ibbani tabbida ileyali ಇಬ್ಪನಿ ತಬ್ಬಿದ ಇಳೆಯಲಿ ಪ್ರಬುದ್ಧ ಪ್ರೇಮ ಕಥೆ
ಇಬ್ಪನಿ ತಬ್ಬಿದ ಇಳೆಯಲಿ ಪ್ರಬುದ್ಧ ಪ್ರೇಮ ಕಥೆ
Rating 3/5.
ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ, ಚಂದ್ರಜಿತ್ ಬೆಳ್ಳೆಯಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರುವ “ಇಬ್ಪನಿ ತಬ್ಬಿದ ಇಳೆಯಲಿ” ಚಿತ್ರದ ಶೀರ್ಷಿಕೆ (ಟೈಟಲ್) ಕೇಳುವುದಕ್ಕೆ ಹಿತವಾಗಿದೆ. ಹಾಗೆ ಸಿನಿಮಾಕೂಡ ನೋಡುವುದಕ್ಕೆ ಸೊಗಸಾಗಿದೆ.
ನಿಧಾನವೇ ಪ್ರಧಾನ ಎನ್ನುವುದು ಬದುಕಿನಲ್ಲಿ ಹಾಗೂ ಸಿನಿಮಾದಲ್ಲೂ ಅತೀ ಮುಖ್ಯ ಎನ್ನುವುದನ್ನು ನಿರ್ದೇಶಕರು ಚಿತ್ರದಲ್ಲಿ ಬಹಳ ನಿಧಾನವಾಗಿ ತಿಳಿ ಹೇಳಿದ್ದಾರೆ.
ಚಿತ್ರದ ನಾಯಕ ನಾಯಕಿಯನ್ನು ಪ್ರೀತಿಸುತ್ತಾನೆ ಆದರೆ ಅವಳ ಹೆಸರು ಗೊತ್ತಿಲ್ಲ, ಅವಳು ಎಲ್ಲಿದ್ದಾಳೆ ಗೊತ್ತಿಲ್ಲ, ಅವಳು ಇವನನ್ನು ಪ್ರೀತಿಸುತ್ತಿದ್ದಾಳ ಗೊತ್ತಿಲ್ಲ.
ಮದುವೆ ಆಗ ಬೇಕಿದ್ದ ಹುಡುಗೀನ ಹಸೆಮಣೆ ಮೇಲೆ ತಾಳಿ ಕಟ್ಟುವ ಕೊನೆ ಘಳಿಗೆಯಲ್ಲಿ ನಾನು ಬೇರೆ ಹುಡುಗೀನ ಪ್ರೀತಿ ಮಾಡ್ತಿದ್ದೀನಿ, ನಿನ್ನ ಮದುವೆ ಆಗಿ ಅವಳ ನೆನಪಲ್ಲೇ ಇರುವುದು ಸರಿಯಲ್ಲ ನಿನಗೆ ಮೋಸ ಮಾಡಲು ನನಗೆ ಇಷ್ಟ ಇಲ್ಲ ಅಂತ ಕೊನೆಗಳಿಗೆಯಲ್ಲಿ ಮದುವೆ ಮಂಟಪದಿಂದ ಎದ್ದು ಹೋಗುವ ಕಥಾ ನಾಯಕ ಅನಾಮಿಕ ಪ್ರೇಮಿಯ ಹುಡುಕಾಟದಲ್ಲಿ ಅರ್ಧ ಚಿತ್ರ ಮುಗಿಯುತ್ತದೆ.
ಇತ್ತ ತಾಳಿ ಕಟ್ಟಿಸಿಕೊಳ್ಳಬೇಕಿದ್ದ ಮತ್ತೊಬ್ಬ ನಾಯಕಿಯ ತಳಮಳ, ಚಡಪಡಿಕೆ ಅಸಹಾಯಕಥೆ ಹಾಗೂ ಈತನ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನಿರುವ ಪ್ರಾದಾನ ನಾಯಕಿ. ಇದೊಂತರ ವಿಭಿನ್ನವಾದ ತ್ರಿಕೋನ ಪ್ರೆಮಕಥೆ, ಇಲ್ಲಿ ಅಸಂಬದ್ದ ಸನ್ನಿವೇಶ, ಸುಖಾ ಸುಮ್ಮನೆಯ ವೀರಾವೇಶ, ಯಾವುದು ಇಲ್ಲ. ಮೊದಲೆ ಹೇಳಿದಂತೆ ಇದಿಂದು ಪ್ರಬುದ್ದ ಪ್ರೇಮಕಥೆ.ಔಅಯಾಗ್ರಹಣ, ಸಂಗೀತ, ಹಾಡುಗಳು ಕಲಾವಿದರ ನಟನೆ ಎಲ್ಲವೂ ಚೊಕ್ಕವಾಗಿದೆ ಆದರೆ ಕಥೆಯ ಓಟ ಮಾತ್ರ ಮಂದಗತಿಯಾಗಿದೆ. ಒಟ್ಟಿನಲ್ಲಿ ಇಬ್ಬನಿ ತಬ್ಬಿದ ಇಳೆಯನ್ನು ಮನಸಾರೆ ಅಪ್ಪಿ ಮುದ್ದಾಡಬಹುದು.
ಇಲ್ಲಿ
ನಗುವಿದೆ ಅಳುವುದೆ ಮೌನವಿದೆ ತಿಳಿ ನಗುವುದೆ ಇಬ್ಬನಿ ತಬ್ಬಿದ ಇಳೆಯಲಿ