Director Association Ignored by KFCC. ಅಧ್ಯಕ್ಷರೇ ತನನಂ ತನನಂ ಅಂತ ಚಪ್ಪಾಳೆ ತಟ್ಕೊಂಡು ಖುಷಿಯಿಂದ ಕ್ರೀಡೋತ್ಸವ ಮಾಡ್ತಿದ್ದೀರಾ.. ನಿರ್ದೇಶಕರನ್ನ ಕಡೆಗಣಿಸಿದ್ಯಾಕೆ..?
ಮಾನ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೇ ನೀವು ಅಧಿಕಾರ ವಹಿಸಿಕೊಂಡಾಗ ನೀವು ಏನಾದರು ಚಿತ್ರೋದ್ಯಮಕ್ಕೆ ಒಳ್ಳೆಯದು ಮಾಡುತ್ತೀರಿ ಅನ್ನೋ ನಂಬಿಕೆ ಇತ್ತು, ಆದರೆ ನೀವು ಹಬ್ಬದ ರೀತಿಯಲ್ಲಿ ನೀವಿನ್ನೂ ಸಂಭ್ರಮಿಸುತ್ತಿದ್ದೀರಿ ಸಂಭ್ರಮ ಬೇಕು ಆದರೆ ಎಲ್ಲಾ ಸರಿ ಇದ್ದಾಗ , ಚಿತ್ರ ರಂಗ ಭಯಂಕರ ಬರದಲ್ಲಿದೆ. ಬಿಡುಗಡೆಯಾದ ಸಿನಿಮಾಗಳು ಒಂದರ ಹಿಂದೆ ಮಖಾಡೆ ಮಲಗುತ್ತಿವೆ. ಅದರ ಬೆಳವಣಿಗೆಗೆ ಏನಾದ್ರೂ ಯೋಜನೆ ಹಾಕ್ತೀರಾ ಅಂದುಕೊಂಡಿದ್ದು ಸುಳ್ಳಾಯ್ತು, ಹಣ ಹಾಕಿದ ನಿರ್ಮಾಪಕರು ಮನೆ ಮಠ ಮಾರಿಕೊಂಡು ಬೀದಿಗೆ ಬೀಳುತ್ತಿದ್ದಾರೆ, ನಿರ್ಮಾಪಕ ಇದ್ದರೆ ಚಿತ್ರರಂಗ ಅನ್ನೋದನ್ನ ನೀವೆ ಸಿಕ್ಕ ಸಿಕ್ಕ ಕಡೆ ಎಲ್ಲಾ ಹೇಳಿಕೊಂಡು ಓಡಾಡುತ್ತೀರಿ ಈಗ ನಿಮ್ಮ ಕಣ್ಣಮುಂದೆನೇ ನಿರ್ಮಾಪಕನ ಕಣ್ಣಲ್ಲಿ ರಕ್ತ ಬರುವಂತಾಗಿದೆ. ನೀವು 90 ವರ್ಷದ ಸಂಭ್ರಮಕ್ಕೆ ವಾಣಿಜ್ಯ ಮಂಡಳಿಯ ಹಣವನ್ನ ಧಾರಾಳವಾಗಿ ಕರ್ಚು ಮಾಡುತ್ತಿದ್ದೀರಿ, ಕ್ರೀಡೆ ಹೆಸರಲ್ಲಿ ಜರ್ಸಿ ಹಾಕ್ಕೊಂಡು ಅಖಾಡಕ್ಕಿಳಿದ್ದೀರಾ ಆದರೆ ಅಳಿವಿನ ಹಂಚಿಗೆ ಸರಿಯುತ್ತಿರುವ ಚಿತ್ರರಂಗದ ಬಗ್ಗೆ ಯೋಜನೆ ಹಾಕಬೇಕಲ್ವಾ..? ಒಂದು ಸಿನಿಮಾಗೆ ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರು ಎರಡು ಕಣ್ಣಿದ್ದಂತೆ ಬರೀ ಹಣ ಇದ್ದರೆ ಸಿನಿಮಾ ಆಗಲ್ಲ ಬರೀ ಕನಸ್ಸುಗಳಿದ್ದರೆ ಸಿನಿಮಾ ಆಗಲ್ಲ ಇಲ್ಲಿ ಕನಸ್ಸುಗಳು ಸಾಕಾರವಾಗಬೇಕಾದರೆ ನಿರ್ಮಾಪಕನ ಹಣ ಬೇಕೆ ಬೇಕು ಅಂದರೆ ಚಿತ್ರರಂಗಕ್ಕೆ ಇವರಿಬ್ಬರೂ ಅತೀ ಮುಖ್ಯ ಅಂದಮೇಲೆ ನೀವು ಮಾಡುತ್ತಿರುವ ಕ್ರೀಡೆಗೆ ನಿರ್ದೇಶಕರನ್ನ ಕಡೆಗಣಿಸಿದ್ಯಾಕೆ ಇದು ಸರಿಯೇ..?
ನೀವು , ನಿಮ್ಮ ಕುಟುಂಬದವರು ಸಂಭ್ರಮಿಸುವಾಗ ನಿರ್ದೇಶಕರು ಅವರ ಕುಟುಂಬ ಹೊರಗೆ ನಿಂತು ಚಪ್ಪಾಳೆ ತಟ್ಟಬೇಕೆ..? ಇತ್ತೀಚೆಗೆ ನೀವು ಅರಮನೆ ಮೈದಾನದಲ್ಲಿ ಮಾಡಿದ ಕಾರ್ಯಕ್ರಮಕ್ಕೆ ನಿಮ್ಮವರೇ ಕುಟುಂಬ ಸಮೇತ ವೇದಿಕೆ ಮೇಲೆ ಆವರಿಸಿಕೊಂಡಿದ್ರಿ , ಅಲ್ಲೂ ಕೆಲವರನ್ನ ಹೊರಗಿಟ್ಟು ನಿಮ್ಮ ಮನೆ ಕಾರ್ಯಕ್ರಮದ ಹಾಗೆ ಕಳಪೆ ಕಾರ್ಯಕ್ರಮ ಮಾಡಿದ್ರಿ ಯಾಕೆ ನೀವು ಹೀಗೆ ಅಭಾಸಗಳನ್ನ ಮಾಡ್ಕೊತಿದ್ದೀರಿ..? ನಿಮ್ಮ ಮೇಲೆ ತುಂಬಾ ಭರವಸೆಗಳಿದೆ ನಮಗೆ, ಮುಂದಿನ ದಿನಗಳಲ್ಲಿ ಚಿತ್ರರಂಗದ ಯಶಸ್ಸಿಗೆ ದುಡಿಯುತ್ತೀರಿ ಅನ್ನೋ ನಂಬಿಕೆಯನ್ನ ಹುಸಿಗೊಳಿಸಬೇಡಿ.