Dhiryam Sarvatra Sadhanam movie Song Released. ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಹಾಡು ಲೋಕಾರ್ಪಣೆಯಾಗಿದೆ.

ಧೈರ್ಯಂ ಸರ್ವತ್ರ ಸಾಧನಂ’ ಎಂಬ ಚಿತ್ರ ಇದೇ ಫೆಬ್ರವರಿ 23ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದೊಂದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಎ.ಆರ್. ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್‍ ಹಾಗೂ ಇತ್ತೀಚೆಗೆ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದೆ

ಎ.ಪಿ. ಪ್ರೊಡಕ್ಷನ್ಸ್ ಮುಖಾಂತರ ಆನಂದ್ ಬಾಬು ಜಿ ನಿರ್ಮಿಸಿರುವ ಈ ಚಿತ್ರದಲ್ಲಿ ನಾಯಕನಾಗಿ ವಿವಾನ್ ಹಾಗೂ ನಾಯಕಿಯಾಗಿ ಅನೂಷಾ ರೈ ನಾಯಕಿಯಾಗಿ ಅಭಿನಯಿಸಿದ್ದಾರೆ. ರವಿಕುಮಾರ್ ಸನಾ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ತುಮಕೂರು, ಕೊರಟಗೆರೆ, ದೇವರಾಯನದುರ್ಗ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ.

ಅವಮಾನ, ಆಕ್ರೋಶ, ಸೇಡು ಅಸಹಾಯಕಥೆಯೊಳಗೆ ಬೆಂದು ಕುದಿಯುವ ರಕ್ತದೊಳಗೆ ಮಿಂದು ಹೊರಬಂದಿದೆ ಗನ್ ಒಳಗಿನ ಬುಲ್ಲೆಟ್ ಈ ವಾರ ನೈಜ ಘಟನೆಯ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

ಇತ್ತೀಚಿಗೆ ಚಿತ್ರದ ಹಾಡು ಬಿಡುಗಡೆಯಾಗಿದ್ದು ಚಿತ್ರ ನೋಡುವ ಪ್ರೇಕ್ಷಕರಿಗೆ ಆಹ್ವಾನ ನೀಡುವಂತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor