Devara Aata Ballavararu ಗಿನ್ನಿಸ್‌ನ ಎರಡನೇ ಹೆಜ್ಜೆ ಇಟ್ಟು ಚಿತ್ರೀಕರಣ ಆರಂಭಿಸಿದ “ದೇವರ ಆಟ ಬಲ್ಲವರಾರು”

“ಗಿನ್ನಿಸ್‌ನ ಎರಡನೇ ಹೆಜ್ಜೆ ಇಟ್ಟು ಚಿತ್ರೀಕರಣ ಆರಂಭಿಸಿದ “ದೇವರ ಆಟ ಬಲ್ಲವರಾರು”

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುತ್ತದೆ. ಇಂತಹ ಸಿನಿಮಾಗಳು ಯಶಸ್ವಿ ಕೂಡ ಆಗಿದೆ. “ದೇವರ ಆಟ ಬಲ್ಲವರಾರು” ಸಿನಿಮಾ ಕೂಡ ಚಿತ್ರೀಕರಣ ಹಂತದಲ್ಲೇ ಸಾಕಷ್ಟು ಭರವಸೆ ಮೂಡಿಸಿದೆ. ಈ ಚಿತ್ರ ವೇಗದ ಸೆಟ್ ವರ್ಕ್ ನಿರ್ಮಾಣ ಮಾಡಿ ಮೊದಲ ಹಂತ ಗಿನ್ನಿಸ್ ದಾಖಲಿಸಿದೆ. ಇಗ ಎರಡನೇ ಹಂತದ ಗಿನ್ನಿಸ್ ಸರದಿ.

ಮಡಿಕೇರಿಯಲ್ಲಿ ಮಳೆಯಲ್ಲೇ ರಾತ್ರಿಯಿಂದ ಚಿತ್ರೀಕರಣ ಆರಂಭಿಸಿದೆ ಚಿತ್ರತಂಡ.

ಸಿ ವಿ ರಾಮನ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ದೇಶಕ ಜನಾರ್ದನ್ ಪಿ ಜಾನು
ಗಿನ್ನಿಸ್ ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ.

ಅತೀ ವೇಗದ ಕಮರ್ಷಿಯಿಲ್ ಮೂವಿ ನಿರ್ಮಾಣ ಮಾಡಿ ಗಿನ್ನಿಸ್ ದಾಖಲೆ ಬರೆಯಲು ಚಿತ್ರತಂಡ ಮುಂದಾಗಿದೆ.

ಚಿತ್ರೀಕರಣದ ಸ್ಥಳದಲ್ಲಿಯೇ 30 ದಿನಗಳ ಕಾಲ ಗಿನ್ನಿಸ್ ವೀಕ್ಷೆಣೆಯ ತಂಡದ ಸದಸ್ಯರು ಉಪಸ್ಥಿತರಿರುತ್ತಾರೆ.

ಇಂದಿನಿಂದ 30 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ, ಚಿತ್ರವನ್ನು ತರೆಗೆ ತರುವ ಪ್ರಕ್ರಿಯೆ ಆರಂಭವಾಗಿದೆ.

ಮಧ್ಯರಾತ್ರಿ 12ಗಂಟೆಯಿಂದ ಶೂಟಿಂಗ್ ಆರಂಭಿವಾಗಿದೆ. ದಿನದ 24 ಗಂಟೆಯೂ ಶೂಟಿಂಗ್, ಲೈವ್ ಎಡಿಟಿಂಗ್, ರೀರೆಕಾರ್ಡಿಂಗ್ ಎಲ್ಲಾ ಕಾರ್ಯಗಳು ಚಿತ್ರೀಕರಣ ಸ್ಥಳದಲ್ಲಿಯೇ ನಡೆಸಲು ಸಿದ್ಧತೆಯಾಗಿದೆ.

ಯಾವುದೇ ಅಡೆತಡೆ ಯಾಗದಂತೆ ಯೋಜನೆ ಹಾಕಿಕೊಂಡು ಚಿತ್ರಿಕರಣ ಆರಂಭಿಸಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಒಟ್ಟು 4 ಕ್ಯಾಮರಗಳು, 150 ಎಕರೆ ವಿಸ್ತೀರ್ಣದ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor