Hombale Films productions Sri Murali acted “Bagheera” movie song released ಹೊಂಬಾಳೆ ಫಿಲಂಸ್ ನಿರ್ಮಿಸಿರುವ, ಶ್ರೀಮುರಳಿ ನಟನೆಯ ಬಘೀರ ಚಿತ್ರದ ರುಧಿರ ಧಾರ ಹಾಡು ಬಿಡುಗಡೆ
ಹೊಂಬಾಳೆ ಫಿಲಂಸ್ ನಿರ್ಮಿಸಿರುವ, ಶ್ರೀಮುರಳಿ ನಟನೆಯ ಬಘೀರ ಚಿತ್ರದ ರುಧಿರ ಧಾರ ಹಾಡು ಬಿಡುಗಡೆ
ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ ಸಿನಿಮಾದ ಮೊದಲ ಹಾಡು “ರುಧಿರ ಧಾರ” ಬಿಡುಗಡೆ ಆಗಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ರಿಲೀಸ್ ಆಗಿದೆ. ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ವೀಕ್ಷಕರಿಂದಲೂ ಮೆಚ್ಚುಗೆ ಸಿಕ್ಕಿದೆ.

ರುಧಿರ ಧಾರ ಶೀರ್ಷಿಕೆ ಗೀತೆಗೆ ಅನಿರುದ್ಧ ಶಾಸ್ತ್ರೀ ಸಾಹಿತ್ಯ ಬರೆಯುವುದರ ಜತೆಗೆ ಹಾಡಿಗೆ ಅವರೇ ಧ್ವನಿ ನೀಡಿದ್ದಾರೆ. ಅಜನೀಶ್ ಲೋಕನಾಥ್ ಈ ಸಂಗೀತ ನಿರ್ದೇಶನ ಮಾಡಿದ್ದು, ಹೊಸ ಬಗೆಯ ಸಂಗೀತ ಕೇಳುಗರಿಗೆ ವಿಶೇಷ ಎನಿಸುತ್ತಿದೆ.

ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬಘೀರ ಸಿನಿಮಾಕ್ಕೆ, ನವೀನ್ ಕುಮಾರ್ ಛಾಯಾಗ್ರಹಣವಿದೆ. ಪ್ರಶಾಂತ್ ನೀಲ್ ಶಕ್ತಿಶಾಲಿ ಕಥೆ ಬರೆದಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದೇ ಅಕ್ಟೋಬರ್ 31ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.