Cal ki 2898 ad movie Bhairava Anthem released. ಕಲ್ಕಿ 2898 AD ಚಿತ್ರದ ಭೈರವ ಆಂಥಮ್ ರಿಲೀಸ್
ಕಲ್ಕಿ 2898 AD ಚಿತ್ರದ ಭೈರವ ಆಂಥಮ್ ರಿಲೀಸ್
ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ‘ಕಲ್ಕಿ 2898 AD’ ಚಿತ್ರದ ಟ್ರೈಲರ್ ಬಿಡುಗಡೆಯ ಬಳಿಕ ಇದೀಗ ಇದೇ ಚಿತ್ರದ ಭೈರವ ಆಂಥಮ್ ಬಿಡುಗಡೆಯಾಗಿದೆ. ವೈಜಯಂತಿ ಮೂವೀಸ್ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ರಿಲೀಸ್ ಆಗಿದೆ. ನಟ ಪ್ರಭಾಸ್ ಅವರು ನಟಿಸಿರುವ ಈ ಚಿತ್ರದ ಹಾಡಿಗೆ ಮೊದಲ ಸಲ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಧ್ವನಿ ನೀಡಿದ್ದಾರೆ. ಸಂತೋಷ್ ನಾರಾಯಣನ್ ಈ ಹಾಡಿಗೆ ಸಂಗೀತ ನೀಡಿದ್ದಾರೆ.
ಪಕ್ಕಾ ಮಾಸ್ ಅವತಾರದಲ್ಲಿ ನಟ ಪ್ರಭಾಸ್ ಈ ಹಾಡಿನಲ್ಲಿ ಎದುರಾಗಿದ್ದಾರೆ. ತಲೆಗೆ ಟರ್ಬನ್ ಧರಿಸಿ ಮತ್ತು ಪಂಚೆಯಲ್ಲಿ ಮಿಂಚಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದ ಈ ಸಿನಿಮಾ, ಇದೀಗ ಭೈರವ ಆಂಥಮ್ ಮೂಲಕ ಕಿಕ್ ಹೆಚ್ಚಿಸುತ್ತಿದೆ. ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.