Dheera Bhagat Rai movie review. ಶತಮಾನಗಳ ಹಿಂದಿನ ಕಥೆ ಮತ್ತೆ ಮತ್ತೆ ಜೀವಂತ
ಶತಮಾನಗಳ ಹಿಂದಿನ
ಕಥೆ ಮತ್ತೆ ಮತ್ತೆ ಜೀವಂತ
ಚಿತ್ರ ವಿಮರ್ಶೆ
ಚಿತ್ರ – ಧೀರ ಭಗತ್ ರಾಯ್
ನಿರ್ಮಾಣ
ನಿರ್ಮಾಪಕರು – ಅಶೋಕ್ ಕುಮಾರ್, ಪ್ರವೀಣ್ ಗೌಡ H.C. ಶ್ರೀನಾಥ್ ಬಾಬು ಪಾಟಿಲ್
ನಿರ್ದೇಶನ – ಕರಣ್ ಎಸ್.
ಛಾಯಾಗ್ರಹಣ – ಸೆಲ್ವಮ್ ಜಾನ್
ಸಂಗೀತ – ಪೂರ್ಣ ಚಂದ್ರ ತೇಜಸ್ವಿ
ಸಂಕಲನ – N.M. ವಿಶ್ವ
• ಕಲಾವಿದರು – ರಾಕೇಶ್ ದಳವಾಯಿ, ಸುಚರಿತ, ಮೂರ್ತಿ ಶರತ್ ಲೋಹಿತಾಶ್ವ, ನೀನಾಸಮ್ ಅಶ್ವಥ್, ಪ್ರವೀಣ್ ಗೌಡ H.C. ಹರಿರಾಮ್, ಮಠ ಕೊಪ್ಪಳ. ಮುಂತಾದವರು.

ಮೇಲು, ಕೀಳು, ಜಾತೀಯತೆ ಮತ್ತು ಸಿರಿತನ, ಬಡತನಗಳ ನಡುವಿನ ಹೋರಾಟದ ಬಗ್ಗೆ ಈಗಾಗಲೇ ಹಲವಾರು ಚಿತ್ರಗಳು ತೆರೆಕಂಡಿವೆ. ಅವುಗಳಲ್ಲಿ ಯಶಸ್ವಿಯಾಗಿ ಗಲ್ಲಾ ಪೆಟ್ಟಿಗೆ ತುಂಬಿದರೆ, ಇನ್ನೂ ಕೆಲವು ಹೇಳ ಹೆಸರಿಲ್ಲದೆ ನೆಲ ಕಚ್ಚಿವೆ.
ಶತಮಾನಗಳ ಹಿಂದಿನ ಜೀವಂತ ಕಥೆಗಳಿಗೆ ಇಂದಿಗೂ ಕೂಡ ಜೀವ ತುಂಬಿ ಪ್ರೇಕ್ಷಕರಿಗೆ ಉಣ ಬಡಿಸುತ್ತಿರುವುದು ಕೆಲವು ನಿರ್ದೇಶಕರ ಜೀವ ಮಾನದ ಆಸೆಗಳಾಗಿವೆ.
ಸಮಾಜ ಜಾತೀಯತೆಯ ಗೋಡೆಗಳನ್ನು ತುಳಿದು ಮುಂದೆ ಸಾಗುತ್ತಿದೆ ದಶಕಗಳ ಹಿಂದಿನ ಸಮಾಜಕ್ಕೂ ಇಂದಿನ ಸಮಾಜಕ್ಕೂ ಬಹಳ ಬದಲಾಗಿದೆ. ಹಾಗಂತ ಪೂರ್ತಿಯಾಗಿ ಬದಲಾವಣೆಯಾಗದಿದ್ದರೂ ಅಲ್ಲಲ್ಲಿ ಕೆಲವು ಕಡೆ ನಡೆಯುತ್ತಿವೆ.ಆದರೆ ಸಿನಿಮಾಗಳ ಮೂಲಕ ಇಂದಿನ ಪೀಳಿಗೆಯ ಮಕ್ಕಳಿಗೆ ಮತ್ತೆ ಮತ್ತೆ ಅದೇ ವಿಷವನ್ನು ಉಣ ಬಡಿಸುತ್ತಿರುವುದು ವಿಷಾದದ ವಿಷಯ.
ಇಂತಹ ಸಿನಿಮಾಗಳ ಮೂಲ ಉದ್ದೇಶ ತುಳಿತಕ್ಕೆ ಒಳಪಟ್ಟಿರುವ ಜನ ಸಾಮಾನ್ಯರ ಬದುಕಿಗೆ ಬೆಳಕು ಹರಿಸಿ ಸಮಾಜದ ಮುಖ್ಯವಾಹಿನಿ ಅವರನ್ನು ಕರೆದೊಯ್ಯುವ ಪ್ರಯತ್ನ ಆಗಿರುತ್ತದೆ.

ಈ ವಾರ ತೆರೆಕಂಡಿರುವ “ಧೀರ ಭಗತ್ ರಾಯ್’ ಕೂಡಾ ಇದೇ ನಿಟ್ಟಿನಲ್ಲಿ ಸಾಗುವ ಸಿನಿಮವಾಗಿದೆ.
1974ರಲ್ಲಿ ಭಾರತದಲ್ಲಿ ಜಾರಿಗೊಂಡ ಉಳುವವನೇ ಒಡೆಯ ಕಾನೂನು ಅನೇಕ ರೈತರಿಗೆ ಅನುಕೂಲವಾದರೆ ಇನ್ನು ಕೆಲವರಿಗೆ ಮುಳ್ಳಾಗಿದ್ದು ಸುಳ್ಳಲ್ಲ.
ಊಳುವ ರೈತರಿಗೆ ಭೂಮಿ ಬಂದ ಮೇಲೆ ಅವರ ಬದುಕು ಹಸನಾಗುವುದಕ್ಕಿಂತ ಗೊಂದಲ, ಸಮಸ್ಯೆ ಉಂಟಾಗುತ್ತದೆ.
ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ಜನ ಪರ ಹೋರಾಡುವ ಪಾತ್ರ ನಾಯಕ ನಟನದ್ದು
ಚಿತ್ರದ ಕಥೆಯಲ್ಲಿ ಭೂ ಸುಧಾರಣೆ ಕಾಯ್ದೆ ಬಂದಾಗ, ಜಮೀನ್ದಾರರು ಹೇಗೆ ರೈತರ ಭೂಮಿ ಕಬಳಿಸುತ್ತಾರೆ, ಅವರ ವಿರುದ್ಧ ನಾಯಕ ಹೇಗೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಾನೆ. ಈ ಹೋರಾಟದಲ್ಲಿ ಯಾರೆಲ್ಲಾ ಅಮಾಯಕರ ಜೀವ ಬಲಿಯಾಗುತ್ತದೆ. ಅದರ ಜೊತೆಗೆ ಅಂಬೇಡ್ಕರ್ ರವರ ಹೋರಾಟದ ತತ್ವ ಸಿದ್ಧಾಂತಗಳ ನೆರಳಿನಲ್ಲಿ
ಎಲ್ಲರಿಗೂ ಬದುಕುವ ಹಕ್ಕು ಸಂವಿಧಾನ ಕೊಟ್ಟಿದೆ ಎನ್ನುವುದನ್ನು ನಿರೂಪಿಸುತ್ತಾ ಸಾಗುವ ಸಿನಿಮಾ. ಸಿನಿಮಾದಲ್ಲಿ ಸಾಕಷ್ಟು ಹೋರಾಟಗಳ ಜೊತೆಗೆ, ಕಾನೂನಿನ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಪ್ರಯತ್ನನ್ನು ನಿರ್ದೇಶಕರು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಸಿನಿಮಾದಲ್ಲಿ ಒಂದಷ್ಟು ರಕ್ತಪಾತದ ಸನ್ನಿವೇಶಗಳನ್ನು ವಿಜ್ರಂಭಿಸಲಾಗಿದೆ. ಭೂಮಿಗಾಗಿ ಹಾಗೂ ಜಾತೀಯತೆಗಾಗಿ ಒಂದಷ್ಟು ಕೊಲೆಗಳಾಗಿ ಹೆಣಗಳು ಉರುಳುತ್ತವೆ. ಎನ್ನುವುದನ್ನು ಬಿಟ್ಟರೆ ಸಿನಿಮಾ ನೋಡಬಹುದು, ಹಾಗೆ ನೋಡಿಸಿಕೊಂಡು ಹೋಗುತ್ತದೆ.
ಕಲಾವಿದರಾಗಿ- ರಾಕೇಶ್ ದಳವಾಯಿ, ಸುಚರಿತ , ಮೂರ್ತಿ, ಶರತ್ ಲೋಹಿತಾಶ್ವ, ನೀನಾಸಮ್ ಅಶ್ವಥ್, ಪ್ರವೀಣ್ ಗೌಡ H.C. ಹರಿರಾಮ್, ಮಠ ಕೊಪ್ಪಳ. ಮುಂತಾದವರು. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ರಾಕೇಶ್ ದಳವಾಯಿ ಮೊದಲ ಬಾರಿಗೆ ನಾಯಕನಟ ನಾಗಿ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ.
ಹೋರಾಟಗಾರ ಮೂರ್ತಿಯವರು ಖಳ ನಟನಾಗಿ ಅಭಿನಯಿಸಿದ್ದಾರೆ
ಒಟ್ಟಿನಲ್ಲಿ ಗತಕಾಲದಲ್ಲಿ ಹಡಗಿರುವ ರಕ್ತಚರಿತ್ರೆಯ ಪುಟಗಳನ್ನು ಧೀರ ಭಗತ್ ರಾಯ್ ಚಿತ್ರದಲ್ಲಿ ನೋಡಬಹುದು.