Chef chidambara movie release on June 14th. ಚೆಫ್ ಚಿದಂಬರ ಚಿತ್ರ ಜೂನ್ 14ಕ್ಕೆ ರಾಜ್ಯದಾದ್ಯಂತ ತೆರೆಗೆ.
ಚೆಫ್ ಚಿದಂಬರ ಚಿತ್ರ ಜೂನ್ 14ಕ್ಕೆ ರಾಜ್ಯದಾದ್ಯಂತ ತೆರೆಗೆ ಬರಲಿದೆ. ವಿಷ್ಣುವರ್ಧನ್ ರವರ ಅಳಿಯ ಅನಿರುದ್ ರವರು ಈ ಹಿಂದೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಒತ್ತಿದ್ದಾರೆ. “ಜೊತೆ ಜೊತೆಯಲ್ಲಿ” ಧಾರವಾಹಿಯಲ್ಲಿ ಅಭಿನಯಿಸಿ ಕಿರುತೆರೆಯಲ್ಲಿ ಹೊಸ ಹೊಸ ಅಭಿಮಾನಿಗಳ ಮಹಾಪೂರವನ್ನೇ ತಮ್ಮದಾಗಿಸಿಕೊಂಡವರು. ಈಗ ಮತ್ತೆ ಬೆಳ್ಳಿ ತೆರೆಯಲ್ಲಿ “ಚೆಫ್ ಚಿದಂಬರ ಚಿತ್ರದ ಮೂಲಕ ವಿಭಿನ್ನ ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವಂತಿದೆ. ಅನಿರುಧ್ ರವರಿಗೆ ಈ ಚಿತ್ರ ಯಶಸ್ಸನ್ನು ತಂದುಕೊಡಲಿ ಹಾಗೂ ಚಿತ್ರ ತಂಡಕ್ಕೆ ಒಳ್ಳೆಯ ಹೆಸರು ಬರಲಿ, ಹಣ ಹಾಕಿದ ನಿರ್ಮಾಪಕರಿಗೆ ಮೊದಲು ಒಳ್ಳೆಯದಾಗಲಿ ಎಂಬುದು ನಮ್ಮ ಆಶಯ.