Garadi official trailer. 1 million views. ಗರಡಿ ಟ್ರೇಲರ್ ಗೆ ಮಿಲಿಯನ್ ಗಟ್ಟಲೆ ವೀಕ್ಷಣೆ
ಗರಡಿ ಚಿತ್ರ ಇದೇ ನವಂಬರ್ 10 ರಂದು ರಾಜ್ಯದಾದ್ಯಂತ ತೆರೆಗೆ ಬರಲಿದ್ದು, ಈಗಾಗಲೆ ಚಿತ್ರದ ಟ್ರೇಲರ್ 1 ಮಿಲಿಯನ್ ವೀಕ್ಷಣೆಯಾಗಿ ಪ್ರೇಕ್ಷಕರಿಂದ ಜನ ಮನ್ನಣೆ ಗಳಿಸಿದೆ.
ಮಾಜಿ ಮಂತ್ರಿ ಬಿ.ಸಿ. ಪಾಟೀಲ್ ರವರ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಗರಡಿ ಒಳ್ಳೆಯ ಕುತೂಹಲವನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕಿದೆ.

ನಟ ದರ್ಶನ್ ಈ ಚಿತ್ರದಲ್ಲಿ ಈ ವರೆಗೂ ಮಾಡದಿರುವಂತ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ನಾಯಕ ನಟನಾಗಿ ಮತ್ತೆ ರೀ ಎಂಟ್ರಿ ಕೊಡುತ್ತಿರುವ ಯಶಸ್ ಸೂರ್ಯ ಒಂದಷ್ಟು ಸೆಂಟಿಮೆಂಟ್ ನೊಂದಿಗೆ ಪ್ರೀತಿ, ಪ್ರೇಮ ಹಾಗೂ ಆಕ್ಷನ್ ಕಥೆಗೆ ಮೊದಲ ಬಾರಿಗೆ ನಾಯಕನಾಗಿ ಮಿಂಚಲು ಸಿದ್ದರಾಗಿದ್ದಾರೆ. ಈ ಹಿಂದೆ ನಟಿಸಿರು ಚಿತ್ರಗಳ ಪಾತ್ರಕ್ಕಿಂತ ಈ ಗರಡಿಯ ಪಾತ್ರಕ್ಕೂ ಬಹಳ ವಿಭಿನ್ನವಾಗಿದ್ದು ಈ ಚಿತ್ರ ಯಶಸ್ ಸೂರ್ಯನ ಚಿತ್ರ ಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಹೇಳಬಹುದು.

ಪ್ರೀತಿ, ಪ್ರೇಮದ ಬಗ್ಗೆ ಚಿತ್ರದಲ್ಲಿ ಹಿರಿಯ ನಿರ್ದೇಶಕ ಯೋಗರಾಜ್ ಭಟ್ ಕಥೆ ಎಣೆದು ಆಕ್ಷನ್ ಕಟ್ ಹೇಳಿದ್ದಾರೆ.

ಭಟ್ರು ತಮ್ಮ ಚಿತ್ರದಲ್ಲಿ ಮಾಮೂಲಿಯಂತೆ ಬರೀ ಪ್ರೀತಿ ಪ್ರೇಮದ ಬಗ್ಗೆ ಚಿತ್ರದ ಕಥೆ ಎಣೆದಿಲ್ಲ ಮೊದಲ ಬಾರಿಗೆ ಹೂ ಹಿಡಿವ ಕೈ ತೊಡೆ ತಟ್ಟಿ ಅಖಾಡಕ್ಕೆ ಕರೆಯುವ ಮಾಸ್ ಹಾಗೂ ಒಂದಷ್ಟು ಭಾವನೆಗಳ ಮೇಲೆ ಪ್ರೇಮ ಪಲ್ಲವಿಯನ್ನು ಅರಳಿಸಿರುವ ಕ್ಲಾಸ್ ಚಿತ್ರ ಇದಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಚಿತ್ರ ನವಂಬರ್ 10ರಂದು ತೆರೆ ಕಾಣಲಿದೆ.