ಏಪ್ರಿಲ್ ನಲ್ಲಿ ‘ಬ್ಲ್ಯಾಕ್ ಡೈಮಂಡ್’ ಚಿತ್ರೀಕರಣ.
ವಿಶ್ವೇಶ್ವರ ಪಿಕ್ಚರ್ಸ್ ಲಾಂಛನದಲ್ಲಿ ಜ್ಞಾನೇಶ್ವರ ಐತಾಳ್ ಅವರು ನಿರ್ಮಿಸುತ್ತಿರುವ “ಬ್ಲಾಕ್ ಡೈಮಂಡ್” ಚಿತ್ರದ ಚಿತ್ರೀಕರಣ ಏಪ್ರಿಲ್ ನಲ್ಲಿ ಆರಂಭವಾಗಲಿದೆ.
ಲವ್ ಸ್ಟೋರಿ ಆಧಾರಿತ ಈ ಚಿತ್ರದ ನಿರ್ದೇಶಕರು ಪಿ.ವಿ.ಆರ್ ಸ್ವಾಮಿ. ರಾಘವೇಂದ್ರ ರಾಜಕುಮಾರ್ ನಾಯಕರಾಗಿ ನಟಿಸಿದ್ದ “ರಾಜತಂತ್ರ” ಚಿತ್ರವನ್ನು ನಿರ್ದೇಶನ ಮಾಡಿದ್ದ ಪಿ.ವಿ.ಆರ್ ಸ್ವಾಮಿ ಅವರಿಗೆ ಇದು ಎರಡನೇ ಚಿತ್ರ. ನಿರ್ದೇಶಕರೆ ಕಥೆ ಬರೆದಿದ್ದು, ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
ಎರಡು ಹಾಡುಗಳು ಹಾಗೂ ಮೂರು ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ನಾಗೇಶ್ ಸಂಕಲನ ಹಾಗೂ ವೈಲೆಂಟ್ ವೇಲು ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕಾರ್ತಿಕ್, ವಿಷ್ಣು, ಪ್ರತಾಪ್ ಸಿಂಹ ಮುಂತಾದವರಿದ್ದಾರೆ.


