Don Kumara ಡಾನ್ ಕುಮಾರ ಅಂಡರ್‌ವರ್ಲ್ಡ್ ರಿಯಲ್ ಕಥನ
ಡಾನ್ ಕುಮಾರ ಅಂಡರ್‌ವರ್ಲ್ಡ್ ರಿಯಲ್ ಕಥನ
ಭೂಗತ ಲೋಕದ ಚಿತ್ರಗಳು ಸಾಕಷ್ಟು ತೆರೆಕಂಡಿದೆ. ಆ ಸಾಲಿಗೆ ’ಡಾನ್ ಕುಮಾರ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ರಿಯಲ್ ಸ್ಟೋರಿ, ರಿಯಲ್ ಡಾನ್ ಎನ್ನುವ ಅಡಿ ಬರಹವಿದೆ. ಎನ್.ನಾಗೇಶ್‌ಕುಮಾರ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಗನ ಸಲುವಾಗಿ ತಂದೆ ಡಿ.ಎಂ.ನರಸೇಗೌಡರು ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು.
ನಿರ್ದೇಶಕರು ಹೇಳುವಂತೆ, ನಮ್ಮ ಸಿನಿಮಾವು ರೆಗ್ಯುಲರ್ ಥರ ಇರಲ್ಲ. ನಿರೂಪಣೆ ಎಲ್ಲವೂ ವಿಶೇಷವಾಗಿರುತ್ತದೆ. 15 ಸಾಹಸ ದೃಶ್ಯಗಳಿವೆ. ಎಲ್ಲವು ರಿಯಲ್ ಫೈಟ್ಸ್ ಆಗಿದ್ದು, ಸಾಮಾನ್ಯ ಮನುಷ್ಯ ಜಗಳವಾಡಿದರೆ ಹೇಗಿರುತ್ತೋ ಅದೇ ರೀತಿಯಲ್ಲಿ, ನಾಟಕೀಯದಂತೆ ಇರದೆ ಫೈಟ್ಸ್‌ಗಳನ್ನು ಸಂಯೋಜನೆ ಮಾಡಲಾಗಿದೆ. ಭೂಗತಲೋಕದ ಸನ್ನಿವೇಶಗಳು ಇದ್ದರೂ, ಲವ್, ರೋಮ್ಯಾನ್ಸ್, ತಂದೆ ತಾಯಿ ಸೆಂಟಿಮೆಂಟ್ ಎಲ್ಲವು ಇರಲಿದೆ. ರೌಡಿಸಂ ಯಾಕೆ ಆಗುತ್ತೆ. 1990-2000 ನಡೆದಂತ ಒಂದಷ್ಟು ಘಟನೆಗಳನ್ನು ಬಳಸಲಾಗಿದೆ. ಆದರೆ ಯಾವುದೇ ವ್ಯಕ್ತಿಗೆ ಅನ್ವಯಿಸುವುದಿಲ್ಲ ಎನ್ನುತ್ತಾರೆ.
ಶೀರ್ಷಿಕೆ ಹೆಸರಿನಲ್ಲಿ ಚಂದ್ರಶೇಖರ್ ನಾಯಕ. ಸಹನಾ ಮತ್ತು ಪ್ರಕೃತಿ ನಾಯಕಿಯರು. ಐಟಂ ಹಾಡಿಗೆ ನಮೃತಾಮಲ್ಲ ಹೆಜ್ಜೆ ಹಾಕಿದ್ದಾರೆ. ಉಳಿದಂತೆ ಮಿಮಿಕ್ರಿಗೋಪಿ ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆರವ್‌ಋಷಿಕ್ ಸಂಗೀತದ ಐದು ಗೀತೆಗಳಿಗೆ ಅನಿರುದ್‌ಶಾಸ್ತ್ರಿ, ಅನುರಾಧಭಟ್, ನಿಮಿಕಾರತ್ನಾಕರ್, ಅವಿನಾಶ್‌ಛಬ್ಬಿ ಕಂಠದಾನ ಮಾಡಿದ್ದಾರೆ. ಆನಂದ್‌ದಿಂಡವಾರ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, ಶ್ರೀನಿವಾಸ.ಪಿ.ಬಾಬು ಸಂಕಲನವಿದೆ. ಬೆಂಗಳೂರು,ಮೈಸೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸಿಂಗಪುರ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.