Chief Minister Siddaramaiah watched Raju James Bond movie Show real. ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಮಾನ್ಯ ಮುಖ್ಯಮಂತ್ರಿಗಳ ಪ್ರಶಂಸೆ.

ರಾಜು ಜೇಮ್ಸ್‌ ಬಾಂಡ್‌ ಚಿತ್ರ ವಿಧಾನಸೌಧದ ಮೆಟ್ಟಿಲು ಹತ್ತಿದೆ. ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನರ್‌ ಆಗಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿರುವ ಸಮಯದಲ್ಲಿ ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರನ್ನು ಚಿತ್ರತಂಡ ಭೇಟಿ ಮಾಡಿ, ಚಿತ್ರದ ಶೋ ರೀಲ್‌ ತೋರಿಸಿದ್ದಾರೆ. ಅದನ್ನು ನೋಡಿದ ಸಿದ್ಧರಾಮಯ್ಯನವರು ಅಭಿನಂದಸಿದ್ದಾರೆ.

ಈ ಸಿನಿಮಾದಲ್ಲಿ ರೈತೆರ ಬದುಕನ್ನು ಕುರಿತು ಹೆಚ್ಚೆಚ್ಚು ಸಿನಿಮಾಗಳು ಬರಬೇಕು ಸಾಲದಿಂದ ಮಧ್ಯಮ ವರ್ಗದ ಜನರಿಗೆ ಎಷ್ಟರ ಮಟ್ಟಿಗೆ ಹಿಂಸೆಯಾಗಿದೆ ಹಾಗೇ ಸಾಲದ ಸುತ್ತ ನಡೆಯುವ ಅಂಶಗಳನ್ನು ನೋಡಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಮೆಚ್ಚುಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಆದಷ್ಟು ಬೇಗ ಸಮಯ ಮಾಡಿಕೊಂಡು ಪೂರ್ಣ ಪ್ರಮಾಣ ಚಿತ್ರವನ್ನು ವೀಕ್ಷಿಸಲಿದ್ದಾರೆಂದು ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಮೊನ್ನೆಯಷ್ಟೆ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್‌ ಅವರನ್ನು ಚಿತ್ರತಂಡ ಬೇಟಿ ಮಾಡಿತ್ತು. ಆ ಸಮಯದಲ್ಲಿ ಚಿತ್ರ ತಂಡಕ್ಕೆ ಆದಷ್ಟು ಬೇಗ ಬಿಡುವು ಮಾಡಿಕೊಂಡು ಚಿತ್ರವನ್ನು ನೋಡುತ್ತೇನೆ ಎಂದು ಹೇಳಿದ್ದರು. ಈಗ ಚಿತ್ರ ತಂಡ ಇಬ್ಬರಿಗೂ ಒಟ್ಠಿಗೆ ಸಿನಿಮಾ ತೋರಿಸುವ ಕಾತುರದಲ್ಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor