Forest Car shooting complete. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ “ಫಾರೆಸ್ಟ್ ಕಾರ್”
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ “ಫಾರೆಸ್ಟ್ ಕಾರ್”
ಮೆಡ್ಲೇ ಸ್ಟೂಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ “ಫಾರೆಸ್ಟ್ ಕಾರ್” ಅತ್ಯುತ್ತಮ ಫ್ಯಾಂಟಸಿ ಮತ್ತು ಹಾರಾರ್ ಕಥಾಹಾಂದರ ಹೊಂದಿದ್ದು ಅತ್ಯಾಧುನಿಕ ಹಾಗೂ ವಿಭಿನ್ನ ತಂತ್ರಜ್ಞಾನದಲ್ಲಿ ಉಪಯೋಗಿಸಿ ಚಿತ್ರೀಕರಿಸಿರುತ್ತಾರೆ. ಇದೀಗ ಚಿತ್ರ ತಂಡವು ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೋಡಕ್ಷನ್ ಕಾರ್ಯಗಳಲ್ಲಿ ತೊಡಗಿರುತ್ತದೆ. ಈ ಚಿತ್ರದ ಸಾರಥ್ಯವನ್ನು ಶ್ರೀ.“ಹರ್ಷಿತ್” ರವರು ವಹಿಸಿದ್ದು, ಶ್ರೀ ವೆಂಕಟೇಶ್ ನಲ್ಲಿಬಿಲ್ಲಿ ರವರು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಪ್ರವೀಣ್ ರೆಡ್ಡಿ ರವರು ನಾಯಕ ನಟರಾಗಿದ್ದು ಜೊತೆಗೆ ವರ್ಣಿಕ ಶೆಟ್ಟಿ ರವರು ಹೆಜ್ಜೆ ಹಾಕಿರುತ್ತಾರೆ. ಚಿತ್ರವು ಬೆಂಗಳೂರು, ಹೈದ್ರಾಬಾದ್ ಸುತ್ತಾ – ಮುತ್ತಾ ಚಿತ್ರೀಕರಣ ಮುಗಿಸಿರುತ್ತದೆ. ಅತಿ ಶೀಘ್ರದಲ್ಲಿ ತೆರೆಗೆ ಅಪ್ಪಳಿಸಲು ಸಿದ್ದವಾಗುತ್ತಿದೆ. ಚಿತ್ರವು ಎಲ್ಲಾ ವರ್ಗದ ಚಿತ್ರ ರಸಿಕರನ್ನು ಆಕರ್ಶಿಸಲು ಸಜ್ಜಾಗುತ್ತಿದೆ. ಮುಂದಿನ ವಿಷಯಗಳನ್ನು ಆದಷ್ಟು ಬೇಗ ಹೊರ ಹಾಕುವುದಾಗಿ ಚಿತ್ರ ತಂಡ ತಿಳಿಸಿದೆ.