Gowri movie musical teaser released in ATM Engineering College classroom. ಕ್ಲಾಸ್ ರೂಂನಲ್ಲಿ `ಗೌರಿ’ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ !

ಕ್ಲಾಸ್ ರೂಂನಲ್ಲಿ `ಗೌರಿ’ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ !

ಸ್ಟಾರ್ ಕ್ರಿಕೆಟರ್; ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್‍ರಿಂದ ಟೀಸರ್ ಬಿಡುಗಡೆ

ಸಾಂಸ್ಕೃತಿಕ ನಗರಿ ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮವೋ ಸಂಭ್ರಮ. ಅಲ್ಲಿ ನೆರೆದಿದ್ದ ಜನರಲ್ಲಿ ಕುತೂಹಲ ಮನೆ ಮಾಡಿತ್ತು. ಇದೇ ಮೊದಲ ಬಾರಿಗೆ ಗೌರಿ’ ಚಿತ್ರ ತಂಡ ಕಾಲೇಜಿನ ಕ್ಲಾಸ್ ರೂಂನಲ್ಲಿ ಚಿತ್ರದ ಮ್ಯೂಸಿಕಲ್ ಟೀಸರ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು.

ಭಾರತದ ಸ್ಟಾರ್ ಕ್ರಿಕೆಟರ್; ಆರ್‍ಸಿಬಿಯ ಆಲ್‍ರೌಂಡರ್; ಕರ್ನಾಟಕದ ಹೆಮ್ಮೆಯ ಆಟಗಾರ್ತಿ ಶ್ರೇಯಾಂಕ ಪಾಟೀಲ್ಐ ಲವ್ ಯೂ ಸಮಂತ’ ಮ್ಯೂಸಿಕಲ್ ಟೀಸರನ್ನು ಬಿಡುಗಡೆಗೊಳಿಸಿದರು. ತೆರೆ ಮೇಲೆ ಟೀಸರ್ ಮೂಡುತ್ತಿದ್ದಂತೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಕುಣ ದು ಕುಪ್ಪಳಿಸಿದರು. ಕ್ಲಾಸ್ ರೂಂನಲ್ಲಿದ್ದ ಬೆಂಚ್ ಮೇಲೆ ಹತ್ತಿ ಶಿಳ್ಳೆ ಹೊಡೆಯುತ್ತಾ; ಐ ಲವ್ ಯೂ ಸಮಂತಾ’ ಹಾಡಿಗೆ ಡ್ಯಾನ್ಸ್ ಮಾಡಿ; ಸಂಭ್ರಮಿಸಿದರು. ಶ್ರೇಯಾಂಕ- ಸಮರ್ ಹುಕ್ ಸ್ಟೆಪ್: ಇದೇ ಸಂದರ್ಭದಲ್ಲಿಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಜೊತೆ ಟೈಂ ಬರುತ್ತೆ.. ಟೈಂ ಬರುತ್ತೆ..’ ಹಾಡಿಗೆ ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್ ಹುಕ್ ಸ್ಟೆಪ್ ಹಾಕುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.

ಶ್ರೇಯಾಂಕ- ಸಮರ್ ಡ್ಯಾನ್ಸ್‍ಗೆ ನೆರೆದಿದ್ದವರು ಫಿದಾ ಆಗಿ ಹೋದರು. ಒಮ್ಮೆಲೆ ನೂರಾರು ವಿದ್ಯಾರ್ಥಿಗಳು ಶ್ರೇಯಾಂಕ ಪಾಟೀಲ್ ಹಾಗೂ ಸಮರ್ಜಿತ್ ಲಂಕೇಶರನ್ನು ಮುತ್ತಿ ಕೊಂಡು ಅಭಿನಂದನೆಗಳ ಮಹಾಪೂರ ಹರಿಸಿದರು. ಆಟೋಗ್ರಾಫ್, ಸೆಲ್ಫಿಗೆ ಮುಗಿಬಿದ್ದರು. ಕ್ಲಾಸ್ ರೂಂನಲ್ಲಿ ಒಂದು ರೀತಿ ಹಂಗಾಮವೇ ಸೃಷ್ಟಿಯಾಯಿತು. ಕ್ಲಾಸ್ ರೂಂನಲ್ಲೇ ಕ್ರಿಕೆಟ್: ಮ್ಯೂಸಿಕಲ್ ಟೀಸರ್ ಬಿಡುಗಡೆಯ ನಂತರ ಕ್ಲಾಸ್ ರೂಂನಲ್ಲಿಯೇ ಶ್ರೇಯಾಂಕ ಕ್ರಿಕೆಟ್ ಆಡಿದ್ದು ನೆರೆದಿದ್ದವರನ್ನು ರೋಮಾಂಚನಗೊಳಿಸಿತು.

ಶ್ರೇಯಾಂಕ್ ವಿದ್ಯಾರ್ಥಿಗಳ ಬೌಲಿಂಗ್‍ಗೆ ಬ್ಯಾಟ್ ಬೀಸಿದರು. ಬಾಲ್ ಸಿಕ್ಕ ವಿದ್ಯಾರ್ಥಿಗಳಿಗೆ ಶ್ರೇಯಾಂಕರ ಆಟೋಗ್ರಾಫ್‍ನ ಬಾಲ್ ಅನ್ನು ಗಿಫ್ಟ್ ನೀಡಲಾಯಿತು. ಜೊತೆಗೆಗೌರಿ’ ಚಿತ್ರದ ವಿಶೇಷ ಚಾಕ್‍ಲೇಟ್‍ಗಳನ್ನು ಸಹ ವಿತರಿಸಲಾಯಿತು.
ಭರ್ಜರಿ ರೆಸ್ಪಾನ್ಸ್:
ಗೌರಿ’ ಚಿತ್ರ ತಂಡಕ್ಕೆ ಎಟಿಎಂಇ ಕಾಲೇಜಿನ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸ್ಪಂದನೆ; ಸ್ವಾಗತ ಕೋರಲಾಯಿತು.ಗೌರಿ’ ಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಾಯಕ ನಟ ಸಮರ್ಜಿತ್ ಲಂಕೇಶ್, ಖ್ಯಾತ ಕ್ರಿಕೆಟರ್ ಶ್ರೇಯಾಂಕ ಪಾಟೀಲ್.. ಇವರುಗಳು ಎಂಟ್ರಿಯಾಗುತ್ತಲೇ ವಿದ್ಯಾರ್ಥಿಗಳ ದಂಡೇ ಹರಿದುಬಂದು ಮುತ್ತಿಕೊಂಡಿತು.

ಅವರ ಅಭಿಮಾನಕ್ಕೆ, ಪ್ರೀತಿಗೆ ಚಿತ್ರ ತಂಡ ಮೂಕ ವಿಸ್ಮಿತಗೊಂಡಿತು. ಟೈಂ ಬರುತ್ತೆ..’ ಹಾಡಿನ ಮೂಲಕ ಸೌಂಡ್ ಮಾಡಿದ್ದಗೌರಿ’ ಚಿತ್ರತಂಡ ಇದೀಗ ಐ ಲವ್ ಯೂ ಸಮಂತಾ..’ ಹಾಡಿನ ಮೂಲಕ ರೋಮ್ಯಾಟಿಕ್ ಫೀಲ್ ನೀಡಿದೆ. ಮ್ಯಾಜಿಕ್ ಮಾಡಿಐ ಲವ್ ಯೂ ಸಮಂತಾ’
ಐ ಲವ್ ಯೂ ಸಮಂತಾ.. ಹಾಡು ಸಖತ್ ಮೋಡಿ ಮಾಡಿದೆ. ಕವಿರಾಜ್ ಸಾಹಿತ್ಯದ, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನದ ಈ ಹಾಡು ಇದೀಗ ಟ್ರೆಂಡ್ ಸೃಷ್ಟಿ ಮಾಡಿದೆ. ಯುವಕ-ಯುವತಿಯರಿಗೆ ಈ ಹಾಡು ಹಾಟ್ ಫೇವರಿಟ್ ಆಗಿದೆ.
ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ಮಿಸ್ ಟೀನ್ ಯುನಿವರ್ಸ್ ಸ್ವೀಜಲ್ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor