for registration movie released on February 23rd. ಫೆಬ್ರವರಿ 23ಕ್ಕೆ ‘ಫಾರ್​ ರಿಜಿಸ್ಟ್ರೇಷನ್​’ ರಿಲೀಸ್…ಅದೃಷ್ಟದ ತಿಂಗಳಲ್ಲೇ ಅಖಾಡಕ್ಕಿಳಿದ‌ ಮಿಲನಾ-ಪೃಥ್ವಿ

ಫೆಬ್ರವರಿ 23ಕ್ಕೆ ‘ಫಾರ್​ ರಿಜಿಸ್ಟ್ರೇಷನ್​’ ರಿಲೀಸ್…ಅದೃಷ್ಟದ ತಿಂಗಳಲ್ಲೇ ಅಖಾಡಕ್ಕಿಳಿದ‌ ಮಿಲನಾ-ಪೃಥ್ವಿ

ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್‌ ನಟಿಸಿರುವ ‘ಫಾರ್‌ ರಿಜಿಸ್ಟ್ರೇಷನ್‌’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇಂದು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರತಂಡ ಸುದ್ದಿ ಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದೆ.‌ ಫೆಬ್ರವರಿ 23ಕ್ಕೆ ಸಿನಿಮಾವನ್ನು ತೆರೆಗೆ ತರೋದಾಗಿ ಚಿತ್ರತಂಡ ತಿಳಿಸಿದೆ.

ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ನಮಗೆ ಇದೊಂದು ರೀತಿ ಚಾಲೆಂಜಿಂಗ್ ಟೈಮ್. ತಡವಾಗಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನೇ ಹೊಣೆ ತೆಗೆದುಕೊಳ್ಳುತ್ತೇನೆ. ತುಂಬಾ ಕಾರಣಗಳಿಂದ ಸಿನಿಮಾ ತಡವಾಯ್ತು. ಒಳ್ಳೆ ಔಟ್ ಪುಟ್ ಕೊಡಲು ಸಮಯ ಹಿಡಿಯಿತು. ಕ್ವಾಲಿಟಿ ಹಾಗೂ ಟೆಕ್ನಿಕಲ್ ದೃಷ್ಟಿಯಿಂದ ಟೈಮ್ ತೆಗೆದುಕೊಳ್ತು. ಮಿಲನಾ ಹಾಗೂ ಪೃಥ್ವಿ ಪಾತ್ರಕ್ಕೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಕಂಪ್ಲೀಟ್ ಕಾಮಿಡಿ ಎಂಟರ್ ಟೈನರ್. ಪ್ಯಾಕೇಜ್ ಆಫ್ ಎಮೋಷನ್ ಹಾಗೂ ಡ್ರಾಮಾ ಚಿತ್ರದಲ್ಲಿದೆ. ಸೆನ್ಸಾರ್ ಆಗಿದ್ದು, ಫೆಬ್ರವರಿ 23ಕ್ಕೆ ಚಿತ್ರ ತೆರೆಗೆ ಬರ್ತಿದೆ ಎಂದು ತಿಳಿಸಿದರು.

ನಟ ಪೃಥ್ವಿ ಅಂಬರ್ ಮಾತನಾಡಿ, ದಿಯಾಗೂ ಮೊದಲು ಸಹಿ ಮಾಡಿದ ಚಿತ್ರವಿದು. ನನ್ನ ತುಳು ಚಿತ್ರ ರಿಲೀಸ್ ಆದಾಗ ನವೀನ್ ಸರ್ ಮಂಗಳೂರಿನಲ್ಲಿ ಇದ್ದರು. ಅಲ್ಲಿ ಸಿನಿಮಾ ನೋಡಿ‌ ಮೆಚ್ಚಿ ನನಗೆ ಕಾಲ್ ಮಾಡಿದರು. ಹಾಗೇ ನನ್ನ ಜರ್ನಿ ಫಾರ್ ರಿಜಿಸ್ಟರ್ ಜೊತೆ ಮುಂದುವರೆದಿದೆ. ಫ್ಯಾಷನೆಟೇಡ್ ಪ್ರೊಡಕ್ಷನ್ ನವೀನ್.ರಿಜಿಸ್ಟ್ರೇಷನ್ ಅನ್ನೋದು ಎಲ್ಲಾ ವಿಷಯಕ್ಕೂ ಬೇಕು. ಕಾರು, ಜಾಗಕ್ಕೆ ಮಾತ್ರವಲ್ಲ. ಸಂಬಂಧಗಳು ಸರಿಯಾದ ರೀತಿ ರಿಜಿಸ್ಟರ್ ಆಗಬೇಕು ಎಂದಾಗ ತುಂಬಾ ಸೂಕ್ಷ್ಮವಾಗಿ ಕಟ್ಟಿಕೊಂಡಿದ್ದಾರೆ.

ನಿರ್ಮಾಪಕರು ಹಾಗೂ ನಿರ್ದೇಶಕರು. ಸಂಬಂಧಗಳ ಬಗ್ಗೆ ಸಂಬಂಧಗಳು ರಿಜಿಸ್ಟರ್ ಆಗುವ ಬಗ್ಗೆ ತುಂಬಾ ಒಳ್ಳೆಯ ತಿಳಿ ಹಾಸ್ಯ ಇರುವ ಸಿನಿಮಾ ಎಂದರು.

ನಾಯಕಿ ಮಿಲನಾ ನಾಗರಾಜ್ ಮಾತನಾಡಿ, ನಾನು ನೋಡಿರುವ ಫ್ಯಾಷನೇಟೆಡ್ ನಿರ್ಮಾಪಕರಲ್ಲಿ ನವೀನ್ ಕೂಡ ಒಬ್ಬರು. ಇಂತಹ ನಿರ್ಮಾಪಕರು ಗೆಲ್ಲಬೇಕು. ಹೆಚ್ಚು ಸಿನಿಮಾ ಬರಬೇಕು. ನವೀನ್ ಅವರು ಪ್ರಿಪರೇಷನ್ ಆಗಿ ಬಂದಿದ್ದರು. ಚಿತ್ರದಲ್ಲಿ ಒಳ್ಳೆ ತಾರಾಬಳಗವಿದೆ. ನನ್ನ ಪೃಥ್ವಿ ಮೊದಲ ಬಾರಿಗೆ ಕಾಂಬಿನೇಷನ್, ಸ್ವೀಟ್ ಲವ್ ಸ್ಟೋರಿ ಫ್ಯಾಮಿಲಿ ಡ್ರಾಮಾ. ತುಂಬಾ ಜನಗಳಿಗೆ ಹತ್ತಿರವಾಗುವ ಸಿನಿಮಾ. ಹೊಡಿಬಡಿ ಇಲ್ಲ ಫೈಟ್ ಇಲ್ಲ. ಮ್ಯೂಸಿಕ್ ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದರು.

ನಿರ್ಮಾಪಕ ನವೀನ್ ರಾವ್ ಮಾತನಾಡಿ, ನಾನು ಡೈರೆಕ್ಟರ್ ಫಂಡ್ ಆಗಿ ಸಿನಿಮಾ ಶುರು ಮಾಡೋಣಾ ಎಂದು ಹೊರಟೆವು. ಅದು ಕಥೆ ಮಾಡ್ತಾ ಮಾಡ್ತಾ ಕಥೆ ಮಾತಾಡಲು ಶುರು ಮಾಡ್ತು. ಕಥೆಗೆ ಯಾರ್ ಪಾತ್ರ ಇರಬೇಕು. ಅದೇ ತರ ಎಲ್ಲಾ ಬೆಳೆದುಕೊಂಡು ಹೋಗಿ ಇಲ್ಲಿ ನಿಂತಿದ್ದೇವೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾ ಅನೌನ್ಸ್ ಮಾಡಿದ್ದೇವೆ ನಿಮ್ಮ ಸಹಕಾರ ಇರಲಿ ಎಂದರು.

ಮಿಲನಾ ನಟಿಸಿದ್ದ ‘ಲವ್​ ಮಾಕ್ಟೇಲ್​’ ಚಿತ್ರ 2020ರ ಫೆಬ್ರವರಿ ಸನಿಹ ಅಂದರೆ ಜ.31 ತೆರೆಕಂಡಿತ್ತು. ‘ಲವ್​ ಮಾಕ್ಟೇಲ್​ 2’ ಚಿತ್ರ 2022ರ ಫೆ.11ರಂದು ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಅದೇ ರೀತಿ ಪೃಥ್ವಿ ಅಂಬರ್​ ನಟಿಸಿದ್ದ ‘ದಿಯಾ’ ಚಿತ್ರ 2020ರ ಫೆ.7ರಂದು ತೆರೆಕಂಡು ಗಮನ ಸೆಳೆದಿತ್ತು. ಈಗ ಮಿಲನಾ ಮತ್ತು ಪೃಥ್ವಿ ಅಂಬರ್​ ಅವರು ಜೊತೆಯಾಗಿ ನಟಿಸಿರುವ ‘ಫಾರ್​ ರಿಜಿಸ್ಟ್ರೇಷನ್​’ ಸಿನಿಮಾ ಕೂಡ ಫೆಬ್ರವರಿ ತಿಂಗಳಲ್ಲೇ ರಿಲೀಸ್​ ಆಗುತ್ತಿರುವುದು ವಿಶೇಷ. 2023ರ ಫೆ.23ರಂದು ಈ ಸಿನಿಮಾ ತೆರೆಕಾಣಲಿದೆ.

ರಂಗಭೂಮಿ ಹಿನ್ನೆಲೆ ಹಾಗೂ ಸಾಕಷ್ಟು ಕಿರುಚಿತ್ರಗಳನ್ನು ಮಾಡಿ ಅನುಭವ ಹೊಂದಿರುವ ನವೀನ್‌ ದ್ವಾರಕನಾಥ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, “ನಿಶ್ಚಲ್‌ ಫಿಲಂಸ್‌ ‘ ಬ್ಯಾನರ್‌ನಲ್ಲಿ ನವೀನ್‌ ರಾವ್‌ ಬಂಡವಾಳ ಹೂಡಿದ್ದಾರೆ.

ರವಿಶಂಕರ್‌, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್‌ ಭಟ್‌, ಉಮೇಶ್‌ ಎಂಬ ದೊಡ್ಡ ತಾರಾ ಬಳಗವೇ ಇದೆ. ಚಿತ್ರದ ಚಿತ್ರಕಥೆ, ನಿರ್ದೇಶನ ದ್ವಾರಕನಾಥ್‌, ಸಂಗೀತ ಸಂಯೋಜನೆ ಆರ್‌.ಕೆ ಹರೀಶ್‌, ಅಭಿಲಾಷ್‌ ಕಲಾತಿ, ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್‌ ಸಂಕಲನ ಚಿತ್ರಕ್ಕಿದೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ‌ ಇಳಿದಿರುವ ದೀಪಕ್ ಗಂಗಾಧರ್ ಫಿಲ್ಮಂಸ್ ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor