Gopi Lola movie review. ಗೋಪಿಲೋಲನ ಚೌಚೌಬಾತ್
ಚಿತ್ರ: ಗೋಪಿಲೋಲ
ಯು/ಎ. 2.ಘಂಟೆ,18 ನಿಮಷಗಳು
ಚಿತ್ರ ವಿಮರ್ಶೆ
ರೇಟಿಂಗ್ – 3/5
ನಿರ್ಮಾಪಕರು : ಎಸ್ ಆರ್. ಸನತ್ ಕುಮಾರ್
ನಿರ್ದೇಶಕರು : ಆರ್. ರವೀಂದ್ರ
ಸಂಗೀತ : ಮಿಥುನ್ ಅಶೋಕನ್
ಹಿನ್ನೆಲೆ ಸಂಗೀತ : ರಾಕೇಶ್ ಆಚಾರ್ಯ
ಸಂಕಲನ : ಕೆ.ಎಮ್. ಪ್ರಕಾಶ್
ಛಾಯಾಗ್ರಹಣ : ಜಿ.ಎಸ್. ವಾಲಿ
ತಾರಾಗಣ: ಜೋಸೈಮನ್, ಡಿಂಗ್ರಿ ನಾಗರಾಜ್, ಎಸ್.ನಾರಾಯಣ್, ಪದ್ಮವಾಸಂತಿ, ರೇಖಾದಾಸ್, ಕೆಂಪೇಗೌಡ, ಮಂಜುನಾಥ್ ಅರಸು, ನಿಮಿಷಾ ಕೆ.ಚಂದ್ರು, ಸಪ್ತಗಿರಿ ಮುಂತಾದವರು.
ಅದೊಂದು ಹಳ್ಳಿ , ಆ ಹಳ್ಳಿಯಲ್ಲಿ ನಡೆಯುವ ಹಳ್ಳಿಯ ಸಮಸ್ಯೆಗಳನ್ನು ಬಿಂಬಿಸಿರುವ ಚಿತ್ರ. ಗೋಪಿಲೋಲ.
ಹಳ್ಳಿ ಅಂದಮೇಲೆ ರೈತರ ಸಮಸ್ಯೆ, ಮಳೆ, ಬೆಳೆಗಳ ಕಷ್ಟ ಕಾರ್ಪಣ್ಯಗಳು ಇದ್ದೇ ಇರುತ್ತೆ.

ಇಲ್ಲಿ ರೈತರ ಭೂಮಿಯನ್ನು ಕಸಿಯುವ ತಿಮಿಂಗಲಗಳು ಹೊಂಚು ಹಾಕುತ್ತಿದ್ದರೆ, ಅದನ್ನು ಉಳಿಸಲು ಪ್ರಾಣ ಒತ್ತೆ ಇಟ್ಟು ಹೋರಾಡುವ ಧರ್ಮೇಗೌಡನ ಪಾತ್ರದಲ್ಲಿ ಎಸ್. ನಾರಾಯಣ್ ಅಭಿನಯಿಸಿದ್ದಾರೆ.
ರಾಸಾಯನಿಕದಿಂದ ನೈಸರ್ಗಿಕ ಕೃಷಿಗೆ ಬದಲಾಯಿಸುವ ಚಳುವಳಿಯನ್ನು ಧರ್ಮೇಗೌಡ (ಎಸ್. ನಾರಾಯಣ್) ಮುನ್ನಡೆಸಿದರೆ
ಧರ್ಮೇಗೌಡನ ಮಗ, ಗೋಪಿ (ಮಂಜುನಾಥ್ ಅರಸು) ಮತ್ತು ಲೀಲಾ (ನಿಮಿಶಾ ಕೆ ಚಂದ್ರು) ನಡುವೆ ಪ್ರೇಮಾಂಕುರವಾಗುತ್ತದೆ.
ಆದರೆ ಇವರಿಬ್ಬರ ನಡುವೆ ತಪ್ಪು ತಿಳುವಳಿಕೆಯಿಂದ ಒಬ್ಬರಿಗೊಬ್ಬರು ಮನಸ್ಥಾಪದಿಂದ ದೂರವಾಗುತ್ತಾರೆ.
ಗೋಪಿ ಆಗಾಗ್ಗೆ ಹಳ್ಳಿಯ ಇತರ ಹುಡುಗಿಯರೊಂದಿಗೆ ಚೆಲ್ಲಾಟವಾಡುತ್ತಿರುತ್ತಾನೆ.
ಇದರಿಂದಾಗಿ ಇಬ್ಬರ ನಡುವೆ ಒಂದು ರೀತಿಯಲ್ಲಿ ಪ್ರೇಮ ಸಮರವೇ ನಡೆಯುತ್ತದೆ. ಕೊನೆಗೆ ಅದು ಕೋರ್ಟ್ ಮೆಟ್ಟಿಲು ಏರುತ್ತದೆ. ಅದೇಕೋ ಇದು ಪ್ರೇಕ್ಷಕರಿಗೆ ಅತಿಯಾಯ್ತು ಎನಿಸುತ್ತದೆ.

ಇಲ್ಲಿ ಅಪ್ಪ ಮಗನ ತಿಕ್ಕಾಟ, ಕಿತ್ತಾಟ ಎರಡು ಇದೆ. ಸುಮ್ಮನೇ ಕೆಲಸವಿಲ್ಲದೆ ಊರು ಸುತ್ತುವ ಮಗನನ್ನು ಕಂಡು ಸದಾ ರೇಗುವ, ಬೈಯ್ಯುವ ಪೋಲಿ ಬಿದ್ದ ಮಗನ ಅಪ್ಪನ ಅಸಾಹಯಕಥೆ,
ಹಾಗೆಯೇ ತನ್ನನ್ನು ಪ್ರೀತಿಸಿ ಸುತ್ತಾಡಿ ಕೊನೆಗೆ ನೀನು ಬೇಡ ಎನ್ನುವ ಸೋಗಲಾಡಿ ನಾಯಕನ ಕಥೆಗೆ ಹಲವು ಟ್ವಿಷ್ಟ್ ಗಳವೆ.
ಕಥಾ ನಾಯಕ ಗೋಪಿ ಪಾತ್ರದಲ್ಲಿ (ಮಂಜುನಾಥ್ ಅರಸು) ಅಭಿನಯಿಸಿದ್ದಾರೆ.
ನಾಯಕಿಯಾಗಿ ನಿಮಿಷಾ ಜೊತೆಯಾಗಿದ್ದಾರೆ.
ಕನ್ನಡ ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಅಭಿನಯಿಸಿದ್ದಾರೆ.

ಹಿರಿಯ ನಟ ಜೋಸೈಮನ್ ಹಾಗೂ ತೆಲುಗಿನ ನಟ ಸಪ್ತಗಿರಿ ಭೂಗಳ್ಳರ ಪಾತ್ರದಲ್ಲಿ ಹಲವಾರು ಮಸಲತ್ತುಗಳನ್ನು ಮಾಡಿದ್ದಾರೆ.
ಹಿರಿಯ ನಟಿ ಪದ್ಮವಾಸಂತಿ ನಾಯಕನ ತಾಯಿಯಾಗಿ, ಎಸ್. ನಾರಾಯಣ್ ಹೆಂಡತಿಯ ಪಾತ್ರವನ್ನು ನಿಭಾಯಿಸಿದ್ದಾರೆ.
ಡಿಂಗ್ರಿ ನಾಗರಾಜ್, ಪದ್ಮವಾಸಂತಿ, ರೇಖಾದಾಸ್, ಕೆಂಪೇಗೌಡ ಮುಂತಾದ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಮಿಥುನ್ ಅಶೋಕನ್ ರವರ ಸಂಗೀತ, ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಹಾಗೂ ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

ಆರ್ ರವೀಂದ್ರ ನಿರ್ದೇಶನದ ಈ ಚಿತ್ರವು ಹಳ್ಳಿಯ ಪರಿಸರ, ಅಲ್ಲಿನ ಜನ ಜೀವನದ ಬಗ್ಗೆ ಹಾಗೂ ಅವರ ಸಮಸ್ಯೆಗಳನ್ನು ತೋರಿಸಿದ್ದಾರೆ. ನಿರ್ದೇಶಕರು ಕಥೆಯ ಬಗ್ಗೆ ಮತ್ತು ಪಾತ್ರವರ್ಗಗಳ ಬಗ್ಗೆ ಇನ್ನೂ ಒಂದಷ್ಟು ಗಮನ ಹರಿಸಿ ಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರೆ ಇನ್ನೂ ಒಳ್ಳೆಯ ಚಿತ್ರವಾಗುವುದರಲ್ಲಿ ಸಂಶಯವಿರಲಿಲ್ಲ. ಎನ್ನಬಹುದು.
ಈ ರೀತಿಯ ಚಿತ್ರಗಳು ಹಲವಾರು ಬಂದಿದೆಯಾದರೂ. ಚಿತ್ರದ ಕ್ಲೈಮ್ಯಾಕ್ಸ್ ಬೇರೆಯ ರೀತಿಯಲ್ಲಿ ಕೊನೆಗೊಳಿಸಿದ್ದಾರೆ.
ನಿರ್ಮಾಪಕ ಎಸ್. ಆರ್. ಸನತ್ ಕುಮಾರ್ ಕೃಷಿಗೆ ಸಂಭಂದಪಟ್ಟ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಪ್ರೇಕ್ಷಕರು ಅವರ ಕೈ ಹಿಡಿಯಬೇಕಷ್ಟೇ.

ಕಥಾ ನಾಯಕನ ಆಟಗಳು, ನಾಯಕಿಯ ಅಳಲು, ದ್ವೇಷ, ಧರ್ಮೇಗೌಡನ ರೈತರ ಭೂಮಿಯ ಪರ ಹೋರಾಟ, ಸಾವಯವ ಕೃಷಿ ಮತ್ತು ಭೂಗಳ್ಳರ ಹುನ್ನಾರ ಎಲ್ಲಾ ವಿಷಯಗಳಿಗೆ ಚಿತ್ರದ ಕೊನೆಯ ಸನ್ನಿವೇಷ ಉತ್ತರ ನೀಡುತ್ತದೆ.