Chilli chicken Kannada movie trailer released. ಚಿಲ್ಲೀ ಚಿಕನ್ ಟ್ರೇಲರ್ ಬಿಡುಗಡೆ.

ಹೋಟೆಲ್ ಕೆಲಸಮಾಡುವ ಐವರು ಹುಡುಗರ ಸುತ್ತ ನಡೆಯುವ ಕಥೆ ಇಟ್ಟುಕೊಂಡು ಪ್ರತೀಕ್ ಪ್ರಜೋಷ್ ಅವರು ನಿರ್ದೇಶಿಸಿರುವ ಚಿತ್ರ ಚಿಲ್ಲಿ ಚಿಕನ್. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು.
ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಾ ಚೈನೀಸ್ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಬೇಕೆಂಬ ಕನಸು ಕಾಣುವ ಈ ಹುಡುಗರ ಕನಸಿಗೆ ಏನೆಲ್ಲಾ ಅಡೆ ತಡೆಗಳು ಬರುತ್ತವೆ ಎಂಬ ಒನ್ ಲೈನ್ ಕಥೆ ಇಟ್ಟುಕೊಂಡು ‘ಚಿಲ್ಲಿ ಚಿಕನ್’ ಸಿನಿಮಾ ಮಾಡಲಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ನೈಜ ಘಟಕ ಆಧಾರಿತ ಸಿನಿಮಾ ಎಂಬುದು ವಿಶೇಷ.

ಕಳೆದ ತಿಂಗಳು ಟೀಸರ್ ಬಿಡುಗಡೆ ಮಾಡಿದ್ದ ಈ ಚಿತ್ರತಂಡ ಇದೀಗ ಟ್ರೇಲರ್ ಹೊರತಂದಿದೆ. ಈ ಚಿತ್ರದ ಕಥೆ ಹುಟ್ಟಿರುವುದೇ ವಿಶೇಷವಾದ ಸ್ಥಳದಲ್ಲಿ. ಹೌದು ರೆಸ್ಟೋರೆಂಟ್ ವೊಂದರಲ್ಲಿ ಕುಳಿತಾಗ ಸಂಗೀತ ನಿರ್ದೇಶಕ ಸಿದ್ಧಾಂತ ಸುಂದರ್ ಅವರಿಗೆ ಈ ಕಾನ್ಸೆಪ್ಟ್ ಹೊಳೆದಿದೆ. ಅದನ್ನು ನಿರ್ದೇಶಕ ಪ್ರತೀಕ್ ಪ್ರಜೋಶ್ ಅವರಿಗೆ ಹೇಳುತ್ತಾರೆ. ಅವರು ಆ ಒಂದು ಲೈನ್ ಕಥೆಯ ಮೇಲೆ ಸಾಕಷ್ಟು ವರ್ಕ್ ಮಾಡಿ ಈಗ ಸಿನಿಮಾ ಮಾಡಿ ಬಿಡುಗಡೆಗೆ ಸಿದ್ದಗೊಳಿಸಿದ್ದಾರೆ.


ಈ ಕುರಿತು ಮಾತನಾಡುವ ಸಂಗೀತ ನಿರ್ದೇಶಕರು ‘ಸದ್ಯ ಎಲ್ಲೆಡೆ ನಮ್ಮ ಚಿತ್ರದ ಬಗ್ಗೆ ಜನ ಮಾತಡ
ಇದ್ದಾರೆ. ಪ್ರತೀಕ ಈ ಸಿನಿಮಾ ಮಾಡಲು ನೂರು ಸಲ ಪ್ರಯತ್ನ ಮಾಡಿದ್ದು,ಅವರಿಗೆ ಇದು ನೂರನೇ ಸಿನಿಮಾ ಎನ್ನಬಹುದು. ನೈಜ ಘಟನೆಯನ್ನು ಕಥೆ ಮಾಡಿ ಸಿನಿಮಾ ಮಾಡೋದು ಸುಲಭವಲ್ಲ. ಚಿತ್ರ ಚನ್ನಾಗಿ ಬಂದಿದೆ.‌ ಚಿತ್ರದಲ್ಲಿ ೫ ಹಾಡುಗಳಿದ್ದು ಅವುಗಳಿಗೆ ರ್ಯಾಪರ್ ಮಾರ್ಟಿನ್ ಯೋ ಸಾಹಿತ್ಯ ಬರೆದಿದ್ದಾರೆ. ಇದು ಕನ್ನಡಿಗರಷ್ಟೇ ಅಲ್ಲ ನಾನ್ ಕನ್ನಡಿಗರು ಸಹ ನೋಡಲೇ ಬೇಕಾದ ಚಿತ್ರ. ಇದರಲ್ಲಿ ಒಳ್ಳೇ ಕಥೆ, ಜೊತೆಗೆ ಮನರಂಜನೆ ಎಲ್ಲಾ ಇದೆ ಎಂದು ಹೇಳಿದರು.

ನಿರ್ದೇಶಕ ಪ್ರತೀಕ್ ಪ್ರಜೋಶ್. ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸದ್ಯದಲ್ಲೇ ರಿಲೀಸಾಗಲಿದೆ. ನಿಮ್ಮಗಳ ಸಹಕಾರವಿರಲಿ ಎಂದಷ್ಟೇ ಹೇಳಿದರು. ಈ ಚಿತ್ರದ ನಾಯಕನಾಗಿ ಬಿ.ವಿ. ಶೃಂಗಾ ಅಭಿನಯಿಸಿದ್ದು, ಪಾತ್ರದ ಬಗ್ಗೆ ಮಾಹಿತಿ ನೀಡುವ ಅವರು ‘ನಾವೆಲ್ಲಾ ಇಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದು, ನಿಮ್ಮಗಳ ಸಹಕಾರ ಬೇಕು. ನಾನಿಲ್ಲಿ ರೆಸ್ಟೋರೆಂಟ್ ಮಾಲಿಕನ ಪಾತ್ರ ಮಾಡಿದ್ದೇನೆ. ಕಥೆ ಕೇಳಿದಾಗ ಇಂದಿನ ಜನರೇಷನ್ ಗೆ ಹೇಳಬೇಕಾದ ವಿಷಯವಿದೆ ಅನಿಸಿತು. ಇದರಲ್ಲಿ ಹ್ಯೂಮರ್, ಫ್ಯಾಮಿಲಿ ಡ್ರಾಮಾವನ್ನು ನಿರ್ದೇಶಕರು ಚನ್ನಾಗಿ ಬಳಸಿದ್ದಾರೆ.

ನಂದಿಲ್ಲಿ ಮಿಡ್ಲ್ ಕ್ಲಾಸ್ ಕುಟುಂಬದಿಂದ ಬಂದು, ಚೈನೀಸ್ ರೆಸ್ಟೋರೆಂಟ್ ಮಾಡುವ ಆಸೆಯಿಂದ ಹೇಗೆಲ್ಲಾ ಅಲೆದಾಡುತ್ತಾನೆ ಎಂಬುದನ್ನು ನೋಡಬಹುದು’ ಎಂದರು. ನಟಿ ನಿತ್ಯಶ್ರೀ ‘ನಂಗೆ ಕನ್ನಡದಲ್ಲಿ ಇದು ೨ನೇ ಸಿನಿಮಾ. ತಮಿಳು, ತೆಲಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಒಂದಿಷ್ಟು ಸಿನಿಮಾ ಮಾಡಿದ್ದೇನೆ. ಚಿತ್ರಕ್ಕೆ ತಂಡದ ಶ್ರಮ ತುಂಬಾ ಇದ್ದು ಎಲ್ಲಾ ಕಲಾವಿದರು ಭಾಷೆ ಕಲೆತು ಅಭಿನಯ ಮಾಡುವ ಜೊತೆಗೆ ಡಬ್ಬಿಂಗ್ ಕೂಡ ಮಾಡಿದ್ದಾರೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಿತ್ರದ ನಾಯಕಿ ರಿನಿ, ಮಣಿಪುರ ನಟ ಬಿಜು ತಾಂಜಿಂ, ಆಸಾಂ ಕಲಾವಿದ ಹಿರಾಕ್ ಸೋನಾವಾಲ್, ಉತ್ತರಕಾಂಡದ ನಟ ಜಿಂಪಾ ಭುಟಿಯಾ, ನಿರ್ಮಾಪಕ ದೀಪ್ ಭೀಮಾಜಿಹಾನಿ ತಮ್ಮ ಅನುಭವ ಹಂಚಿಕೊಂಡರು. ಅಂದಂಗೆ ಈಗಾಗಲೇ ಈ ಚಿತ್ರವನ್ನು ನೋಡಿದ ನಟ ರಮೇಶ್‌ ಅರವಿಂದ್, ಹೇಮಂತ್ ರಾವ್ ಹಾಗೂ ಬೇರೆ ಭಾಷೆಯ ಪ್ರಮುಖರು ಮೆಚ್ಚಿದ್ದಾರೆ. ಈ ತಂಡ ಬೆಂಗಳೂರಿನಲ್ಲಿ ಒಡೆದು ಹಾಕಿರುವ ಕಾವೇರಿ ಥಿಯೇಟರ್ ಬಗ್ಗೆ ಸಾಂಗ್ ಮಾಡಿ ಅದನ್ನು ಟ್ರಿಬ್ಯೂಟ್ ಕೊಡುತ್ತಿದೆ. ಈ ಗೀತೆಗೆ ಪತ್ರಕರ್ತ ಶ್ರೀಧರ್ ಶಿವಮೊಗ್ಗ ಸಾಹಿತ್ಯ ಬರೆದಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor