Hadinelentu Movie Reviews. Rating – 4/5. ಹದಿನೇಳೆಂಟು ಚಿತ್ರ ಮನಸ್ಸಿಗೆ ಒಂದಷ್ಟು ತರ್ಕ, ಹತಾಶೆ, ಭಾವೋದ್ವೇಗವನ್ನು ಏಕ ಕಾಲಕ್ಕೆ ಹುಟ್ಟಿಸುವ ಸಿನಿಮಾ
ಹದಿನೇಳೆಂಟು ಚಿತ್ರ ಮನಸ್ಸಿಗೆ ಒಂದಷ್ಟು ತರ್ಕ, ಹತಾಶೆ, ಭಾವೋದ್ವೇಗವನ್ನು ಏಕ ಕಾಲಕ್ಕೆ ಹುಟ್ಟಿಸುವ ಸಿನಿಮಾ. ಇದು ಮಾಮೂಲಿಯಂತೆ ಒಂದಷ್ಟು ಫೈಟಿಂಗ್ , ಅನಾವಶ್ಯಕ ದೃಶ್ಯಗಳ ಹಾಗೂ ಸುಖಾ ಸುಮ್ಮನೆ ಹಾಡುಗಳನ್ನು ತುರುಕಿದ ಮಸಾಲೆ ಚಿತ್ರ ಅಲ್ಲ. ಸಮಾಜದಲ್ಲಿರುವ ಸಹಜ ಮನುಷ್ಯರ ಬದುಕಿನಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಗಂಭೀರ ವಿಷಯದ ತಾರ್ಕಿಕ ಮೌಲ್ಯದ ಚಿತ್ರ.

ನಿರ್ದೇಶಕ ಪೃಥ್ವಿ ಕೊನ್ನೂರು ಬಹಳ ಜಾಣ್ಮೆಯಿಂದ ಈ ಒಂದು ಕಥಾವಸ್ತುವನ್ನು ಆರಿಸಿಕೊಂಡು ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಹಿಂದೆ “ಪಿಂಕಿ ಎಲ್ಲಿ” ಎನ್ನುವ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಇಲ್ಲೂ ಕೂಡ ಕಾಲೇಜು ಓದುವ ಹುಡುಗ ಹುಡುಗಿ ಕಾಲೇಜಿನ ಕ್ಲಾಸ್ ರೂಂನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಆಗುವ ಗಂಭಿರ ವಿಷಯಕ್ಕೆ ಸಿನಿಮಾವನ್ನು ಬಹಳ ಗಂಭೀರವಾಗಿ ಎಣೆದಿದ್ದಾರೆ.

ಇಲ್ಲಿ ಯಾವುದೇ ಹೀರೊಯಿಸಂ ಇಲ್ಲದ ಅಸಾಧಾರಣ ಕಥೆಯ ಚಿತ್ರ. ಓದುವ ವಯಸ್ಸಿನಲ್ಲಿ ಮಾಡಬಾರದ್ದು ಮಾಡಿದರೆ ಯಾರಿಗೆಲ್ಲಾ ಆಗಬಾರದ್ದು ಆಗುತ್ತದೆ ಎನ್ನುವ ವಿಷಯದ ಹಾಗೂ ಸಮಾಜಕ್ಕೆ ಎಚ್ಚರಿಕೆ ಘಂಟೆಯ ಚಿತ್ರ ಇದಾಗಿದೆ. ಎಲ್ಲರೂ ನೋಡಲೇ ಬೇಕಾದ ಒಂದು ಒಳ್ಳೆಯ ಚಿತ್ರ. ಅದರಲ್ಲೂ ಓದುತ್ತಿರುವ ಹದಿನೇಳು ಹದಿನೆಂಟು ವಯಸ್ಸಿನ ಯುವ ಜನತೆ ನೋಡಲೇ ಬೇಕಾದ ಚಿತ್ರ.