Fighter movie Review ಫೈಟರ್ ಚಿತ್ರ ವಿಮರ್ಶೆ. ಟೈಗರ್ರನ್ನೇ ಮೀರಿಸಿದ ಮರಿ ಟೈಗರ್ ಅಭಿನಯ ಮನಮೋಹಕ
ಫೈಟರ್ ಚಿತ್ರ ವಿಮರ್ಶೆ
Rating -3.5/5
ಟೈಗರ್ರನ್ನೇ ಮೀರಿಸಿದ ಮರಿ ಟೈಗರ್ ಅಭಿನಯ ಮನಮೋಹಕ
ಇದು ಮರಿ ಟೈಗರ್ ಅಲ್ಲ ಈಗ ರಿಯಲ್ ಟೈಗರ್
ಹೌದು ಶಿಷ್ಯ ಗುರೂನ ಮೀರಿಸ ಬೇಕಂತೆ, ಮಗ ತಂದೆನ ಮೀರಿಸ ಬೇಕಂತೆ.
ಅದು ಒಬ್ಬ ಗುರು ಅಥವಾ ತಂದೆಗೆ ತುಂಬಾ ಹೆಮ್ಮೆಯ ವಿಷಯ.
ಇಂದು ವಿನೋದ್ ಅಭಿನಯ ನೋಡಲು ನಿಜಕ್ಕೂ ಟೈಗರ್ ಪ್ರಭಾಕರ್ ಬದುಕಿರ ಬೇಕಿತ್ತು ಅನ್ನಿಸುತ್ತದೆ.
ತಮ್ಮ ಮಗನನ್ನು “ಮೇಜರ್” ಚಿತ್ರದ ಮೂಲಕ ಬೆಳ್ಳಿ ತೆರೆಗೆ ತರುಲು ಸ್ವತಃ ಅವರೇ ನಿರ್ದೇಶನ ಮಾಡಿದ್ದರು. ದುರದೃಷ್ಟವಶಾತ್ ಅವರು ಕನ್ನಡ ಚಿತ್ರರಂಗದ ಲಕ್ಷಾಂತರ ಅಭಿಮಾನಿಗಳನ್ನ ಬಿಟ್ಟು ಬಾರದ ಲೋಕಕ್ಕೆ ಹೋದರು. ಇಂದು ಮಗನ ಅಭಿನಯದ ಕೌಶಲ್ಯತೆಯನ್ನು ನೋಡಲು ಅವರಿರ ಬೇಕಿತ್ತು ಅಂತ ಅವರದೇ ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ಬರದೇ ಇರಲ್ಲ.

ಇನ್ನು ಫೈಟರ್ ಚಿತ್ರದ ಬಗ್ಗೆ ಹೇಳಬೇಕೆಂದರೆ. ಚಿತ್ರದ ಕಥೆ, ಸಂಭಾಷಣೆಗೂ ಮೀರಿ ವಿನೋದ್ ಪ್ರಭಾಕರ್ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಚಿತ್ರದ ನಾಯಕಿ ತೆರೆಯ ಮೇಲೆ ಇದ್ದಷ್ಟು ಸಮಯ ಹೇಳುವುದೊಂದೆ ವಿನೋದ್ ಸುಂದರ ನಗು, ಸೌಮ್ಯವಾದ ಮುಖ ಆಕರ್ಷಣೆಯಾಗಿದೆ ಎಮನದು ಇದು ನಿಜಾ ಕೂಡ. ಫೈಟಿಂಗ್ ವಿಷಯದಲ್ಲಿ ಮೊದಲೇ ಹೇಳಿದಂತೆ ಟೈಗರ್ ಅವರನ್ನು ಮೀರಿಸಿದ ಅಭಿನಯ ಎನ್ನಬಹುದು.
ನಿರ್ದೇಶಕ ನೂತನ್ ಉಮೇಶ್ ರವರು ಇಂತಹ ಒಬ್ಬ ಒಳ್ಳೆಯ ನಟನನ್ನು ಇನ್ನೂ ಚನ್ನಾಗಿ ಬಳಸಿಕೊಳ್ಳ ಬಹುದಿತ್ತು,
ಇನ್ನೂ ಒಂದಷ್ಟು ಗಟ್ಟಿತನದ ಕಥೆ ಎಣೆಯಬಹುದಿತ್ತು ಅನ್ನಿಸುತ್ತದೆ. ಹಳೆಯ ದ್ವೇಷಕ್ಜೆ ಹೊಸ ತನದ ಬೆಂಕಿ ಸೃಷ್ಠಿಸಿದ್ದಾರೆ ನಿರ್ದೇಶಕರು.

ನಿರ್ಮಾಪಕರಾದ ಸೋಮಶೇಖರ್ ಚಿತ್ರಕ್ಕೆ ಚನ್ನಾಗಿ ಹಣ ಹೂಡಿರುವುದು ತೆರೆಯ ಮೇಲೆ ಕಾಣಿಸುತ್ತದೆ. ಒಬ್ಬ ಒಳ್ಳೆಯ ಫ್ಯಾಷನ್ ಇರೋ ನಿರ್ಮಾಪಕ ಎನ್ನುವುದನ್ನು ಅದ್ದೂರಿ ನಿರ್ಮಾಣದ ಮೂಲಕ ಸಾಬೀತುಪಡಿಸಿದ್ದಾರೆ.
ಚಿತ್ರದಲ್ಲಿ ವಿನೋದ್ ಗೆ ನಾಯಕಿಯರಾಗಿ ಇಬ್ಬರು ನಟಿಯರು ವಿನೋದ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.
ಮೊದಲರ್ಧದಲ್ಲಿ ಲೇಖಾ ಚಂದ್ರ ಡೈಲಾಗ್ ಮೂಲಕ ಅಬ್ಬರಿಸಿದ್ದಾರೆ. ನಿರ್ದೇಶಕರು ನಾಯಕನಿಗಿಂತ ನಾಯಕಿಗೆ ಹೆಚ್ಚು ಡೈಲಾಗ್ ಗಳನ್ನು ಕಿರಿ ಕಿರಿ ಎನ್ನುವಷ್ಟು ಕೆಲವು ಕಡೆ ಡಬ್ಬಲ್ ಮೀನಿಂಗ್ ರೀತಿಯಲ್ಲಿ ಹೇಳಿಸಿದ್ದಾರೆ. ಆದರೂ ನಟನೆಯಲ್ಲಿ ಲೇಖಾಚಂದ್ರ ಪರವಾಗಿಲ್ಲ ಎನ್ನಬಹುದು.

ಇನ್ನು ದ್ವಿತೀಯಾರ್ಧದಲ್ಲಿ ಬರುವ ನಟಿ ಪಾವನ. ಪಾವನ ಅಭಿನಯದಲ್ಲಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಿರೂಪಿಸಿ ಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕನ ಕಾಲೇಜಿನ ಒನ್ ವೇ ಪ್ರೇಮಿಯಾಗಿದ್ದು ಇದ್ದಕ್ಕಿದ್ದಂತೆ ಮತ್ತೆ ಸಿಗುವ ನಾಯಕ ಲಾಡು ಬಂದು ಬಾಯಿಗೆ ಬಿದ್ದಂತಾಗುವ ಅನುಭವ ನಾಯಕಿಗಾಗುತ್ತದೆ. ಪಾವನಿ ಇತಿ ಮಿತಿಯಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.
ಶರತ್ ಲೋಹಿತಾಶ್ವ , ಕುರಿ ಪ್ರತಾಪ್, ಹಿರಿಯ ನಟಿ ಗಿರಿಜಾ ಲೋಕೇಶ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಗುರುಕಿರಣ್ ರವರ ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಸಾಥ್ ನೀಡಿದೆ ಫಾಲೋಯು ಗೀತೆ ಎಲ್ಲರ ಮನ ಸೆಳೆಯುತ್ತದೆ. ಮೊದಲ ಬಾರಿ ಗುರುಕಿರಣ್ ವಿನೋದ್ ಚಿತ್ರಕ್ಕೆ ಜೊತೆಯಾಗಿರುವುದು ಚನ್ನಾಗಿದೆ.

ಇನ್ನು ಚಿತ್ರದ ಕಣ್ಣು ಛಾಯಾಗ್ರಾಹಕ ಚಿತ್ರದ ದೃಶ್ಯಗಳನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ ಹಾಗೂ ವಿನೋದ್ ಪ್ರಭಾಕರ್ ರವರನ್ನು ಬಹಳ ಮುದ್ದಾಗಿ ತೋರಿಸಿದ್ದಾರೆ ಇದರಿಂದಾಗಿ ಫೀಮೇಲ್ ಅಭಿಮಾನಿಗಳು ವಿನೋದ್ ಗೆ ಫಾಲೋ ಯು ಎನ್ನಬಹುದು.
ಚಿತ್ರದ ಕೊನೆಯಲ್ಲಿ ರೈತರ ಸಮಸ್ಯೆ ಬಗ್ಗೆ ನಿರ್ದೇಶಕರು ಚಿತ್ರದೊಳಗೆ ಸೇರಿಸಿದ್ದಾರೆ.

ಒಟ್ಟಿನಲ್ಲಿ ಪ್ರೇಕ್ಷಕ ಥಿಯೇಟರ್ ನಲ್ಲಿ ಕೂತು ವಿನೋದ್ ಗತ್ತು, ಗಮ್ಮತ್ತು, ಆಕ್ಷನ್, ಸುಂದರ ಮೈಕಟ್ಟು, ಮನಮೋಹಕವಾಗಿ ಅನುಭವಿಸಬಹುದು . ಚಿತ್ರ ಎಲ್ಲೂ ಬೋರ್ ಅನ್ನಿಸುವುದಿಲ್ಲ.