Dhairyam Sarvatra Sadhanam movie Release on 23rd. February. ರಾಜ್ಯದಾದ್ಯಂತ ಬಿಡುಗಡೆ ಯಾಗಲಿದೆ “ಧೈರ್ಯಂ ಸರ್ವತ್ರ ಸಾಧನಂ” ಚಿತ್ರ.
ಧೈರ್ಯಂ ಸರ್ವತ್ರ ಸಾಧನಂ.’ ಧೈರ್ಯ ಇದ್ದರೆ ಎಂತಹ ಸಂಕಟದಿಂದಲೂ ಪಾರಾಗಿ ಬರಬಹುದು. ಧೈರ್ಯವು ಮನುಷ್ಯನ ರಕ್ಷಾ ಕವಚ ಎನ್ನುವುದು ಸತ್ಯದ ಮಾತು.
ಧೈರ್ಯಂ ಸರ್ವತ್ರ ಸಾಧನಂ’ ಚಿತ್ರ ಇದೇ ಫೆಬ್ರವರಿ 23ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಇದೊಂದು ನೈಜ ಘಟನೆಯಾಧಾರಿತ ಚಿತ್ರವಾಗಿದೆ, ಸಮಾಜ ಘಾತುಕರಿಂದ ತುಳಿತಕ್ಕೆ ಒಳಪಟ್ಟ ಅಮಾಯಕರ ಆಕ್ರೋಶದ ದಳ್ಳುರಿಯೇ ಈ ಕಥೆಯ ಮುಖ್ಯ ಹೂರಣ.

ಎ.ಆರ್. ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗೂ ಇತ್ತೀಚೆಗೆ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದೆ
ಧೈರ್ಯಂ ಸರ್ವತ್ರ ಸಾಧನಂ ಈ ಚಿತ್ರದಲ್ಲಿ ಹಂದಿ ಬೇಟೆ ಹಾಗೂ ಬಂದೂಕಿನ ಸದ್ದು ಜೋರಾಗಿದೆ ಜೊತೆಗೆ ಚಿತ್ರದಲ್ಲಿ ಹಲವು ಅಂಶಗಳನ್ನು ಹೇಳಲಾಗಿದೆ. ಚಿತ್ರದಲ್ಲಿ 15 ನಿಮಿಷದ ಗ್ರಾಫಿಕ್ಸ್ ಇದೆಯಂತೆ. 4 ರೀತಿಯ ಹಂದಿ 2 ಮೊಲ ಹಾಗೂ ಖಳನಾಯಕನ ಮನೆಯನ್ನು ಸಿಜಿ ಮೂಲಕ ಮಾಡಲಾಗಿದ್ದು, ತುಂಬಾ ನೈಜವಾಗಿ ಕಾಣುವಂತೆ ಸಿಜಿ ಕೆಲಸ ಮೂಡಿಬಂದಿದೆಯಂತೆ.
ಇತ್ತೀಚಿಗೆ ಚಿತ್ರದ ಹಾಡು ಬಿಡುಗಡೆಯಾಗಿದ್ದು ಚಿತ್ರಕ್ಕೆ ಪುಷ್ಠಿ ನೀಡಿದಂತಾಗಿದೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು , ಪ್ರೇಕ್ಷಕರನ್ನು ರಂಜಿಸಲು ನಾಳೆಯಿಂದ ನಿಮ್ಮೂರಿನ ಚಿತ್ರ ಮಂದಿರಗಳಗೆ ಬರಲಿದೆ.