director Association announce directors renewal offer last date 31st March.ನಿರ್ದೇಶಕರ ಸದಸ್ಯತ್ವದ ನವೀಕರಣ ಮಾಡುವವರಿಗೆ ಮತ್ತು ಹೊಸದಾಗಿ ಪಡೆಯುವವರಿಗೆ ವಿಶೇಷ ರಿಯಾಯಿತಿ ಮಾರ್ಚ್ 31ಕ್ಕೆ ಕೊನೆ.
ನಮಸ್ತೆ ಮಿತ್ರರೇ..🙏🙏
ಧೀಮಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಕಟ್ಟಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಭಿವೃದ್ಧಿ ಗಾಗಿ ಶ್ರಮವಹಿಸಬೇಕಾದದ್ದು ನಮ್ಮ ನಿಮೆಲ್ಲರ ಕರ್ತವ್ಯ.
ಎಲ್ಲಾ ನಿರ್ದೇಶಕರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಮಾರ್ಚ್ 31ರೊಳಗೆ ನವೀಕರಣ ಮಾಡುವವರಿಗೆ ಮತ್ತು ಹೊಸದಾಗಿ ಸದಸ್ಯತ್ವ ಪಡೆಯುವವರಿಗೆ ವಿಶೇಷ ರಿಯಾಯಿತಿಯನ್ನು ನೀಡಿದ್ದು ಅದು ಇದೇ ಮಾರ್ಚ್ 31ರೊಳಗೆ ಕೊನೆಗೊಂಡು ಏಪ್ರಿಲ್ ಒಂದರಿಂದ ಹಿಂದಿನಂತೆ ಯಥಾಪ್ರಕಾರವಾಗಿ ನಡೆಯಲಿದೆ.
ಜುಲಾಯಿ ತಿಂಗಳ ನಂತರದಲ್ಲಿ ಸದಸ್ಯರ ಯೋಗಕ್ಷೇಮಕ್ಕಾಗಿ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿದ್ದು ತಾವೆಲ್ಲರೂ ಅದರ ಭಾಗವಾಗಬೇಕೆಂಬುದು ನಮ್ಮ ಆಶಯವಾಗಿದೆ. ಎಲ್ಲರೂ ಕೈ ಜೊಡಿಸಿದಾಗ ಮಾತ್ರ ನಿರ್ದೇಶಕರ ಸಂಘದ ಅಭಿವೃದ್ಧಿ ಮತ್ತು ಸದಸ್ಯರ ಏಳಿಗೆ ಸಾಧ್ಯ.


ವಿ.ಸೂ: ಮಾರ್ಚ್ 31ರವರೆಗೆ ಎಪ್ಟು ವರ್ಷದ ಬಾಕಿ ಇದ್ದರೂ ಒಂದು ಸಾವಿರ ರೂಪಾಯಿ ಗಳನ್ನು ಪಾವತಿಸಿ ಅಪ್ಡೇಟ್ ಮಾಡಿಕೊಳ್ಳಬಹುದು. ಎಪ್ರಿಲ್ ಒಂದರಿಂದ ನಿಯಮಾನುಸಾರವಾಗಿ ವರ್ಷಕ್ಕೆ ಒಂದು ಸಾವಿರದಂತೆ ಕಟ್ಟಬೇಕಾಗುತ್ತದೆ. ನೀವುಗಳು ಅಲ್ಲದೆ ನಿಮ್ಮ ಮಿತ್ರ ನಿರ್ದೇಶಕರಿಗೂ ತಿಳಿಸಿ ಸಂಘದ ಅಭಿವೃದ್ಧಿಗೆ ಕಾರಣಕರ್ತರಾಗಬೇಕೆಂದು ಮನವಿ ಮಾಡುತ್ತಿದ್ದೇವೆ. ಇತ್ತೀಚೆಗೆ ನವೀಕರಿಸಿದವರಿಗೆ ಇದು ಅನ್ವಯಿಸುವುದಿಲ್ಲ
ಬನ್ನಿ ಕೈ ಜೋಡಿಸಿ. ಒಮ್ಮತದಿಂದ ಸಂಘವನ್ನು ಅಭಿವೃದ್ಧಿ ಪಡಿಸೋಣ..
ಅಧ್ಯಕ್ಷರು
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ಕಾನ್ಫಿಡ)
ಬೆಂಗಳೂರು