Gentle man2 movie started in Channi ಚನೈನಲ್ಲಿ ಶುರುವಾಯ್ತು ಫ್ಯಾನ್ ಇಂಡಿಯಾ ಸಿನಿಮಾ “ಜಂಟಲ್ ಮ್ಯಾನ್ 2”
ದೊಡ್ಡ ದೊಡ್ಡ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದಂತಹ ನಿರ್ಮಾಪಕ ಕುಂಜುಮನ್ ನಿರ್ಮಾಣದಲ್ಲಿ ಜಂಟಲ್ ಮ್ಯಾನ್2 ಚಿತ್ರಕ್ಕೆ ಚನೈನಲ್ಲಿ ಅದ್ದೂರಿಯಾಗಿ ಚಾಲನೆ ದೊರೆತಿದ್ದು, ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ದೇಶಕ ಗೋಕುಲ್ ಕೃಷ್ಣ ವಹಿಸಿಕೊಂಡಿದ್ದಾರೆ.

ಚಿತ್ರಕ್ಕೆ ಬಹುದೊಡ್ಡ ಶಕ್ತಿ ಎಂದರೆ ಬಹು ಭಾಷೆಗಳಲ್ಲಿ ಸಂಗೀತ ನಿರ್ದೇಶನ ಮಾಡಿ ಸಂಗೀತ ವಲಯದಲ್ಲಿ ತನ್ನದೇ ಆದ ಛಾಪನ್ನು ಒತ್ತಿರುವ ಹಾಗೂ ಸಂಗೀತ ನಿರ್ದೇಶಕರ ಅಗ್ರಗಣ್ಯಸಾಲಿನಲ್ಲಿರುವ ಇತ್ತೀಚೆಗೆ RRR ಸಿನಿಮಾದ ನಾಟ್ಟು ನಾಟ್ಟು ಗೀತೆಗೆ ಆಸ್ಕರ್ ಪ್ರಶಸ್ತಿಯನ್ನು ಪಡೆದಂತ “ಪದ್ಮಶ್ರೀ ಶ್ರೀ ಎಂ.ಎಂ. ಕೀರವಾಣಿ” ಯವರು ಚಿತ್ರಕ್ಕೆ ಸಂಗೀತವನ್ನು ನೀಡಲಿದ್ದಾರೆ.

ಚಿತ್ರದ ನಾಯಕನಾಗಿ ಚೇತನ್ ಚೀನು, ನಯನ್ ತಾರಾ ಚಕ್ರವರ್ತಿ ಹಾಗೂ ಪ್ರಿಯಾ ಲಾಲ್ ನಾಯಕಿಯರಾಗಿ ತೆರೆಯ ಮೇಲೆ ಮಿಂಚಲಿದ್ದಾರೆ.
ಜೊತೆಗೆ ನಮ್ಮ ಕನ್ನಡದ ನಟಿ ಸುಧಾರಾಣಿ, ಸಿತಾರ, ಬಹು ಭಾಷಾ ನಟ ಸುಮನ್ ಹಾಗೂ ಮುಂತಾದ ನಟ, ನಟಿಯರ ಅಭಿನಯದಲ್ಲಿ ಮೂಡಿಬರಲಿರುವ “ಜಂಟಲ್ ಮ್ಯಾನ್ 2” ಚಿತ್ರದ ಮುಹೂರ್ತ ಅದ್ದೂರಿಯಾಗಿ ನಡೆಯಿತು.