Hostel hudugaru bekagiddare ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ” ಚಲನಚಿತ್ರದ ಟ್ರೇಲರ್ ಅನಾವರಣ

2021 ಜನವರಿಯಲ್ಲಿ ಚಲನಚಿತ್ರ ಮಾಡಬೇಕೆಂಬ ಕನಸನ್ನು ಹೊತ್ತಿದ್ದ ಒಂದು ಸಣ್ಣ ಯುವಕರ ತಂಡ, ಸಿನಿಮಾ ಮಾಡಬೇಕೆಂಬ ಹುಮ್ಮಸ್ಸಿನೊಂದಿಗೆ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟು ತಮ್ಮ ಸಿನಿಮಾ ಪಯಣವನ್ನು ಆರಂಭಿಸಿತು. ಈ ಚಿತ್ರಕ್ಕಾಗಿ ಸುಮಾರು ಆರು ಸಾವಿರ ಯುವ ರಂಗಭೂಮಿ ಕಲಾವಿದರನ್ನು ಆಡಿಷನ್ ಮಾಡಿ ಅದರಲ್ಲಿ ಐನೂರು ಪ್ರತಿಭೆಗಳನ್ನು ಆಯ್ಕೆ ಮಾಡಿ, ಕನ್ನಡದ ಸ್ಟಾರ್ ನಟರ ಸಹಯೋಗದೊಂದಿಗೆ ಚಿತ್ರೀಕರಣ ಪ್ರಕ್ರಿಯೆ ಶುರುವಾಯಿತು.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ನಮ್ಮೆಲ್ಲರ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರು ಪ್ರೀತಿಯಿಂದ ಪೋಸ್ಟರ್ ಬಿಡುಗಡೆ ಮಾಡಿ ತಂಡವನ್ನು ಆಶೀರ್ವದಿಸಿ ಚಿತ್ರ ತಂಡದ ಕ್ರಿಯಾಶೀಲ ಪ್ರಯತ್ನಕ್ಕೆ ನಾಂದಿ ಹಾಡಿದರು.

ಸತತ 85 ರಾತ್ರಿಗಳು ಚಿತ್ರದ ಶೂಟಿಂಗ್ ನಡೆದಿದ್ದು, ಚಿತ್ರದ ಶೇಕಡಾ 90 ರಷ್ಟು ಭಾಗವನ್ನು ಮಂಗಳೂರು ವಿಶ್ವ ವಿಧ್ಯಾನಿಲಯದ ಬಾಯ್ಸ್ ಹಾಸ್ಟೆಲ್ ನಲ್ಲಿ ಚಿತ್ರೀಕರಿಸಲಾಯಿತು. ಚಿತ್ರ ತಂಡವು ಈಗಾಗಲೇ ವಿಶಿಷ್ಟ ಪ್ರೊಮೋಷನಲ್ ಕ್ಯಾಂಪೇನ್ ಗಳನ್ನು ಮಾಡುವ ಮೂಲಕ ಚಿತ್ರ ಪ್ರೇಮಿಗಳ ಮೆಚ್ಚುಗೆ ಪಡೆದಿದೆ.

ಅಂದು ಅಪ್ಪು ಅವರ ಪ್ರೀತಿಯ ಪ್ರೋತ್ಸಾಹದೊಂದಿಗೆ ಆರಂಭವಾದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವು ಇಂದು ರಿಲೀಸ್ ಎಂಬ ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ. ಚಲನಚಿತ್ರ ಬಿಡುಗಡೆಗೆ 10 ದಿನಗಳು ಉಳಿದಿರುವಂತೆ ಇಂದು ಚಿತ್ರದ ಟ್ರೇಲರನ್ನು ಪ್ರಖ್ಯಾತ ನಟರಾದ ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿಯವರು ಅನಾವರಣಗೊಳಿಸಿದ್ದಾರೆ.

ಈ ಚಿತ್ರವನ್ನು ಪರಂವಃ ಪಿಕ್ಚರ್ಸ್ ಮುಖಾಂತರ ರಕ್ಷಿತ್ ಶೆಟ್ಟಿಯವರು ಪ್ರಸ್ತುತ ಪಡಿಸುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಿದ್ದಾರೆ. ಅಲ್ಲದೇ ಚಿತ್ರದ ಆರಂಭದಿಂದಲೂ ತಂಡದಲ್ಲಿ ಓರ್ವರಾಗಿ, ಬೆನ್ನು ತಟ್ಟುತ್ತಾ ಹಿಂದೆಂದೂ ಕಾಣದ ವಿಶೇಷ ಪಾತ್ರದಲ್ಲಿ ರಿಷಭ್ ಶೆಟ್ಟಿ ಅವರು ಕಾಣಿಸಿಕೊಳ್ಳಲಿದ್ದಾರೆ ಹಾಗು ನಿರ್ದೇಶಕ ಪವನ್ ಕುಮಾರ್, ದಿಗಂತ್ ಮಂಚಾಲೆ, ಶೈನ್ ಶೆಟ್ಟಿ ಕೂಡಾ ಚಿತ್ರದಲ್ಲಿ ವಿಶೇಷ ಪಾತ್ರಗಳನ್ನು ನಿರ್ವಹಿಸಿ ಇಡೀ ಚಿತ್ರ ತಂಡವನ್ನು ಪ್ರೋತ್ಸಾಹಿಸಿದ್ದಾರೆ.

ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ನಿರ್ಮಾಣವನ್ನು ಗುಲ್ಮೋಹರ್ ಫಿಲಂಸ್ ಹಾಗೂ ವರುಣ್ ಸ್ಟುಡಿಯೋಸ್ ಸೇರಿ ನಿರ್ಮಿಸಿದೆ. ಚಿತ್ರವನ್ನು ನಿತಿನ್ ಕೃಷ್ಣಮೂರ್ತಿಯವರು ನಿರ್ದೇಶಿಸಿ, ಕಥೆ ಹಾಗೂ ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರಕ್ಕೆ ಅರವಿಂದ್ ಕಶ್ಯಪ್ ರವರು ಛಾಯಾಗ್ರಹಣ ಮಾಡಿದ್ದಾರೆ ಮತ್ತು ಅಜನೀಶ್ ಲೋಕನಾಥ್ ರವರು ಸಂಗೀತವನ್ನು ಒದಗಿಸಿದ್ದಾರೆ. ಇದೇ ಜುಲೈ 21ಕ್ಕೆ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಚಿತ್ರವು ತೆರೆ ಕಾಣಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor