Chilli chicken movie review ಚಿಂಕಿ ಪಿಂಕಿಗಳ ಚಿಲ್ಲಿ ಚಿಕನ್ ಇದೊಂದು ವಲಸಿಗರ ಬವಣೆಯ ಚಿತ್ರ ಚಿತ್ರ ವಿಮರ್ಶೆ.

ಇದೊಂದು ವಲಸಿಗರ ಬವಣೆಯ ಚಿತ್ರ
ದೂರದ ರಾಜ್ಯಗಳಿಂದ ಬದುಕನ್ನು ಅರಸಿ ಬರುವ ಉತ್ತರ ಭಾರತದ ವಲಸಿಗರ ಕಥೆ ಕನ್ನಡದ ಒಂದು ಸಿನಿಮವಾಗಿದೆ.
ಇತ್ತೀಚೆಗೆ ಕರ್ನಾಟಕಕ್ಕೆ ಉತ್ತರ ಭಾರತದಿಂದ ಕೆಲಸಕ್ಕಾಗಿ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಇದು ಕರ್ನಾಟಕಕ್ಕೆ ವರವೂ ಹೌದು ಶಾಪವು ಹೌದು.
ಇದು ಹೊಟೆಲ್ ಗಳಲ್ಲಿ ಕೆಲಸ ಮಾಡುವ ಉತ್ತರ ಭಾರತದ ಹುಡುಗರ ಭವಣೆ, ಕಷ್ಟ ಕಾರ್ಪಣ್ಯಗಳು ಚಿಲ್ಲಿ ಚಿಕನ್ ನಲ್ಲಿ ಬೆರೆತಿವೆ. ಇದು ಫೆಷ್ಟಿವಲ್ಗೆ ಹೇಳಿ ಮಾಡಿಸಿದಂತ ಚಿತ್ರ. ಕನ್ನಡ ಬರದ ಹುಡುಗರಿಗೆ ಕನ್ನಡ ಹೇಳಿಕೊಟ್ಟು ಅವರ ಶೈಲಿಯಲ್ಲೇ ಕನ್ನಡ ಮಾತಾಡಿಸಿರೋದು ನಿರ್ದೇಶಕರ ಸಾಹಸವೇ ಸರಿ.

ತಮ್ಮನ್ನು ಹೋಟೆಲ್ ಗೆ ಬರುವ ಗ್ರಾಹಕರು ಗೌರವದಿಂದ ಮಾತಾಡಿಸ ಬೇಕು ತಮ್ಮ ಹೆಸರುಗಳಿಂದಲೇ ಕರೆಯ ಬೇಕು ಎನ್ನುವುದು ಈ ವಲಸಿಗರ ಅಜೆಂಡಾ.

ಇದೊಂದು ಹೊಸಬರ, ಹೊಸತನದ, ಹೊಸಕಥೆಯ ಚಿತ್ರ.

ಇಲ್ಲಿನ ಕಥಾ ನಾಯಕ ಆದರ್ಶ ಉದ್ಯಮಿಯಾಗಬೇಕು ಎಂಬ ಹಂಬಲದವನು ಚೈನೀಶ್ ರೆಸ್ಟೋರೆಂಟ್ ತೆಗೆದು ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾನೆ. ಬಳಿಕ ಅದು ನ್ಯೂಡಲ್ ಹೌಸ್ ಆಗುತ್ತದೆ..

ಆದರೆ ಅವನ ಅದೃಷ್ಟ ಕೈಕೊಡುವಂತಹ ಘಟನೆಗಳೇ ಹೆಚ್ಚು ನಡೆಯುತ್ತವೆ. ಕ್ಯಾಷ್ ಕೌಂಟರ್ ನಿಂದ ಹಣ ಕಳುವಾಗುತ್ತಿರುತ್ತದೆ, ಹೊಟೆಲ್ ನಲ್ಲಿ ಕೆಲಸ ಮಾಡುವ ಹುಡುಗನ ಕೊಲೆ ಆಕಸ್ಮಿಕವಾಗಿ ಆಗುತ್ತದೆ. ನಂತರ ಹೋಟೆಲ್ ಬದುಕು ದುಸ್ತರವಾಗುತ್ತದೆ ನಂತರ ಹೆಣದ ಸುತ್ತ ಚಿಲ್ಲಿ ಚಿಕನ್ ಗಿರಕಿ ಹೊಡೆಯುತ್ತದೆ.

ತಮ್ಮ ಸಹಪಾಟಿಯ ಹೆಣವನ್ನು ಅವರ ರಾಜ್ಯಕ್ಕೆ ಕಳುಹಿಸಲು ಆ ಹುಡುಗರು ಪಡುವ ಶ್ರಮ ಹೇಳ ತೀರದು.
ನಿರ್ದೇಶಕರು ಒಂದು ಕಡೆ ಕನ್ನಡಿಗರನ್ನು, ಕರ್ನಾಟಕದ ಪೋಲಿಸರನ್ನು ಕೆಟ್ಟದಾಗಿ ತೋರಿಸಿದ್ದಾರೆ. ಇವರು ಫೆಸ್ಟಿವಲ್ಗೆ ಸಿನಿಮಾವನ್ನು ಕಳಿಸಿದರೆ ಬೇರೆಯವರು ನಮ್ಮ ರಾಜ್ಯದ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅನ್ನೋ ಪರಿಜ್ಞಾನ ಇಲ್ಲ ಇವರಿಗೆ.
ಒಟ್ಟಿನಲ್ಲಿ ಒಂದು ಹೋಟೆಲ್ ನಲ್ಲಿ ನಡೆಯವ ಒಳ ಅವಾಂತರಗಳನ್ನು ಚಿಲ್ಲಿ ಚಿಕನ್ ನಲ್ಲಿ ನೋಡಬಹುದು.

ಈ ಹೋಟೆಲ್ ಏನಾಗುತ್ತದೆ, ಹುಡುಗರು ಏನಾಗುತ್ತಾರೆ, ಹೆಣ ಏನಾಗುತ್ತದೆ ಎನ್ನುವುದನ್ನು ತಿಳಿಯಲು ಚಿಲ್ಲಿ ಚಿಕನ್ ರುಚಿ ನೋಡಲು ಚಿತ್ರ ಮಂದಿರಕ್ಕೆ ಬರಬೇಕು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor