Hyena movie first look released by the super real hero captain Naveen nagappa. “ಹೈನಾ” ಚಿತ್ರದ ಫಸ್ಟ್ ಲುಕ್ ಅನ್ನು ಭಾರತೀಯ Super Real ಹೀರೋ “ಕ್ಯಾಪ್ಟನ್ ನವೀನ್ ನಾಗಪ್ಪ ” ಬಿಡುಗಡೆ ಮಾಡಿದ್ದಾರೆ.
ಚಲನಚಿತ್ರದ ಫಸ್ಟ್ ಲುಕ್ ಸಾಮಾನ್ಯವಾಗಿ ತಾರೆಗಳು ಬಿಡುಗಡೆ ಮಾಡುತ್ತಾರೆ,
ಆದರೆ “ಹೈನಾ” ಚಿತ್ರದ ಫಸ್ಟ್ ಲುಕ್ ಅನ್ನು ಭಾರತೀಯ Super Real ಹೀರೋ “ಕ್ಯಾಪ್ಟನ್ ನವೀನ್ ನಾಗಪ್ಪ ” ಬಿಡುಗಡೆ ಮಾಡಿದ್ದಾರೆ.
ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ನವೀನ್ ನಾಗಪ್ಪ, 1990 ರಿಂದ 2000 ರವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಜಯವನ್ನು ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ವೆಂಕಟ್ ಭರದ್ವಾಜ್ ನಿರ್ದೇಶಿಸಿರುವ ಆ್ಯಕ್ಷನ್ ಪ್ಯಾಕ್‌ಡ್ “ಹೈನಾ” ಚಿತ್ರದಲ್ಲಿ ಡಾ. ರಾಜ್ ಕಮಲ್, ಹರ್ಷ ಅರುಣ್ ಕಲಾಲ್, ಲಕ್ಷ್ಮಣ್ ಶಿವಶಂಕರ್, ದಿಗಂತ್, ನಂದಕುಮಾರ್, ಪ್ರಭು, ನಿರಂಜನ್, ಲಾರೆನ್ಸ್ ಮತ್ತು ವೆಂಕಟ್ ಭರದ್ವಾಜ್ ಸೇರಿದಂತೆ ಹಲವಾರು ತಾರೆಗಳು ಅಭಿನಯಿಸಿದ್ದಾರೆ.
ಚಿತ್ರದ ಕಥೆಯನ್ನು ಲಕ್ಷ್ಮಣ್ ಶಿವಶಂಕರ್ ಬರೆದಿದ್ದಾರೆ, ಛಾಯಾಗ್ರಹಣವನ್ನು ನಿಶಾಂತ್ ನಾನಿ ಮಾಡಿದ್ದಾರೆ ಮತ್ತು ಸಂಗೀತವನ್ನು ಲವ್ವ್ ಪ್ರಣ್ ಮೆಹ್ತಾ ನೀಡಿದ್ದಾರೆ.

ಅಮೃತಾ ಫಿಲ್ಮ್ ಸೆಂಟರ್ ಮತ್ತು ಕೆಕೆ ಕಾಂಬೈನ್ಸ್ ನಿರ್ಮಿಸಿರುವ ಈ ಚಲನಚಿತ್ರವು 2024ರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ.