Divine star Rishabh Shetty released by Lovely movie trailer. ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ “ಲವ್ಲಿ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ವಸಿಷ್ಠ ಸಿಂಹನಿಗೆ ಸಾಥ್ ನೀಡಿದರು.
ರಿಷಭ್ ಶೆಟ್ಟಿ ಅವರಿಂದ ಬಿಡುಗಡೆಯಾಯಿತು ವಸಿಷ್ಠ ಸಿಂಹ ಅಭಿನಯದ “Love ಲಿ” ಚಿತ್ರದ ಟ್ರೇಲರ್ .
ಬಹು ನಿರೀಕ್ಷಿತ ಈ ಚಿತ್ರ ಜೂನ್ 14 ರಂದು ತೆರೆಗೆ .
ಅಭುವನಸ ಕ್ರಿಯೇಷನ್ಸ್ ಲಾಂಛನದಲ್ಲಿ ರವೀಂದ್ರ ಕುಮಾರ್ ಅವರು ನಿರ್ಮಿಸಿರುವ, ಚೇತನ್ ಕೇಶವ್ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯ ಹಾಗೂ ಕಂಠದಿಂದ ಜನಮನಸೂರೆಗೊಂಡಿರುವ ವಸಿಷ್ಠ ಸಿಂಹ ನಾಯಕರಾಗಿ ನಟಿಸಿರುವ “Love ಲಿ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಣದಲ್ಲಿ ರಿಷಭ್ ಶೆಟ್ಟಿ ಟ್ರೇಲರ್ ಬಿಡುಗಡೆ ಮಾಡಿದರು. ವಿನೋದ್ ಪ್ರಭಾಕರ್, ನವೀನ್ ಶಂಕರ್, ಗರುಡ ರಾಮ್, ಶಿವರಾಜ್ ಕೆ.ಆರ್ ಪೇಟೆ, ಆಶಿಕಾ ರಂಗನಾಥ್, ಪೃಥ್ವಿ ಅಂಬರ್, ಕೆ.ಮಂಜು, ಗುರುದೇಶಪಾಂಡೆ, ನರ್ತನ್(ನಿರ್ದೇಶಕ) ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ಚಿತ್ರಕ್ಕೆ ಶುಭ ಹಾರೈಸಿದರು.

ನಾನು “ಗೋಧಿ ಬಣ್ಣ ಸಾಧಾರಣ ಮೈಕಟ್ಟು” ಚಿತ್ರ ನೋಡಿ ವಸಿಷ್ಠ ಅವರ ಅಭಿನಯ ಹಾಗೂ ಕಂಠಕ್ಕೆ ಅಭಿಮಾನಿಯಾಗಿದ್ದೆ ಎಂದು ಮಾತನಾಡಿದ ರಿಷಭ್ ಶೆಟ್ಟಿ , ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ . ಚಿತ್ರ ಕೂಡ ಚೆನ್ನಾಗಿರುತ್ತದೆ ಎಂಬ ಭರವಸೆ ಇದೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಟ್ರೇಲರ್ ನೋಡಿದಾಗ ನಿಮಗೆ ಇದು ಆಕ್ಷನ್ ಚಿತ್ರ ನಾ? ಸೆಂಟಿಮೆಂಟ್ ಚಿತ್ರ ನಾ? ಎಂಬ ಪ್ರಶ್ನೆ ಮೂಡಬಹುದು. ಆದರೆ ಇದನೆಲ್ಲಾ ಟ್ರೇಲರ್ ನಲ್ಲಿ ತೋರಿಸಿದ್ದೇವೆ. ಸಿನಿಮಾದಲ್ಲಿ ಬೇರೆನೇ ಇದೆ. ಚಿತ್ರ ನೋಡುವಾಗ ನಿಮಗೆ ಉತ್ತರ ಸಿಗಲಿದೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರ ಎಂದು ಹೇಳಬಹುದು. ಚಿತ್ರ ಜೂನ್ 14 ರಂದು ತೆರೆಗೆ ಬರಲಿದೆ.
ನನ್ನ ಮೇಲೆ ನಂಬಿಕೆಯಿಟ್ಟು ನಿರ್ದೇಶನಕ್ಕೆ ಅವಕಾಶ ನೀಡಿದ ನಿರ್ಮಾಪಕ ರವೀಂದ್ರ ಕುಮಾರ್ ಅವರಿಗೆ, ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಅವರಿಗೆ ಮತ್ತು ನಾಯಕ ವಸಿಷ್ಠ ಸಿಂಹ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಚಿತ್ರತಂಡದ ಸಹಕಾರವೇ ಕಾರಣ ಎಂದರು ನಿರ್ದೇಶಕ ಚೇತನ್ ಕೇಶವ್.

“Love ಲಿ” ಚಿತ್ರದ ಆರಂಭದಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾನು ಚಿರ ಋಣಿ. ಅದರಲ್ಲೂ ಇಂದು “ಕಾಂತಾರ”ದ ಮೂಲಕ ಇಡೀ ವಿಶ್ವವೇ ಕನ್ನಡದ ಕಡೆ ತಿರುಗಿ ನೋಡುವಂತೆ ಮಾಡಿದ ರಿಷಭ್ ಶೆಟ್ಟಿ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದು ಬಹಳ ಖುಷಿಯಾಗಿದೆ. ಅವರಿಗೆ ಹಾಗೂ ನಮ್ಮ ಚಿತ್ರಕ್ಕೆ ಶುಭ ಕೋರಲು ಚಿತ್ರರಂಗದ ಗಣ್ಯರಿಗೆ ನನ್ನ ಧನ್ಯವಾದ. ನಮ್ಮ ಚಿತ್ರದಲ್ಲಿ ದತ್ತಣ್ಣ ಅವರಂತಹ ಹಿರಿಯ ನಟರು ಸೇರಿದಂತೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವಿದೆ. ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೇ ಜೂನ್ 14 ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರಮಂದಿರಗಳಲ್ಲೇ ನಮ್ಮ ಚಿತ್ರವನ್ನು ನೋಡು ಎಂದರು ನಾಯಕ ವಸಿಷ್ಠ ಸಿಂಹ.

“Love ಲಿ” ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಅನ್ನು ಮೆಚ್ಚಿರುವ ಜನರು ಚಿತ್ರವನ್ನು ಮುಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ನಮ್ಮ ಕರೆಗೆ ಓಗೊಟ್ಟು ಬಂದು ಟ್ರೇಲರ್ ಬಿಡುಗಡೆ ಮಾಡಿದ ರಿಷಭ್ ಶೆಟ್ಟಿ ಅವರಿಗೆ ವಿಶೇಷ ಧನ್ಯವಾದ ಎಂದರು ನಟಿ ಹರಿಪ್ರಿಯ.
ನಾಯಕಿ ಸ್ಟೆಫಿ ಪಟೇಲ್ ಸಹ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ಹಿರಿಯ ನಟ ದತ್ತಣ್ಣ, ನಟಿ ನಂದು, ಸಮೀಕ್ಷ, ಬೇಬಿ ವಂಶಿಕ ಹಾಗೂ ವಿತರಕರಾದ ಚಂದನ್ ಸುರೇಶ್, ಪೀಟರ್ (ಓವರ್ ಸೀಸ್) ಮುಂತಾದವರು ಚಿತ್ರದ ಕುರಿತು ಮಾತನಾಡಿದರು.