“Darshana” short movie press meet. ಒಳ್ಳೆಯದು ಮಾಡುವವನು, ಓ ಎನ್ನನೇ ಶಿವನು

ಒಳ್ಳೆಯದು ಮಾಡುವವನು, ಓ ಎನ್ನನೇ ಶಿವನು

    ’ದರ್ಶನ’ ಹದಿನೈದು ನಿಮಿಷದ ಕಿರುಚಿತ್ರವೊಂದು ಶಿವನ ಪರಿಕಲ್ಪನೆಯಲ್ಲಿ ಕಥೆಯು ಇರುವುದರಿಂದ, ಮಹಾ ಶಿವರಾತ್ರಿ ಹಬ್ಬದಂದು ಮಾಧ್ಯಮದವರಿಗೆ ವಿಶೇಷ ಪ್ರದರ್ಶನ ಏರ್ಪಾಟು ಮಾಡಲಾಗಿತ್ತು. ನಟ, ಮಾಜಿ ಮಂತ್ರಿ ಕುಮಾರ್ ಬಂಗಾರಪ್ಪ ಪುತ್ರ ಅರ್ಜುನ್ ಬಂಗಾರಪ್ಪ ಅಪ್ಪನಂತೆ ನಿರ್ಮಾಣ ಮಾಡುವುದರ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಗೆಳೆಯ ನಿತೀಶ್ ವಿನಯ್ ರಾಜ್ ರಚನೆ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

  ನಾಸ್ತಿಕ ಹುಡುಗನೊಬ್ಬ ಇರುಳಿನಲ್ಲಿ ಬುಲೆಟ್ ಓಡಿಸುತ್ತಾ ಕಾಡಿನ ದಾರಿಯಲ್ಲಿ ಹೋಗುವಾಗ ದುಷ್ಟರು ಬರುತ್ತಾರೆ. ಆಗ ಅಪರಿಚಿತ ವ್ಯಕ್ತಿ ಈತನನ್ನು ಕಾಪಾಡಿ, ದೇವಸ್ಥಾನಕ್ಕೆ ಬಲವಂತವಾಗಿ ಕರೆದುಕೊಂಡು ಹೋಗುತ್ತಾರೆ. ಮಾರನೇ ದಿವಸ ಗೆಳೆಯನೊಂದಿಗೆ ಅದೇ ಸ್ಥಳಕ್ಕೆ ಭೇಟಿ ನೀಡಿದಾಗ ವ್ಯಕ್ತಿಯು ಇರುವುದಿಲ್ಲ. ಅಲ್ಲಿಗೆ ಬಂದದ್ದು ದೇವರು ಅಂತ ತಿಳಿದು ಶಿವಲಿಂಗದ ಮುಂದೆ ಶರಣಾರ್ಥಿಯಾಗಿ ಭಕ್ತಿಪರವಶದಿಂದ ಸಾಷ್ಟಾಂಗ ನಮಸ್ಕಾರ ಮಾಡುವುದರೊಂದಿಗೆ ತೆರ ಬೀಳುತ್ತದೆ.

  ನಂತರ ಮಾತನಾಡಿದ ನಿರ್ದೇಶಕರು ಇಂಜಿನಿಯರಿಂಗ್ ನಂತರ ಅರ್ಜುನ್‌ಗೆ ಒನ್ ಲೈನ್ ಹೇಳಿದಾಗ ಖುಷಿಪಟ್ಟು ಹಣ ಹೊಡಲು ಆಸಕ್ತಿ ತೋರಿಸಿದ್ದೇ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ದೇವರನ್ನು ನಂಬದೇ ಇದ್ದರೂ ಬದುಕಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಾ ಹೋದರೆ, ದೇವರು ಯಾವುದೋ ರೂಪದಲ್ಲಿ  ಕಾಪಾಡುತ್ತಾನೆ. ಈ ತಾತ್ಪರ್ಯವನ್ನೇ ಚಿತ್ರದಲ್ಲಿ ತೋರಿಸಲಾಗಿದೆ. ಈಗಾಗಲೇ ಪುಣೆ, ಮುಂಬೈ, ಔರಂಗಬಾದ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಂದಿದೆ. ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಸ್ಪರ್ಧೆಯಲ್ಲಿ 6000 ಚಿತ್ರಗಳ ಪೈಕಿ, ಟಾಪ್ 100 ಕಿರುಚಿತ್ರ ಆಯ್ಕೆ ಮಾಡಲಾಗಿ, ಅದರಲ್ಲಿ ನಮ್ಮದು ಒಂದು ಆಗಿತ್ತು. ಶಾರ್ಟ್‌ಫಿಲ್ಮ್ ಆದರೂ ದೊಡ್ಡ ಸಿನಿಮಾದಂತೆ ಮಾಡಲಾಗಿದೆ. 
ಶಿವಪಾತ್ರಧಾರಿ ನೀರಿನಲ್ಲಿ ಕಣ್ಣು ತೆಗೆಯುವ ದೃಶ್ಯವನ್ನು ಸೆರೆಹಿಡಿಯಲು ಆರು ಗಂಟೆ ಸಮಯ ತೆಗೆದುಕೊಂಡಿತು ಎಂದು ನಿತೀಶ್ ವಿನಯ್ ರಾಜ್ ಚಿತ್ರೀಕರಣ ಅನುಭವಗಳನ್ನು ಹೇಳುತ್ತಾ ಹೋದರು.

   ಅಣ್ಣ ಊರಿಗೆ ಹೋಗಿದ್ದರಿಂದ ಅವನ ಪರವಾಗಿ ನಾನು ಬಂದಿರುವೆ. ನಮ್ಮದು ಫಿಲಂ ಉದ್ಯಮದಲ್ಲಿ ತೊಡಗಿಕೊಂಡಿದ್ದರಿಂದ ಅದನ್ನೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಆತನು ಮುಂದೆ ಚಿತ್ರದಲ್ಲಿ ನಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾನೆ. ತೆರೆ ಹಿಂದೆ ಏನೇನು ನಡಿತಿದೆ. ಅದನ್ನೆಲ್ಲಾವನ್ನು ಕಲಿಯಬೇಕು ಎನ್ನುವ ದೃಷ್ಟಿಯಿಂದ ಕಿರುಚಿತ್ರ ಸಿದ್ದಪಡಿಸಲಾಗಿದೆ ಎಂದು ಲಾವಣ್ಯಬಂಗಾರಪ್ಪ ಕಿರು ಪರಿಚಯ ಮಾಡಿಕೊಂಡರು.

  ತಾರಾಗಣದಲ್ಲಿ ಶ್ಲೋಕ್ ಸಹ್ನಿ, ಶ್ರೀಧನ್, ಚೇತನ್.ಎಸ್., ಮನೋಜ್‌ಗೌಡ, ದತ್ತಣ್ಣ, ಸಾಯಸುದರ್ಶನ್, ಕುಂದರ್.ಪಿ.ಎಸ್, ಅಲೆನ್, ಗಗನ್‌ಗೌಡ ಅಭಿನಯಿಸಿದ್ದಾರೆ. ಸಂಗೀತ ಹರ್ಷವರ್ಧನ್‌ರಾಜ್, ಛಾಯಾಗ್ರಹಣ ಹರ್ಷಿತ್.ಬಿ.ಗೌಡ, ಸಂಕಲನ ದೀಪಕ್.ಸಿ.ಎಸ್. ಸಾಹಸ ರವಿ ಅವರದಾಗಿದೆ. ರೇಣುಕಾಂಬ ಯೂಟ್ಯೂಬ್ ಚಾನೆಲ್‌ದಲ್ಲಿ ’ದರ್ಶನ’ ವೀಕ್ಷಿಸಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor