ಬ್ರೇಕ್‌ಫೇಲ್ಯೂರ್ ಟೀಸರ್ ಬಿಡುಗಡೆ

ಹುಬ್ಬಳ್ಳಿಯ ಹೋಮಿಯೋಪಥಿ ವೈದ್ಯ ಅಬ್ದುಲ್ ಘನಿ ತಾಳೀಕೋಟೆ ಅವರ ನಿರ್ಮಾಣದ ಕುತೂಹಲಕಾರಿ ಕಥಾಹಂದರ ಇರುವ ಚಿತ್ರ ಬ್ರೇಕ್‌ ಫೇಲ್ಯೂರ್ ಇದೀಗ ಬಿಡುಗಡೆಯ ಹಂತ ತಲುಪಿದ್ದು, ಈ ಚಲನಚಿತ್ರದ ಟೀಸರ್ ಬಿಡುಗಡೆ ಹಾಗೂ ೨ ಹಾಡುಗಳ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಾಲ್ಕು ಜನ ಸ್ನೇಹಿತರು ಒಂದು ಪ್ರಾಜೆಕ್ಟ್ವರ್ಕ್ ಕಂಪ್ಲೀಟ್ ಮಾಡಲೆಂದು ಕಾಡೊಂದಕ್ಕೆ ಹೋದಾಗ ಅವರಿಗೆ ವಿಚಿತ್ರ ವ್ಯಕ್ತಿಯೊಬ್ಬ ಎದುರಾಗಿ ಇವರನ್ನೆಲ್ಲ ಸಾಯಿಸಲು ಮುಂದಾಗುತ್ತಾನೆ. ಇದಕ್ಕೆ ಕಾರಣವೇನು ಎನ್ನುವುದೇ ಬ್ರೇಕ್‌ಫೇಲ್ಯೂರ್ ಚಿತ್ರದ ಕಥಾಹಂತರ. ಕುತೂಹಲಕಾರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ದಾಂಡೇಲಿ ಸುತ್ತಮುತ್ತಲಿನ ಅರಣ್ಯದಲ್ಲಿ ಸುಮಾರು ೩೫ ದಿನಗಳ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗುತ್ತಿರುವ ಈ ಚಿತ್ರದಲ್ಲಿ ಅದಿತ್ ನವೀನ್ ನಾಯಕನಾಗಿ ಕಾಣಿಸಿಕೊಂಡಿದ್ದು, ಜೊತೆಗೆ ಚಿತ್ರದ ನಿರ್ದೇಶಕನಾಗೂ ಕೆಲಸ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಡಾ.ಅಬ್ದುಲ್‌ಘನಿ ಒಂದು ಸಿನಿಮಾ ನಿರ್ಮಾಣ ಮಾಡಬೇಕೆನ್ನುವುದು ನನ್ನ ಆಶಯವಾಗಿತ್ತು. ಇದೇ ಸಂದರ್ಭದಲ್ಲಿ ನಿರ್ದೇಶಕ ನವೀನ್ ಹೇಳಿದ ಈ ಕಥೆ ಇಷ್ಟವಾಗಿ ಸಣ್ಣದಾಗಿ ಚಿತ್ರವನ್ನ ಆರಂಭಿಸಿದೆವು. ನಂತರ ಅದು ದೊಡ್ಡದಾಯಿತು. ಕಲಾವಿದರೆಲ್ಲರ ಸಹಕಾರದಿಂದ ಚಿತ್ರ ರೆಡಿಯಾಗಿದ್ದು, ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡೋ ಪ್ಲಾನ್ ಇದೆ ಎಂದು ಹೇಳಿದರು.
ನಂತರ ನಿರ್ದೇಶಕ ಅದಿತ್ ನವೀನ್ ಮಾತನಾಡುತ್ತ ನಿರ್ಮಾಪಕರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಮುಂದೆ ಜನ ಹೇಗಿದೆ ಅಂತ ಹೇಳಬೇಕು. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು, ನಾಲ್ವರು ಬೇಜವಾಬ್ದಾರಿ ಹುಡುಗರು, ಅವರು ಒಂದು ಡಾಕ್ಯುಮೆಂಟರಿ ಶೂಟ್ ಮಾಡಿಕೊಂಡು ಬರಲು ದಾಂಡೇಲಿಯ ಕಾಡಿಗೆ ಹೋದಾಗ ಅಲ್ಲಿ ಅವರಿಗೆದುರಾಗುವ ಭಯಾನಕ ವ್ಯಕ್ತಿಯೊಬ್ಬ ಇವರನ್ನು ಕೊಲ್ಲಲು ಮುಂದಾಗುತ್ತಾನೆ. ಒಬ್ಬೊಬ್ಬರೇ ಡೆತ್ ಆಗ್ತಾ ಹೋಗುತ್ತಾರೆ. ಆತ ಇವರನ್ನೇ ಏಕೆ ಟಾರ್ಗೆಟ್ ಮಾಡುತ್ತಾನೆ, ಕೊನೆಗೆ ಅವರೆಲ್ಲ ಉಳಿಯುತ್ತಾರೋ, ಇಲ್ವೋ ಎನ್ನುವುದೇ ಕ್ಲೈಮ್ಯಾಕ್ಸ್. ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಇದೆ ಎಂದು ಹೇಳಿದರು, ನೀರು ಮತ್ತು ಆಹಾರ ಮನುಷ್ಯನ ಜೀವನದಲ್ಲಿ ಎಷ್ಟು ಮುಖ್ಯ ಅಂತ ಚಿತ್ರದಲ್ಲಿ ತೋರಿಸಿದ್ದೇವೆ. ಹಿಂದೆ ಕೆಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ, ಸಹ ನಿರ್ದೇಶಕನಾಗಿ ದುಡಿದ ಅನುಭವವಿತ್ತು ಎಂದು ಹೇಳಿದರು.
ನಾಯಕಿ ಕೃತಿ ಗೌಡ ಮಾತನಾಡಿ ನಮ್ಮ ಜೀವನದಲ್ಲಿ ಬ್ರೇಕ್ ಫೇಲ್ಯೂರ್ ಆಗಿರುತ್ತೆ, ಅದೇನೆಂದು ಈ ಚಿತ್ರದಲ್ಲಿ ಹೇಳಿದೆ. ದಟ್ಟ ಕಾಡಿನಲ್ಲಿ ನಮಗೆ ಆಹಾರ, ನೀರಿನ ಬೆಲೆ ಏನೆಂದು ಗೊತ್ತಾಯ್ತು. ಇದು ನನ್ನ ಐದನೇ ಚಿತ್ರ, ರಿಲೀಸ್ ಆಗ್ತಿರುವ ಮೊದಲ ಚಿತ್ರ ಎಂದರು. ಉಗ್ರಂರವಿ ಅವರು ಈ ಚಿತ್ರದಲ್ಲಿ ಇವರನ್ನೆಲ್ಲ ಕೊಲ್ಲಲು ಬರುವ ಆಗುಂತಕನಾಗಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಕವಿನ್ ಹಾಗೂ ಅಭಿಷೇಕ್ ಜಿ.ರಾಯ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಿಷಿಕೇಶ್ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.

ಅದಿತ್ ನವೀನ್, ಸುರೇಶ್, ರಾಜ್ ಆರ್ಯನ್ ಜೊತೆಗೆ ಕೃತಿ ಗೌಡ, ಅಂಜಲಿ, ರೇಚಲ್ ಚಿತ್ರದ ನಾಯಕಿಯರಾಗಿ ನಟಿಸಿದ್ದು, ಕೆವಿನ್ ಎಂ. ಹಾಗೂ ಅಭಿಷೇಕ್‌ರಾಯ್ ಈ ಚಿತ್ರದ ೨ ಹಾಡುಗಳಿಗೆ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ರಿಶಿಕೇಶ್ ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor