“Grey games” movie 2016 celebration ಪ್ರೇಕ್ಷಕರು ತೋರುತ್ತಿದ್ದಾರೆ ಒಲವು. ಅದರಿಂದ ಸಾಧ್ಯವಾಯಿತು “ಗ್ರೇ ಗೇಮ್ಸ್” ಗೆಲುವು

ಪ್ರೇಕ್ಷಕರು ತೋರುತ್ತಿದ್ದಾರೆ ಒಲವು. ಅದರಿಂದ ಸಾಧ್ಯವಾಯಿತು “ಗ್ರೇ ಗೇಮ್ಸ್” ಗೆಲುವು

ಆನಂದ್ ಮುಗದ್ ನಿರ್ಮಾಣದ, ಪ್ರಶಸ್ತಿ ವಿಜೇತ “ಆಯನ” ಚಿತ್ರದ ಖ್ಯಾತಿಯ ಗಂಗಾಧರ್ ಸಾಲಿಮಠ ನಿರ್ದೇಶನದ ಹಾಗೂ “ಚಿನ್ನಾರಿ ಮುತ್ತ” ವಿಜಯ ರಾಘವೇಂದ್ರ ಪ್ರಮುಖಪಾತ್ರದಲ್ಲಿ ನಟಿಸಿರುವ “ಗ್ರೇ ಗೇಮ್ಸ್” ಚಿತ್ರ ಕಳೆದ ತಿಂಗಳು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.‌ ಇತ್ತೀಚಿಗೆ ಈ ಚಿತ್ರ ಯಶಸ್ವಿಯಾಗಿ ಇಪ್ಪತ್ತೈದು ದಿ‌ನ ಪೂರೈಸಿರುವ ಸಂದರ್ಭವನ್ನು ಚಿತ್ರತಂಡ ಸಂಭ್ರಮಿಸಿತ್ತು. ನಿರ್ಮಾಪಕರು ಚಿತ್ರತಂಡದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು‌. ನಂತರ ಯಶಸ್ಸಿನ ಖುಷಿಯನ್ನು ಮಾತುಗಳ ಮೂಲಕ ಹಂಚಿಕೊಂಡರು.

ನಮ್ಮ ಚಿತ್ರ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ ಇಪ್ಪತ್ತೈದು ದಿನ ಎಂದು ಮಾತನಾಡಿದ ನಿರ್ದೇಶಕ ಗಂಗಾಧರ್ ಸಾಲಿಮಠ, ಇಂದಿಗೂ ನಮ್ಮ ಚಿತ್ರ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ 26 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ‌. ನಾವು ಏನೇ ಪ್ರಚಾರ ಮಾಡಿದರು, ಜನರ ಬಾಯಿಯಿಂದ ನಮ್ಮ ಚಿತ್ರದ ಬಗ್ಗೆ ಬರುವ ಅಭಿಪ್ರಾಯವೇ ಅಂತಿಮ. ಅವರು ನಮ್ಮ ಚಿತ್ರದ ಬಗ್ಗೆ ಒಬ್ಬರಿಂದ ಒಬ್ಬರಿಗೆ ಹೇಳುತ್ತಿರುವುದರಿಂದ ನಮ್ಮ ಚಿತ್ರ ಇಪ್ಪತ್ತೈದು ದಿನಗಳವರೆಗೂ ಪ್ರದರ್ಶನ ಕಾಣಲು ಸಾಧ್ಯವಾಗುತ್ತಿದೆ. ಚಿತ್ರದ ಗೆಲುವನ್ನು ಸಾಧ್ಯವಾಗಿಸಿದ ಪ್ರೇಕ್ಷಕರಿಗೆ ಹಾಗೂ ಚಿತ್ರತಂಡಕ್ಕೆ ಧನ್ಯವಾದ ಎಂದರು.

ಸಿನಿಮಾ ಮಾಡುವುದು ನನ್ನ ಕನಸ್ಸಾಗಿತ್ತು. ಅದು ನನಸ್ಸಾಗಿದೆ. ಚಿತ್ರ ಇಪ್ಪತ್ತೈದನೇ ದಿನದ ಹತ್ತಿರ ಬಂದಿರುವುದು ಮತ್ತಷ್ಟು ಸಂತೋಷವಾಗಿದೆ‌. ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದರು ನಿರ್ಮಾಪಕ ಆನಂದ್ ಮುಗದ್.

ನನಗೆ ಮುಹೂರ್ತ ಹಾಗೂ ಬಿಡುಗಡೆಗೆ ಮುಂಚಿನ ಕಾರ್ಯಕ್ರಮಗಳಲ್ಲಿ ಮಾತನಾಡಬೇಕಾದರೆ, ಚಿತ್ರ ತೆರೆಕಂಡು ಎರಡುವಾರಗಳು ಪ್ರದರ್ಶನ ಕಂಡ ಮೇಲೆ ಮಾತನಾಡಿದರೆ ಹೆಚ್ಚು ವಿಷಯ ಇರುತ್ತದೆ ಅನಿಸುತ್ತಿತ್ತು. ಆ ಸಂದರ್ಭ ಈಗ ಬಂದಿದೆ. “ಗ್ರೇ ಗೇಮ್ಸ್” ಅನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದು ನಟ ವಿಜಯ ರಾಘವೇಂದ್ರ ತಿಳಿಸಿದರು.

ನನ್ನ ಮಾವ ವಿಜಯ್ ರಾಘವೇಂದ್ರ ಅವರಿಂದ ನನಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ನಿರ್ದೇಶಕರು ನಟನೆ ಹೇಳಿಕೊಟ್ಟರು. ನಿರ್ಮಾಪಕರು ಅವಕಾಶ ನೀಡಿದರು ಈ ಸಂದರ್ಭದಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು ನವ ನಟ ಜೈ.

ನಟಿ ಭಾವನರಾವ್ ಸಹ ಚಿತ್ರದ ಯಶಸ್ಸಿನ ಖುಷಿಯನ್ನು ಹಂಚಿಕೊಂಡರು. ಕಾರ್ಯಕಾರಿ ನಿರ್ಮಾಪಕ ಬಸವರಾಜ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor