ನಡದಲ್ಲಿ ಮೊದಲಬಾರಿ ’ಇಲ್ಲಿಂದ ಆರಂಭವಾಗಿದೆ’ ಸಿನಿಮಾಕ್ಕೆ ಕತೆ ಚಿತ್ರಕತೆ ಬರೆದು ನಿರ್ಮಾಣ ಮಾಡುವುದರ ಜೊತೆಗೆ ರಾಜ್‌ಕುಮಾರ್ ಹೆಸರಿನಲ್ಲಿ ಸಿಐಡಿ ಪಾತ್ರವನ್ನು ನಿಭಾಯಿಸಿದ್ದಾರೆ ಹಾಗೂ ಲಕ್ಷಣಚಪರ್ಲ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ.
ಇತ್ತೀಚೆಗೆ ಟ್ರೈಲರ್ ಮತ್ತು ಮೂರು ಹಾಡುಗಳನ್ನು ಮಾಧ್ಯಮದವರಿಗೆ ತೋರಿಸಲಾಯಿತು. ಎರಡು ಸ್ನೇಹಿತ ಕುಟುಂಬಗಳ ಮಧ್ಯೆ ಮಗ,ಮಗಳನ್ನು ತಂದುಕೊಡಬೇಕೆಂದು ನಿರ್ಣಯ ತೆಗೆದುಕೊಂಡಿರುತ್ತಾರೆ. ಆದರೆ ದುರಳನೊಬ್ಬ ಒಡಕು ತಂದ ಕಾರಣ ಇಬ್ಬರು ಬೇರೆಯಾಗುತ್ತಾರೆ. ಇವರ ಮನಸ್ಸಿನಲ್ಲಿ ಇದ್ದಂತ ಆಸೆ, ಆಕಾಂಕ್ಷೆಗಳು ಈಡೇರುತ್ತದಾ? ಅವರುಗಳು ಮತ್ತೆ ಒಂದಾಗುತ್ತಾರಾ? ಇವೆಲ್ಲವುಗಳು ಸೆಸ್ಪನ್ಸ್, ಹಾರರ್, ನವಿರಾದ ಪ್ರೀತಿ, ಜೊತೆಗೊಂದು ತಾಯಿ ಮಗಳ ಬಾಂದವ್ಯ ಕತೆಯೊಂದಿಗೆ ಸಾಗುತ್ತದೆ. ಅಲ್ಲದೆ ಹಾರವೊಂದು ಪಾತ್ರವಾಗಿ ಮೂಡಿಬಂದಿದ್ದು, ಸತ್ಯ ನ್ಯಾಯಕ್ಕೆ ಎಂದಿಗೂ ಗೆಲುವು ಸಿಗಲಿದೆ ಅಂತ ಹೇಳಲಾಗಿದೆ.
ಕೀರ್ತಿಕೃಷ್ಣ ನಾಯಕ. ನಿಖಿತಾಸ್ವಾಮಿ ಮತ್ತು ಮಧುಬಾಲ ನಾಯಕಿಯರು. ಇವರೊಂದಿಗೆ ಬಾಲಿವುಡ್ ನಟರಾದ ಪ್ರದೀಪ್‌ರಾವುತ್, ಶಾಹುರಾಜ್‌ಶಿಂದೆ ಹಾಗೂ ಮಗಧೀರ ಖ್ಯಾತಿಯ ದೇವ್‌ಗಿಲ್ ಹಾಗೂ ಕನಕಪುರದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು, ಮಂಗಳೂರು, ಕನಕಪುರ, ಪಾವಗಡ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಸಂಗೀತ ರಾಜ್‌ಕಿರಣ್, ಛಾಯಾಗ್ರಹಣ ಜಯರಾಮ್, ಸಂಕಲನ ಸೀನು, ನೃತ್ಯ ಬಾಲಕೃಷ್ಣ-ಗಂಗಮ್‌ರಾಜು, ಸಂಭಾಷಣೆ ಗೋಪಿಕಿರಣ್ ಅವರದಾಗಿದೆ. ಏಳು ಸಾಹಸಗಳಿಗೆ ದೇವರಾಜು ಕೆಲಸ ಮಾಡಿದ್ದಾರೆ.
ಸಿರಿ ಮ್ಯೂಸಿಕ್ ಸಂಸ್ಥೆಯು ಹಾಡುಗಳನ್ನು ಹೊರತಂದಿದೆ. ಪುಷ್ಪ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಸಿದ್ದಗೊಂಡಿರುವ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸದ್ಯದಲ್ಲೆ ಏಕಕಾಲಕ್ಕೆ ಬಿಡುಗಡೆಯಾಗಲಿದೆ.