Hajaron movie review ಹೆಜ್ಜಾರು ಒಂದು ವಿಭಿನ್ನ ಕಥೆಯ ಕುತೂಹಲ ಭರಿತ ಚಿತ್ರ. ಹೆಜ್ಜಾರು ಚಿತ್ರದ ವಿಮರ್ಶೆ Rating-3.5/5
ಚಿತ್ರ ಹೆಜ್ಜಾರು
ನಿರ್ದೇಶನ – ಹರ್ಷಪ್ರಿಯ
ನಿರ್ಮಾಣ – ವಿಮಲ ಎನ್. ಕೆ. ಎಸ್. ರಾಮ್ ಜಿ
ಸಂಗೀತ – ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ – ಅಮರ್ ಗೌಡ
ನವೀನ್ ಕೃಷ್ಣ, ಗೋಪಾಲಕೃಷ್ಣ ದೇಶಪಾಂಡೆ, ಭಗತ್ ಆಳ್ವ, ಶ್ವೇತ ನಿಯೋನಿಲ್ಲ, ಅರುಣಾ ಬಾಲರಾಜ್, ಮುನಿ, ವಿನೋದ್ ಭಾರತಿ.
ಒಂದೇ ಕಥೆಗೆ ಎರಡು ಕಾಲಘಟ್ಟಗಳ ಎರಡು ಘಟನೆಗಳು ಸಾಕ್ಷಿ. ಇಲ್ಲಿ ಕಥೆಯೇ ನಾಯಕ
ಕನ್ನಡದಲ್ಲಿ ಬಹುಶಃ ಇದೇ ಮೊದಲಬಾರಿಗೆ ಈ ರೀತಿಯ ವಿಭಿನ್ನವಾದ ಕಥೆಯೊಂದಿಗೆ ಹೆಜ್ಜಾರು ಚಿತ್ರ ಬಂದಿದೆ ಎಂದು ಹೇಳಬಹುದು.

ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆ ಮತ್ತೊಬ್ಬ ವ್ಯಕ್ತಿಯ ಜೀವನದಲ್ಲಿ ಬೇರೆ ಕಾಲಘಟ್ಟದಲ್ಲಿ ನಡೆಯುತ್ತದೆ.
ಇದು ಕೇಳುವುದಕ್ಕೆ ಚನ್ನಾಗಿದೆ ಇನ್ನು ತೆರೆಯ ಮೇಲೆ ನೋಡಿದರೆ ಹೇಗಿರುತ್ತೆ ಅಲ್ವಾ.. ?
ಇಂತಹ ಒಂದು ಸಂದರ್ಭ ಹಾಗೂ ಅವಕಾಶವನ್ನು ಹೆಜ್ಜಾರು ಚಿತ್ರದಲ್ಲಿ ಕಲ್ಪಿಸಿದ್ದಾರೆ.
ಹೆಜ್ಜಾರು ಒಂದು ವಿಭಿನ್ನ ಕಥೆಯ ಕುತೂಹಲ ಭರಿತ ಚಿತ್ರ.
ಒಬ್ಬ ವ್ಯಕ್ತಿಯ ಪ್ರೇಯಸಿ ಕೊಲೆಯಾಗುತ್ತಾಳೆ ಅವಳನ್ನು ಕೊಂದದ್ದು ಯಾರು ಗೊತ್ತಿಲ್ಲ
ಹಾಗೆಯೇ ಅವನ ಮುಂದಿನ ಜನರೇಷನ್ ನ ಮತ್ತೊಬ್ಬ ವ್ಯಕ್ತಿಯ ಪ್ರೇಯಸಿಯ ಕೊಲೆಯಾಗುತ್ತದೆ ಈ ಎರಡು ಕೊಲೆಗಳನ್ನು ಮಾಡಿದ್ದು ಯಾರು ಎನ್ನುವುದನ್ನು
ಕೊನೆಯ ಕ್ಲೈಮ್ಯಾಕ್ಸ್ ವರೆಗೂ ಕುತೂಹಲ ಮತ್ತು ಥ್ರಿಲ್ಲಿಂಗ್ ಅನ್ನು ಕಾಯ್ದುಕೊಂಡಿರುವ ನಿರ್ದೇಶಕರಾದ ಹರ್ಷಪ್ರಿಯ ಜಾಣ್ಮೆಯನ್ನು ಮೆಚ್ಚಬೇಕು.

1966ರಲ್ಲಿ ಹೆಜ್ಹಾರು ಎಂಬ ಊರಿನ ಮೈಲಿಗಲ್ಲಿನ ಬಳಿ ಅಪಘಾತವೊಂದು ನಡೆಯುತ್ತದೆ. ಜೈಲಿನಿಂದ ತಪ್ಪಿಸಿಕೊಂಡ ಖೈದಿಯನ್ನು ಹಿಡಿಯಲು ಹೋಗಿ ಇಬ್ಬರು ಪೋಲಿಸ್ ಪೇದೆಗಳು ಹಾಗೂ ಖೈದಿ ಲಾರಿ ಡಿಕ್ಕಿಯಿಂದ ಸಾಯುತ್ತಾರೆ. ಇಲ್ಲಿ ಸಾಯುವ ಪೋಲಿಸ್ ಪೇದೆ ಸತ್ಯಮೂರ್ತಿಯ ಮಗ ರಾಜಾರಾಮ್ ( ಗೋಪಾಲ ಕೃಷ್ಣ ದೇಶಪಾಂಡೆ) ನಂತರ ಈತನ ತಾಯಿ ಸಾವನ್ನು ಅಪ್ಪುತ್ತಾಳೆ, ತದ ನಂತರ ಇವನ ಪ್ರೇಯಸಿಯೂ ಕೊಲೆಯಾಗುತ್ತಾಳೆ. ಈ ಎಲ್ಲಾ ಘಟನೆಯಿಂದ ಮಾನಸಿಕವಾಗಿ ನೊಂದ ರಾಜಾರಾಮ್ ಅಸ್ವಸ್ಥತೆಯಿಂದ ಬಳಲುತ್ತಿರುತ್ತಾನೆ.

ಹಾಗೆಯೇ 1995ರಲ್ಲಿ ಹಿಂದೆ ನಡೆದಂತೆ ಹೆಜ್ಜಾರಿನ ಮೈಲಿಗಲ್ಲಿನ ಬಳಿ ಜೈಲಿನಿಂದ ತಪ್ಪಿಸಿಕೊಂಡ ಖೈದಿಯನ್ನು ಹಿಡಿಯಲು ಹೋಗಿ ಇಬ್ಬರು ಪೋಲಿಸ್ ಪೇದೆಗಳು ಹಾಗೂ ಖೈದಿ ಲಾರಿ ಡಿಕ್ಕಿಯಿಂದ ಸಾಯುತ್ತಾರೆ. ಇಲ್ಲಿ ಸಾಯುವ ಪೋಲಿಸ್ ಪೇದೆ ಕೃಷ್ಣಮೂರ್ತಿಯ ಮಗ ಭಗತ್ (ಭಗತ್ ಆಳ್ವ) ನಂತರ ಈತನ ತಾಯಿಯೂ ಸಾವನ್ನು ಅಪ್ಪುತ್ತಾಳೆ,
ಈತನ ಪ್ರೇಯಸಿಯ ಕೊಲೆಯಾಗುತ್ತದೆ.
ಇದನ್ನು ಅರಿತ ರಾಜಾರಾಮ್ ನನ್ನ ಜೀವನದಲ್ಲಿ ನಡೆದಂತೆ ನಿನ್ನ ಜೀವನದಲ್ಲಿ ನಡೆಯುತ್ತದೆ ಎಂದು ಭಗತ್ ಗೆ ಮುಂಚೆಯೇ ತಿಳಿಸುತ್ತಾನೆ ಆದರೆ ಭಗತ್ ಇದನ್ನು ನಂಬುವುದಿಲ್ಲ.
ಈ ಎರಡು ಘಟನೆಗಳಿಗೆ ಕಾರಣ ಯಾರು ಎನ್ನುವುದನ್ನು ತಿಳಿಯ ಬೇಕಾದರೆ ಪ್ರೇಕ್ಷಕರು ಸಿನಿಮಾ ನೋಡಿದರೆ ನಿಜಕ್ಕೂ ಒಂದು ಬೇರೆಯದೇ ಕಥೆಯನ್ನು ತೆರೆಯ ಮೇಲೆ ಅನುಭವಿಸ ಬಹುದು.

ಇದೊಂದು ಪಕ್ಕಾ ಕಾಂಟೆಂಟ್ ಒರಿಯೆಂಟೆಡ್ ಸಿನಿಮಾ
ಇಂತಹ ಸಿನಿಮಾಗಳು ಬೇರೆ ಭಾಷೆಗಳಲ್ಲಿ ಬಂದರೆ ಕನ್ನಡಿಗರು ಮುಗಿ ಬಿದ್ದು ನೋಡುತ್ತಾರೆ.
ಈಗ ಒಂದು ಒಳ್ಳೆಯ ಕಥೆಯ ಸಿನಿಮಾ ಗೆಲ್ಲಿಸೋದು ನಮ್ಮವರ ಆದ್ಯ ಕರ್ತವ್ಯ ಕೂಡ.
ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಚಿತ್ರದ ಓಟಕ್ಕೆ ಪುಷ್ಠಿ ನೀಡಿದೆ. ಹಾಗೆಯೇ ಅಮರಗೌಡರವರ ಕ್ಯಾಮರ ಕೆಲಸ ಸಿನಿಮಾವನ್ನು ಅಚ್ಚುಕಟ್ಟಾಗಿ ಹಿಡಿದಿರಿಸಿದೆ.
ಭಗತ್ ಆಳ್ವ ಚಿತ್ರದ ನಾಯಕನಾಗಿ ಮಾಸು ಕ್ಲಾಸು ಎರಡನ್ನು ನಿಭಾಯಿಸಿದ್ದಾರೆ.
ಗೋಪಾಲಕೃಷ್ಣ ದೇಶಪಾಂಡೆ ಅಭಿನಯಕ್ಕಾಗಿಯೆರ ಹುಟ್ಟಿದ್ದಾರೇನೋ ಅನ್ನಿಸುವಷ್ಟು ಲೀಲಾ ಜಾಲವಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ನಟ ನವೀನ್ ಕೃಷ್ಣ ಖಳನಟನಾಗಿ ಮೊದಲ ಬಾರಿಗೆ ತೆರೆಯ ಮೇಲೆ ಆರ್ಭಟಿಸಿದ್ದಾರೆ.
ಈ ಪಾತ್ರದಿಂದ ನವೀನ್ ಕೃಷ್ಣ ಮುಂದಿನ ದಿನಗಳಲ್ಲಿ ವಿಲನ್ ಆಗಿಯೂ ಮಿಂಚಬಹುದು.
ಇನ್ನು ತಾಯಿಯ ಪಾತ್ರದಲ್ಲಿ ಅರುಣಾ ಬಾಲರಾಜ್ ಕೂಡ ಸಹಜವಾಗಿ ಅಭನಯಿಸಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.
ಶ್ವೇತ ನಿಯೋನಿಲ್ಲ ನಾಯಕಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ನಿರ್ಮಾಪಕರಾದ ವಿಮಲ ರಾಮ್ ಜಿ ಒಂದು ಒಳ್ಳೆಯ ಚಿತ್ರವನ್ನು ಜನತೆಗೆ ನೀಡಿದ್ದಾರೆ.
ಪ್ರೇಕ್ಷಕರು ಇಂತಹ ಒಳ್ಳೆಯ ಚಿತ್ರವನ್ನು ನೋಡಿ ಸಿನಿಮಾ ಗೆಲುವಿಗೆ ಸಾಥ್ ನೀಡಬೇಕಿದೆ.