Guns and Roses movie review. ಗನ್ನಿನ ಸದ್ದಿನಲ್ಲಿ ನಲುಗಿದ ಗುಲಾಭಿ.

ಇದೊಂದು ಪಾತಕಿಗಳ ಲೋಕದಲ್ಲಿ , ಮಾದಕವಸ್ತುಗಳ ಅಮಲಿನಲ್ಲಿ, ಕೊಲೆ, ಮಾರಾಮಾರಿ, ಹೊಡೆದಾಟ, ಕಾಕಿ, ಖಾದಿಗಳ ನಡುವೆ ಬಂದೂಕಿನ ಗುಂಡಿನ ಕಾಳಗದ ನಡುವೆ ಕಳೆದು ಹೋಗುವ ಪ್ರೇಮಕಥೆ

ಇಲ್ಲಿ ಹೀರೋಯಿಸಂ ಗಿಂತ ರೌಡಿಯಿಸಂ ಜಾಸ್ತಿ. ಸಾಮಾಜಿಕ ಕಾಳಜಿಗಾಗಿ, ತನ್ನ ಜನರಿಗಾಗಿ, ಮತ್ತು ಪ್ರೀತಿಗಾಗಿ ನಾಯಕ ಹೋರಾಡುವುದಿಲ್ಲ. ಆತನದೇನಿದ್ದರು ಕಾನೂನು ಬಾಹೀರ ಚಟುವಟಿಕೆಗಳೇ ಜಾಸ್ತಿ, ಭೂಗತ ಲೋಕದಲ್ಲಿ ತನ್ನ ಅಸ್ತಿತ್ವಕ್ಕಾಗಿ ತಡಕಾಡುವ ನಾಯಕನಿಗೆ ಅಪ್ಪಿ ತಪ್ಪಿ ಸಿಗುವ ನಾಯಕಿಗೆ ಕೊನೆಗೂ ನ್ಯಾಯ ಸಿಗುವುದಿಲ್ಲ. ಗುಂಡಿನ ಸದ್ದಿನಲ್ಲಿ ಪ್ರೇಮದ ಹೂ ರಕ್ತಸಿಕ್ತವಾಗುವುದೇ ಈ ಚಿತ್ರದ ಮೂಲ ಬಂಡವಾಳ.

ಕನ್ನಡದ ಚಿತ್ರರಂಗಕ್ಕೆ ಹಲವಾರು ಕಥೆಗಳನ್ನು ಬರೆದಂತ ಅಜಯ್ ಕುಮಾರ್ ತಮ್ಮ ಮಗನನ್ನು ಮೊದಲ ಬಾರಿಗೆ ನಾಯಕ ನಟನನ್ನಾಗಿ ತೆರೆಗೆ ತಂದಿದ್ದಾರೆ.

ಸೂರ್ಯನ ಪಾತ್ರದಲ್ಲಿ ಅರ್ಜುನ್ ಅಜಯ್ ಕುಮಾರ್ ಅಭಿನಯಿಸಿದ್ದಾರೆ. ಈತ ಫೈಟ್ ಮತ್ತು ಚೇಸಿಂಗ್ ದೃಶ್ಯಗಳಲ್ಲಿ ಗಮನ ಸೆಳೆದಿರುವ ಅರ್ಜುನ್ ಪಾತ್ರದ ನಿರ್ವಹಣೆಯಲ್ಲಿ ತುಂಬಾ ಪಳಗ ಬೇಕಿದೆ. ಇಲ್ಲಿ ನಾಯಕನ ಅಭಿನಯ, ಡೈಲಾಗ್ ಗಳಿಗಿಂತ ಬರೀ ಗುಂಡಿನ ಕಾಳಗವೇ ಜಾಸ್ತಿಯಾಗಿದೆ. ಒಬ್ಬ ನಟನಿಗೆ ಮೊದಲ ಸಿನಿಮಾ‌ಬಹಳ ಮುಖ್ಯವಾಗುತ್ತದೆ. ಆದರೆ ಇಲ್ಲಿ ನಿರ್ದೇಶಕರುಎಡವಿದ್ದೇಕೆ ಗೊತ್ತಿಲ್ಲ. ಇಲ್ಲಿ ನೆಪ ಮಾತ್ರಕ್ಕೆ ಪ್ರೀತಿ, ಪ್ರೇಮದ ಎಳೆಯನ್ನು ಎಣೆದಿದ್ದರೂ ಅದಕ್ಕೆ ಸರಿಯಾದ ನ್ಯಾ ಒದಗಿಸಿಲ್ಲ. ಎನ್ನಬಹುದು. ಅರ್ಜುನ್ ಇನ್ನಷ್ಟು ತರಬೇತಿ ಪಡೆದರೆ ಹಗೂ ಒಳ್ಳೆಯ ಅವಕಾಶ ಸಿಕ್ಕರೆ ಉತ್ತಮ ನಟನಾಗಿ ಬೆಳೆಯುವ ಲಕ್ಷಣಗಳವೆ ಎನ್ನಬಹುದು.

ನಟ ಕಿಶೋರ್ ಕಡಕ್ ಫೋಲೀಸ್ ಅಧಿಕಾರಿಯಾಗಿ ಭೂಗತ ಲೋಕದ ಪಾಪಿಗಳನ್ನ ನಿರ್ನಾಮ ಮಾಡಲು ಸಿಕ್ಕ ಸಿಕ್ಕ ದುಷ್ಟರನ್ನ ನಾಶ ಮಾಡಲು ಪಣ ತೊಟ್ಟು ಬಂದೂಕಿಗೆ ಹೆಚ್ಚು ಕೆಲಸ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಇದೊಂದು ಭೂಗತಲೋಕದ ಕಳ್ಳದಂದೆಗಳಿಂದ ಸಮಾಜವನ್ನು ಹೆಚ್ಚರಿಸುವತ ಚಿತ್ರ ಇದಾಗಿದೆ. ನಿರ್ದೇಶಕರು ಹಾಗೂ ಕಥೆಗಾರರು ಈ ಚಿತ್ರದ ಕಥೆಗೆ ಮತ್ತಷ್ಟು ಪ್ರಾಮುಖ್ಯತೆ ಕೊಟ್ಟಿದ್ದರೆ ಈ ಚಿತ್ರ ಮತ್ತಷ್ಟು ಯಶಸ್ವಿಯಾಗುವುದರಲ್ಲಿ ಎರಡು ಮಾತಿರಲಿಲ್ಲ ಎನ್ನಬಹುದು.

ಚಿತ್ರದಲ್ಲಿ ಸಂಗೀತ ಹಾಗೂ ಕ್ಯಾಮರಾ ಕೆಲಸ ಚನ್ನಾಗಿ ಮೂಡಿಬಂದಿದೆ.


Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor