Director Association’s Mega offer. ಹಳೆಯ ಮತ್ತು ಹೊಸದಾಗಿ ನಿರ್ದೇಶಕರಾಗುವವರಿಗೆ ಸುವರ್ಣ ಅವಕಾಶ.
ಈಗಾಗಲೇ ನಿರ್ದೇಶಕರಾಗಿರುವವರಿಗೆ ಹಾಗೂ ಹೊಸದಾಗಿ ನಿರ್ದೇಶಕರಾಗುವವರಿಗೆ ಒಂದು ಸುವರ್ಣ ಅವಕಾಶ. ಅದೇನೆಂದರೆ ಸುಮಾರು ವರ್ಷಗಳಿಂದ ನಿರ್ದೇಶಕರಾಗಿ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದಲ್ಲಿ ನೊಂದಾಯಿತರಾಗಿ ನಿರ್ದೇಶಕರ ಕಾರ್ಡ್ ಪಡೆದು ಪ್ರತೀ ವರ್ಷ ವಾರ್ಷಿಕ ಶುಲ್ಕ ಕಟ್ಟಿಲ್ಲದಿದ್ದರೆ ಮಾರ್ಚ್ 31- 2024ರ ಒಳಗೆ ಕೇವಲ ಒಂದು ಸಾವಿರ ನೀಡಿ ತಮ್ಮ ತಮ್ಮ ಸದಸ್ಯತ್ವ ನವೀಕರಿಸಿಕೊಳ್ಳಬಹುದು. ಈ ಹಿಂದೆ ಎಷ್ಟೇ ವರ್ಷದ ಬಾಕಿ ಇದ್ದರೂ ಎಲ್ಲವೂ ಮನ್ನಾ.

ಹಾಗೆಯೇ ಹೊಸದಾಗಿ ನಿರ್ದೇಶನ ಮಾಡಿರುವವರು ಇನ್ನೂ ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದಲ್ಲಿ ನೊಂದಾಯಿಸಿ ಕೊಳ್ಳದಿದ್ದರೆ, ನಿರ್ದೇಶಕ ಕಾರ್ಡ್ ಅನ್ನು ಪಡೆಯದಿದ್ದರೆ ಈಗ ಇದೇ ಮಾರ್ಚ್ 31 – 2024ರ ಒಳಗೆ ಕೇವಲ 10,000 ಕೊಟ್ಟು ಸದಸ್ಯತ್ವದ ಕಾರ್ಡ್ ಪಡೆಯಬಹುದು. ಈ ಹಿಂದೆ ಕಾರ್ಡ್ ಪಡೆಯಲು 15 ಸಾವಿರ ಕೊಡಬೇಕಿತ್ತು. ಈ ಅವಕಾಶ ಮಾರ್ಚ್ 31ರ ವರೆಗೆ ಮಾತ್ರ, ಮತ್ತೆ ಹಳೆಯ ರೇಟ್ ನಲ್ಲಿ ಪಡೆಯ ಬೇಕಾಗುತ್ತದೆ. ಸಹಾಯಕ ಹಾಗೂ ಸಹ ನಿರ್ದೇಶಕರುಗಳು ಕೂಡ ಹೊಸದಾಗಿ ಸದಸ್ಯತ್ವ ಪಡೆಯಬಹುದಾಗಿದೆ.

ಸಹಾಯಕ ಹಾಗೂ ಸಹ ನಿರ್ದೇಶಕರುಗಳು ಕೂಡ ಹೊಸದಾಗಿ ಸದಸ್ಯತ್ವ ಪಡೆಯಬಹುದಾಗಿದೆ.
ಕರ್ನಾಟಕ ಚಲನ ಚಿತ್ರ ನಿರ್ದೇಶಕರ ಸಂಘದಲ್ಲಿ ಚಿತ್ರ ರಂಗದ ಹಾಗೂ ನಿರ್ದೇಶಕರ ಒಳಿತಿಗಾಗಿ ಹೊಸ ಯೋಜಗೆಗಳು ರೂಪೂಗೊಳ್ಳುತ್ತಿವೆ ಇದೊಂದು ಸುವರ್ಣ ಅವಕಾಶ ತಪ್ಪದೇ ಸದುಪಯೋಗ ಪಡಿಸಿಕೊಳ್ಳಿ ಎಂದು ಸಂಘದ ಅಧ್ಯಕ್ಷರಾದ ಎನ್ನಾರ್ಕೆ ವಿಶ್ವನಾಥ್, ಉಪಾಧ್ಯಕ್ಷರಾದ ನಾಗೇಂದ್ರ ಅರಸ್, ಜಗದೀಶ್ ಕೊಪ್ಪ, ಕಾರ್ಯದರ್ಶಿ ವಿಶಾಲ್ ಧೀರಜ್ , ಖಜಾಂಚಿ ಮಂಜುನಾಥ್ ದೈವಜ್ಞ , ಜಂಟಿ ಕಾರ್ಯದರ್ಶಿ ಸಾಯಿಕೃಷ್ಣ ಸ್ವಾಮಿ ( ಮಳವಳ್ಳಿ ಸಾಯಿಕೃಷ್ಣ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.
ನಿರ್ದೇಶಕರ ಕಾರ್ಡ್ ಝೆರಾಕ್ಸ್, ಆಧಾರ್ ಝೆರಾಕ್ಸ್, ಪಾನ್ ಝೆರಾಕ್ಸ್ ಬಾಕಿ ಇರುವವರು 1000 ರೂಪಾಯಿಗಳು ಹಾಗೂ ಹೊಸಬರು 10,000 ರೂಪಾಯಿಗಳ ಜೊತೆ ನಮ್ಮ ಕಛೇರಿಗೆ ಬಂದು ತಮ್ಮ ಸ್ವ-ವಿವರಗಳನ್ನು ಅರ್ಜಿಯಲ್ಲಿ ಭರ್ತಿಮಾಡಿ.
ಪುಟ್ಟಣ್ಣ ಕಣಗಾಲ್ ರವರು ಕಟ್ಟಿದ 40 ವರ್ಷಗಳ ಇತಿಹಾಸವಿರುವ ನಿರ್ದೇಶಕರ ಸಂಘದ
ಹೊಸ ಯೋಜನೆಗಳಿಗೆ ಕೈ ಜೋಡಿಸಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವನ್ನು ಬಲ ಪಡಿಸಿ ಎಂದು ವಿನಂತಿ.
.