Choose mantar movie Review. ಛೂ ಮಂತರ್ ಚಿತ್ರ ವಿಮರ್ಶೆ. “ಇದು ಮಾಮೂಲಿ ಹಾರರ್ ಸಿನಿಮಾ ಅಲ್ಲ “
ಚಿತ್ರ ವಿಮರ್ಶೆ
ಚಿತ್ರ – ಛೂ ಮಂತರ್
ನಿರ್ಮಾಣ ಸಂಸ್ಥೆ –
ನಿರ್ಮಾಪಕರು – ಮಾನಸ ತರುಣ್ ಹಾಗೂ ತರುಣ್ ಶಿವಪ್ಪ
ನಿರ್ದೇಶನ – ನವನೀತ್
ಛಾಯಾಗ್ರಹಣ – ಅನೂಪ್ ಕಟ್ಟಕಾರನ್
ಸಂಗೀತ – ರಸೂಲ್ ಪುಕ್ಕುಟಿ, ಅವಿನಾಶ್ ಬಸೂತ್ಕರ್
Rating – 3/5
ಕಲಾವಿದರು – ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ, ಮೇಘನ ಗಾಂವ್ಕರ್, ಪ್ರಭು ಮುಂಡ್ಕರ್, ರಂಜನಿ ರಾಘವನ್ ಮುಂತಾದವರು.
ಮಾಮೂಲಿ ಹಾರರ್ ಸಿನಿಮಾ ಕಥೆಗಳಿಗೆ ಜೋತು ಬೀಳದೆ ಹೊಸದೊಂದು ರೀತಿಯಲ್ಲಿ ಟ್ವಿಸ್ಟ್ ಗಳನ್ನು ನೀಡುತ್ತ, ಯಾರು ಊಹಿಸದ ರೀತಿಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ನೊಂದಿಗೆ ಛೂ ಮಂತರ್ ಮಾಡಿದ್ದಾರೆ.
ಇಲ್ಲಿ ಗತಕಾಲದಿಂದ ಇಂದಿನ ಲ್ಯಾಂಡ್ ಮಾಫಿಯಾ ವರೆಗೆ ಕಥೆಯನ್ನು ನಾಜೂಕಾಗಿ ಎಣೆದಿದ್ದಾರೆ.
ಸ್ವತಂತ್ರ ಪೂರ್ವ ಬ್ರಿಟಿಷರು ಲೂಟಿ ಮಾಡಿದ ನಮ್ಮ ದೇಶದ ಸಂಪತ್ತಿನ ನಿಧಿಯ ಸುತ್ತ ಕಥೆ ಸಾಗುತ್ತದೆ.
ಸಂಪತ್ತಿಗಾಗಿ ಹೆಣಗಳು ಉರುಳಿವೆ. ಈ ನಿಧಿಗಾಗಿ
ತಲೆಮಾರುಗಳ ತಲೆ ಉರುಳಿವೆ. ಇಂದಿನ ಕಾಲ ಘಟ್ಟಕ್ಕೆ ಹಾಗೂ ಇಂದಿನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಿರ್ದೇಶಕ ನವನೀತ್ ಮಾಡಿದ್ದಾರೆ.
ಶರಣ್ ಮೊದಲಬಾರಿಗೆ ಮಾಂತ್ರಿಕನಾಗಿ ಹಾಗೂ ದೆವ್ವಗಳ ಹಂಟರ್ ಆಗಿ ಪಾತ್ರ ನಿರ್ವಹಿಸಿದ್ದಾರೆ.
ಶರಣ್ ರವರಿಗೆ ಅಭಿನಯ ಹೊಸದೇನಲ್ಲ. ಯಾವುದೇ ಪಾತ್ರ ಕೊಟ್ಟರು ಅದರಲ್ಲಿ ಜೀವಿಸಿ ಬಿಡುತ್ತಾರೆ.
ಮೇಘನ ಗಾಂವ್ಕರ್ ನಿಜಕ್ಕೂ ಅದ್ಬುತವಾಗಿ ಪಾತ್ರ ನಿಭಾಯಿಸಿದ್ದಾರೆ. ಪ್ರೇಕ್ಷಕರಿಗೆ ಮೈ ಜುಮ್ಮೆನ್ನಿಸುವಂತೆ ಮೈ ಮರೆತು ಪಾತ್ರವನ್ನು ಮೆರೆಸಿದ್ದಾರೆ.
ಇನ್ನು ಅದಿತಿ ಪ್ರಭುದೇವ ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಆದರೆ ಅವರ ಪಾತ್ರಕ್ಕೆ ಅಂತಹ ಪ್ರಾಮುಖ್ಯತೆ ಹೆಚ್ಚಾಗೇನಿಲ್ಲ.
ಚಿಕ್ಕಣ್ಣ ಕೂಡ ಚಿತ್ರದುದ್ದಕ್ಕೂ ಶರಣ್ ಜೊತೆ ಕಾಣಿಸಿಕೊಂಡಿದ್ದಾರೆ ಸಹಜ ಅಭಿನಯದೊಂದಿಗೆ ಪ್ರೇಕ್ಷಕರನ್ನು ನಗಿಸುತ್ತಾರೆ.
ಸಿನಿಮಾದಲ್ಲಿ ಕ್ಯಾಮರಾ ಕೆಲಸವನ್ನು ಅನೂಪ್ ಕಟ್ಟಕಾರನ್ ಅಚ್ಚುಕಟ್ಟಾಗಿ ನಿಭಾಯಿಸುವುದರ ಜೊತೆಗೆ ಸಂಗೀತ ಸಂಯೋಜಕರಾದ ರಸೂಲ್ ಪುಕ್ಕುಟಿ ಮತ್ತು ಅವಿನಾಶ್ ಬಸೂತ್ಕರ್ ಚಿತ್ರಕ್ಕೆ ಮತ್ತಷ್ಟು ಮೆರಗು ತಂದಿದ್ದಾರೆ.
ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳುವುದಾದರೆ ಇದೊಂದು ಕಾಮಿಡಿ ಹಾರರ್, ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಎನ್ನಬಹುದು.