BTS movie release on November 8th. ಬಿಟಿಎಸ್’ ಟ್ರೇಲರ್ ರಿಲೀಸ್…ನ.8ಕ್ಕೆ ಯುವ ಸಿನಿಮೋತ್ಸಾಹಿಗಳ ಸಿನಿಮಾ ತೆರೆಗೆ ಎಂಟ್ರಿ
‘ಬಿಟಿಎಸ್’ ಟ್ರೇಲರ್ ರಿಲೀಸ್…ನ.8ಕ್ಕೆ ಯುವ ಸಿನಿಮೋತ್ಸಾಹಿಗಳ ಸಿನಿಮಾ ತೆರೆಗೆ ಎಂಟ್ರಿ
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಮತ್ತೆ ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ. ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಐವರು ಯುವ ಸಿನಿಮೋತ್ಸಾಹಿಗಳ ಹೊಸ ಪ್ರಯತ್ನ ‘ಬಿಟಿಎಸ್’ ಬಿಡುಗಡೆಗೆ ಸಜ್ಜಾಗಿದೆ.

‘ಬಿಟಿಎಸ್’ ಎಂದರೆ ‘ಬಿಹೈಂಡ್ ದಿ ಸೀನ್ಸ್’ ಎಂದರ್ಥ..ಇಡೀ ಸಿನಿಮಾದ ಥೀಮ್ – ತೆರೆಯ ಹಿಂದಿನ ಕಥೆಗಳು, ಹೀಗಾಗಿ ಈ ಚಿತ್ರಕ್ಕೆ ಈ ಟೈಟಲ್ ಇಡಲಾಗಿದೆ. ‘ಬಿಟಿಎಸ್’ ಟ್ರೇಲರ್ ರಿಲೀಸ್ ಆಗಿದ್ದು, ಹೊಸಬರ ಪ್ರಯತ್ನ ಗಮನಸೆಳೆಯುತ್ತಿದೆ. ಈ ಕಾಲದ ನಿರ್ದೇಶಕರ ಐದು ಕಥೆಗಳು ಈ ಸಿನಿಮಾದಲ್ಲಿವೆ. ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಕಾಫಿ, ಸಿಗರೆಟ್ಸ್ ಅಂಡ್ ಲೈನ್ಸ್’, ‘ಹೀರೋ’, ‘ಬ್ಲ್ಯಾಕ್ ಬಸ್ಟರ್’ ಹಾಗೂ ಸುಮೋಹ’ ಎಂಬ ಕಥೆಗಳು ಬಿಟಿಎಸ್ ಚಿತ್ರದ ಹೈಲೆಟ್ಸ್..

ಭರದಿಂದ ಸಾಗ್ತಿದೆ ಪ್ರಚಾರ
ಬಿಟಿಎಸ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ನ.8ಕ್ಕೆ ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ವಿಭಿನ್ನ ಪ್ರಚಾರ ನಡೆಸುತ್ತಿದೆ. ಚಿತ್ರತಂಡ ಜನರ ಬಳಿಗೆ ಹೋಗಿ ಅವರು ಕಾಫಿ ಕುಡಿಯುವ, ಸಿಗರೆಟ್ ಸೇದುವ ಟೈಮಲ್ಲೇ ಸಿನಿಮಾ ಟೀಸರ್ ತೋರಿಸಿ, ಚಿತ್ರದತ್ತ ಸೆಳೆಯುವ ಪ್ರಯತ್ನದಲ್ಲಿದೆ. ಚಾ ಅಂಗಡಿ, ದರ್ಶಿನಿ ಮೊದಲಾದೆಡೆ ಬಿಳಿ ಹಾಳೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಗಮನ ಸೆಳೆಯುವ ಟ್ಯಾಗ್‌ಲೈನ್‌ನೊಂದಿಗೆ ಸಿನಿಮಾ ಪ್ರಮೋಶನ್ ಮಾಡಲಾತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿರುವುದಕ್ಕೆ ಚಿತ್ರತಂಡ ಖುಷಿಯಲ್ಲಿದೆ.

ಬಿಟಿಎಸ್-ಬಿಹೈಂಡ್ ದಿ ಸ್ಕ್ರೀನ್ ಚಿತ್ರವನ್ನು ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್.ಶಂಕದ್, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇಷ್ಟು ಜನ ನಿರ್ದೇಶಕರೇ ಸಿನಿಮಾಗೆ ಬಂಡವಾಳ ಹಾಕಿರುವುದು ವಿಶೇಷ.. ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್ ನೀನಾಸಂ ಸೇರಿದಂತೆ ಮತ್ತಿತರು ಚಿತ್ರದಲ್ಲಿ ಅಭಿನಯಿಸಿದ್ದಾರೆ.