Ex Chief Minister, Ex Rajyapal, Ex Central minister SM Krishna is no more. ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾದ ಎಸ್. ಎಂ. ಕೃಷ್ಣ ಅಸ್ತಂಗತ

ಸೋಮನಹಳ್ಳಿ, ಮಲ್ಲಯ್ಯ ಕೃಷ್ಣ (S.M. Krishna) ಜನನ ಮೇ1-5-1932 ನಿಧನ 10-12-2024.

ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾದ ಎಸ್ ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ 2:30ಕ್ಕೆ ಇಹ ಲೋಕ ತೆಜಿಸಿದ್ದಾರೆ. ಇವರಿಗೆ 92 ವರ್ಷ ವಯಸ್ಸಾಗಿತ್ತು.

ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಕೃಷ್ಣ ರವರ  ಉಸಿರಾಟದಲ್ಲಿ ಏರುಪೇರಾಗಿ ಇದರಿಂದ ಆತಂಕ ಗೊಡ ಕುಟುಂಬಸ್ಥರು ವೈದ್ಯರಿಗೆ ಕರೆ ಮಾಡಿದ್ದಾರೆ, ಕೂಡಲೇ ವೈದ್ಯರ ಮನೆಗೆ ಆಗಮಿಸಿ ಪರೀಕ್ಷೆ ಮಾಡಿದ ನಂತರ. ಎಸ್‌ಎಂ ಕೃಷ್ಣ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೋಕಿನ ಸೋಮನಹಳ್ಳಿ ಗ್ರಾಮದಲ್ಲಿ ಎಸ್.ಸಿ‌.ಮಲ್ಲಯ್ಯ ಮತ್ತು ತಾಯಮ್ಮ ದಂಪತಿಗಳಿಗೆ ಪುತ್ರನಾಗಿ ಮೇ 1, 1932ರಲ್ಲಿ ಜನಿಸಿದ್ದರು.

ಶಾಲಾ ವಿದ್ಯಾಭ್ಯಾಸ ಮುಗಿಸಿದ ನಂತರ ಮೈಸೂರಿನಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದ ನಂತರ 1955 ರಲ್ಲಿ ಬೆಂಗಳೂರಿನ ಲಾ ಕಾಲೇಜಿನಲ್ಲಿ ಬಿ.ಎ. ಎಲ್.ಎಲ್ ಬಿ ಪದವಿ ಪಡೆದರು.

1958 ರಲ್ಲಿ ಉನ್ನತ ವ್ಯಾಸಂಗಕ್ಕೆ ಕೃಷ್ಣ ಅವರು ಅಮೆರಿಕಗೆ ತೆರಳುತ್ತಾರೆ. ಅಲ್ಲಿನ ಟೆಕ್ಸಾಸ್‌ನ ಡಲ್ಲಾಸ್ ನಗರದ ಸದರನ್ ಮೆಥಾಡಿಸ್ಟ್ ವಿವಿಯಲ್ಲಿ ಎಂ.ಸಿ.ಎಲ್ ಪದವಿ ಪಡೆಯುತ್ತಾರೆ. ನಂತರ ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿಗೆ ಸೇರುತ್ತಾರೆ ಆದರೆ ಅದು ಪೂರ್ಣವಾಗುವುದಿಲ್ಲ.

ಅಮೇರಿಕಾದಲ್ಲೇ ಇದ್ದ ಕೃಷ್ಣ ರವರು ಜಾನ್.ಎಫ್. ಕೆನಡಿ ಯವರ ರಾಜಕೀಯ ಪ್ರಭಾವಕ್ಕೆ ಒಳಗಾಗುತ್ತಾರೆ.

1960ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಜಾನ್. ಎಫ್. ಕೆನಡಿ ಸ್ಪರ್ಧಿಸಿದ್ದಾಗ ಅವರ ಪರವಾಗಿ S.M. ಕೃಷ್ಣ ಅವರು ಪ್ರಚಾರ ನಡೆಸಿದ್ದರು. ನಂತರ ಚುನಾವಣೆಯಲ್ಲಿ ಜಯ ಸಾಧಿಸಿದ ಜಾನ್. ಎಫ್. ಕೆನಡಿ ರವರು ಎಸ್‌ಎಂ ಕೃಷ್ಣ ಅವರಿಗೆ ಪತ್ರದ ಮೂಲಕ ಧನ್ಯವಾದ ತಿಳಿಸಿದ್ದರು.

ನಂತರ 1961 ರಲ್ಲಿ ಕೃಷ್ಣ ಅವರು ಉನ್ನತ ವ್ಯಾಸಂಗ ಮುಗಿಸಿ ಅಮೇರಿಕಾದಿಂದ ಭಾರತಕ್ಕೆ ಮರಳಿದರು.

ನಂತರ 1962ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ವಿಜಯ ಸಾಧಿಸಿ. ಕರ್ನಾಟಕ ರಾಜಕೀಯ ರಂಗಕ್ಕೆ ಕಾಲಿಟ್ಟರು. ನಂತರ ಹಲವಾರು ಬಾರಿ ಎಂಸ್‌ಎಂಕೆ ಕೆನಡಿ ತನ್ನ ರಾಜಕೀಯ ಗುರು ಎಂದು ಹೇಳಿಕೊಂಡಿದ್ದರು.

1962-1971ರ ವರೆಗೆ ಪ್ರಜಾ ಸೋಷಲಿಷ್ಟ್ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಕೃಷ್ಣರವರು ನಂತರ 1971ರಲ್ಲಿ ಕಾಂಗ್ರೆಸ್ ಪಾರ್ಟಿಗೆ ಸೇರುತ್ತಾರೆ. 1971ರಿಂದ 2017ರ ವರೆಗೆ ಕಾಂಗ್ರೆಸ್ ನಲ್ಲಿ ಸೇವೆ ಸಲ್ಲಿಸಿ. 2017 ರಲ್ಲಿ ಕಾಂಗ್ರೆಸ್ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿ 2017ರಲ್ಲಿ ಬಿಜೆಪಿಗೆ ಸೇರುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳುತ್ತಾರೆ. ನಂತರ ರಾಜಕೀಯದಿಂದ 2023ರ ಜನವರಿ 7 ರಂದು ಕೃಷ್ಣ ಅವರು ತಮ್ಮ 60 ವರ್ಷಗಳ ಸುರ್ಧೀಘ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು.

2023ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಇವರು ವಿಧಾನಸಭೆ ಸ್ಪೀಕರ್, ಉಪಮುಖ್ಯಮಂತ್ರಿ, ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

1989- 1993ರ ವರೆಗೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. ಹಾಗೂ 1993- 94ರಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಸರ್ಕಾರದ ಕ್ಯಾಬಿನೆಟ್ ನಲ್ಲಿ ಉಪ ಮುಖ್ಯಮಂತ್ರಿಯಾಗಿ ಬಡ್ತಿ ಪಡೆದರು. ನಂತರ 1999 – 2004ರ ವರೆಗೆ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸದರು.

ಇವರ ಅಧಿಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಐಟಿಬಿಟಿಯನ್ನು (ITBT) ತಂದರು. ಇಂದು ಬೆಂಗಳೂರು ಸಿಲಿಕಾನ್ ಸಿಟಿಯಾಗಿ ವಿಶ್ವದಲ್ಲಿ ಗುರುತಿಸಿ ಕೊಂಡಿರುವುದರಲ್ಲಿ S.M.ಕೃಷ್ಣರವರ ಅಂದಿನ ಶ್ರಮವೂ ಕೂಡ ಒಂದು. ಅಂದು S.M. ಕೃಷ್ಷ ರವರು ತೆಗೆದು ಕೊಂಡ ನಿರ್ಧಾರ ದಿಂದ ಇಂದು ಬೆಂಗಳೂರು ಮತ್ತು ಬೆಂಗಳೂರಿನ ಸುತ್ತಮುತ್ತ ಇಷ್ಟು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ. ನಂತರ 2004-2008ರ ವರೆಗೆ ಮಹಾರಾಷ್ಟ್ರದ ಗೌರ್ನರ್ ಆಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ನಂತರ 2009-2012 ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ (Minister of External Affairs of India) ಕಾರ್ಯ ನಿರ್ವಹಿಸಿದ ಏಕೈಕ ಕನ್ನಡದ ಮಣ್ಣಿನ ಒಕ್ಕಲಿಗ (ಗೌಡ) ಮನೆತನದ ರೈತ ಕುಟುಂಬದ ರಾಜಕಾರಣಿ ಎಂದರೆ ತಪ್ಪಾಗಲಾರದು. ಮಾತು, ನಡತೆಯಲ್ಲಿ ಎಂದು ಕೆಟ್ಟದಾಗಿ ನಡೆದುಕೊಂಡವರಲ್ಲ, ಯಾವುದೇ ಸಭೆ, ಸಮಾರಂಭಗಳಲ್ಲಿ ನಾಲಿಗೆ ಹರಿ ಬಿಟ್ಟವರಲ್ಲ, ಇಂದಿನ ರಾಜಕಾರಣಿಗಳಂತೆ ಅಸಹ್ಯ ಪದಗಳನ್ನು ಬಳಸಿದವರಲ್ಲ. ಅವರ ವ್ಯಕ್ತಿತ್ವದಂತೆ ಅವರ ಮಾತು ಮತ್ತು ನಡತೆ ಗಂಭೀರವಾಗಿತ್ತು. ಎನ್ನುವುದು ನಿಜಕ್ಕೂ ಅರ್ಥಪೂರ್ಣವಾದದ್ದು.

ವಿದ್ಯಾವಂತ, ಪ್ರಜ್ಞಾವಂತ, ಪ್ರಬುದ್ಧ ರಾಜಕಾರಣಿ S.M. ಕೃಷ್ಣ ಇನ್ನು ನೆನಪು ಮಾತ್ರ.

ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂಬುದು ನಮ್ಮ ಪ್ರಾರ್ಥನೆ.

ಮಂಜುರಾಜ್ ಸೂರ್ಯ. (Vcn ಮಂಜುನಾಥ್)

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor