Gowri movie review ಗೌರಿ ಚಿತ್ರ ವಿಮರ್ಶೆ ಮುದ್ದಾದ ದೃಶ್ಯ ಕಾವ್ಯ
ಚಿತ್ರ ವಿಮರ್ಶೆ
ಚಿತ್ರ – ಗೌರಿ
ನಿರ್ಮಾಣ ಸಂಸ್ಥೆ – ಲಾಫಿಂಗ್ ಬುದ್ದ ಫಿಲಂಸ್
ನಿರ್ಮಾಪಕರು, ನಿರ್ದೇಶಕರು – ಇಂದ್ರಜಿತ್ ಲಂಕೇಶ್
ಸಂಗೀತ – ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ
ಕಲಾವಿದರು – ಸಮರ್ಜಿತ್ ಲಂಕೇಶ್, ಸಾನ್ಯ ಅಯ್ಯರ್, ಮುಂತಾದವರು.
ಛಾಯಾಗ್ರಹಣ – ಎ.ವಿ. ಕೃಷ್ಣಕುಮಾರ್
ರೇಟಿಂಗ್- 3.5/5
ಮುದ್ದಾದ ನಿನ್ನ ಹೆಸರೇನು ಅಂದ್ರೆ ಅದು ಗೌರಿ ಎನ್ನಬಹುದು.
ಹೌದು ಕನ್ನಡ ಚಿತ್ರರಂಗದ ಶೋಮ್ಯಾನ್ ಅಂತಲೇ ಹೇಳುವಂತ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಸಿನಿ ಪಯಣದಲ್ಲಿ ತುಂಟಾಟ ಶುರು ಮಾಡಿ ಬರೋಬ್ಬರಿ ಹೆಚ್ಚು ಕಡಿಮೆ 22 ವರ್ಷಗಳಾಗಿವೆ. ಅವರ ನಿರ್ದೇಶನದ ಪ್ರತಿಯೊಂದು ಚಿತ್ರದ ದೃಶ್ಯಗಳು ಕಣ್ಮನ ಸೆಳೆಯುವಂತೆ ಕಂಗೊಳಿಸುತ್ತದೆ.
ಗೌರಿ ಚಿತ್ರದಲ್ಲೂ ಕೂಡ ಪ್ರತಿಯೊಂದು ದೃಶ್ಯಗಳನ್ನು ಬಹಳ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ ಎನ್ನಬಹುದು.
ತಮ್ಮ ಮಗನನ್ನು ಬೆಳ್ಳಿತೆರೆಗೆ ಪರಿಚಯಿಸಲು ಅವರು ಪಟ್ಟ ಶ್ರಮ ತೆರೆಯ ಮೇಲೆ ಕಾಣುತ್ತದೆ.

ಒಬ್ಬ ಅಪ್ಪನಾಗಿ ತಮ್ಮ ಮಗನಿಗೆ ಒಳ್ಳೆಯ ವೇದಿಕೆ ಸೃಷ್ಟಿಸಿದ್ದಾರೆ.
ಸಿನಿಮಾ ವಿಭಿನ್ನವಾಗಿ ತನ್ನದೇ ವೇಗದಲ್ಲಿ ನೋಡಿಸಿಕೊಂಡು ಹೋಗುತ್ತದೆ.
ಮತ್ತೊಮ್ಮೆ ಇಂದ್ರಜಿತ್ ತಾನೊಬ್ಬ ಕಲರ್ ಫುಲ್ ನಿರ್ದೇಶಕ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ನಿಭಾಯಿಸಿದ್ದಾರೆ.

ಸಮರ್ಜಿತ್ ಲಂಕೇಶ್ ತನ್ನ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡಿದ್ದಾನೆ. ಚಿತ್ರದಲ್ಲಿ ಮೂರು ಶೇಡ್ ಗಳಲ್ಲಿ ತನ್ನನ್ನು ತಾನು ಅಭಿನಯಕ್ಕೆ ಒಗ್ಗಿಸಿಕೊಂಡಿದ್ದಾನೆ.
ಹಳ್ಳಿಯಿಂದ ಡೆಲ್ಲಿಯ ವರೆಗೂ ಬೇರೆ ಬೇರೆ ಗೆಟಪ್ಪುಗಳಲ್ಲಿ ಮಿಂಚಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರನ್ನು ರಂಜಿಸುವಲ್ಲಿ ಪ್ರಯತ್ನಿಸಿದ್ದಾನೆ.
ಇನ್ನೂ ನಾಯಕಿಯಾಗಿ ಸಾನ್ಯ ಅಯ್ಯರ್ ಕೂಡ ತನ್ನ ಪಾತ್ರವನ್ನು ನಿಭಾಯಿಸಿದ್ದಾಳೆ. ಈಕೆ ಕೂಡ ಪಾತ್ರಕ್ಕೆ ಎಷ್ಠು ಬೇಕೋ ಅಷ್ಟು ತೆರೆಯ ಮೇಲೆ ಕಾಣಿಸಿಕೊಂಡಿದ್ದು ಪಾತ್ರಕ್ಕೆ ನ್ಯಾಯ ಒದಗಿಸಿರುವುದು ಕೂಡ ಶ್ಲಾಘನೀಯ ಎನ್ನಬಹುದು.
ಸಮರ್ಜಿತ್ ಹಾಗೂ ಸಾನ್ಯ ಇವರಿಬ್ಬರ ಕಾಂಬಿನೇಷನ್ ತೆರೆಯ ಮೇಲೆ ಮುದ್ದಾಗಿ ಕಾಣಿಸಿದೆ.

ಇನ್ನು ಚಿತ್ರದ ಛಾಯಾಗ್ರಹಕರಾದ ಎ.ವಿ. ಕೃಷ್ಣಕುಮಾರ್ ಪ್ರತೀಯೊಂದು ದೃಶ್ಯವನ್ನು ಸುಂದರವಾಗಿ ಸೆರೆ ಹಿಡಿದು ಚಿತ್ರದ ಯಶಸ್ಸಿಗೆ ಕೈ ಜೋಡಿಸಿದ್ದಾರೆ.
ಹಾಗೇ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತ ದೃಶ್ಯಕಾವ್ಯಕ್ಕೆ ಗಾನ ಲಹರಿ ಹರಿಸಿದೆ ಇದರ ಯಶಸ್ಸು ಜೆಸ್ಸೆ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೇರಗಿ, ಅನಿರುದ್ ಶಾಸ್ತ್ರಿ ಇವರಿಗೆ ಸಲ್ಲುತ್ತದೆ.
ಚಿತ್ರದಲ್ಲಿ ಯಾವುದೇ ಅನಗತ್ಯ ದೃಶ್ಯಗಳಿಲ್ಲ, ಯಾವುದೇ ಕೆಟ್ಟ ಸಂಭಾಷಣೆ ಇಲ್ಲ ತುಂಬಾ ವರ್ಷಗಳ ನಂತರ ಮನೆ ಮಂದಿ ಕೂತು ನೋಡುವಂತ “ಯು” ಸರ್ಟಿಫಿಕೇಟ್ ಸಿಕ್ಕಂತ ಚಿತ್ರ ಇದಾಗಿದೆ.
ಚಿತ್ರದ ಕಥೆ ಸಂಗೀತದ ಹಿನ್ನೆಲೆಯಲ್ಲಿ ಸಾಗುತ್ತದೆ.
ಒಂದಷ್ಟು ಅಂಗವಿಕಲರ ಬದುಕಿನ ಕನಸ್ಸಿಗೆ ನಿರ್ದೇಶಕರು ಜೀವ ತುಂಬುವಂತ ಕೆಲಸ ಈ ಕಥೆಯ ಮೂಲಕ ನಿಭಾಯಿಸಿದ್ದಾರೆ.


ಚಿತ್ರದ ನಾಯಕ ಸಮರ್ಜಿತ್ ಗ್ರಾಮೀಣ ಪ್ರತಿಭೆ, ಗಾಯಕನಾಗಲು ಪಡುವ ಕಷ್ಟವನ್ನು ಮನ ಮುಟ್ಟುವಂತೆ ಚಿತ್ರೀಕರಿಸಲಾಗಿದೆ. ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಪ್ರೇಕ್ಷಕರ ಗಮನ ಸೆಳೆಯುತ್ತದೆ.
ಒಟ್ಟಿನಲ್ಲಿ ಗೌರಿ ಪ್ರೇಕ್ಷಕರು ನೋಡ ಬಹುದಾದ ಒಂದು ಒಳ್ಳೆಯ ಕ್ಲಾಸ್ ಚಿತ್ರ ಎನ್ನಬಹುದು.