Bhuvanam Gaganam movie Shooting completed. ಸಲಾರ್ ಪ್ರಮೋದ್-ದಿಯಾ ಪೃಥ್ವಿ ಅಂಬಾರ್ ನಟನೆಯ ‘ಭುವನಂ ಗಗನಂ’ ಸಿನಿಮಾದ ಶೂಟಿಂಗ್ ಕಂಪ್ಲೀಟ್…ಪೋಸ್ಟ್ ಪ್ರೊಡಕ್ಷನ್ ನಲ್ಲಿ ಚಿತ್ರತಂಡ ಬ್ಯುಸಿ..

ಸಲಾರ್ ಪ್ರಮೋದ್-ದಿಯಾ ಪೃಥ್ವಿ ಅಂಬಾರ್ ನಟನೆಯ ‘ಭುವನಂ ಗಗನಂ’ ಸಿನಿಮಾದ ಶೂಟಿಂಗ್ ಕಂಪ್ಲೀಟ್…ಪೋಸ್ಟ್ ಪ್ರೊಡಕ್ಷನ್ ನಲ್ಲಿ ಚಿತ್ರತಂಡ ಬ್ಯುಸಿ..

ಪ್ರಮೋದ್-ಪೃಥ್ವಿ ಸಂಗಮದ ‘ಭುವನಂ ಗಗನಂ’ ಸಿನಿಮಾದ ಚಿತ್ರೀಕರಣ ಮುಕ್ತಾಯ.. ಪೋಸ್ಟ್ ಪ್ರೊಡಕ್ಷನ್ ನಲ್ಲಿ ಚಿತ್ರತಂಡ ಬ್ಯುಸಿ..

ಭುವನಂ ಗಗನಂ ಸಿನಿಮಾ ತನ್ನ ಟೈಟಲ್ ಮೂಲಕ ಗಾಂಧಿನಗರದ ಟಾಕ್ ಐಟಂ ಎನಿಸಿಕೊಂಡಿದೆ. ಸಲಾರ್ ಸಿನಿಮಾ ಖ್ಯಾತಿ ಪ್ರಮೋದ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿ ಅದ್ಧೂರಿ ಸೆಟ್ ಹಾಕಿ ಕೊನೆ ದಿನ ಚಿತ್ರೀಕರಣ ನಡೆಸಲಾಗಿದೆ. ಈ ವೇಳೆ ಚಿತ್ರತಂಡ ಮಾಧ್ಯಮದರೊಂದಿಗೆ ಮಾಹಿತಿ ಹಂಚಿಕೊಂಡಿದೆ.

ನಟ ಪ್ರಮೋದ್ ಮಾತನಾಡಿ, ನನ್ನ ಭಾಗದ ಶೂಟಿಂಗ್ ಅಕ್ಟೋಬರ್ ತಿಂಗಳಲ್ಲಿಯೇ ಮುಗಿತ್ತು. ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದ್ಭುತ ಶೂಟಿಂಗ್ ಸೆಟ್ ಹಾಕಿದ್ದಾರೆ. ಇದಕ್ಕೆಲ್ಲಾ ಮುನೇಗೌಡರ ಬೆಂಬಲವಿದೆ. ಅವರಿಗೆ ಸಿನಿಮಾ ಮೇಲೆ ಹೆಚ್ಚು ಫ್ಯಾಷನ್ ಇದೆ. ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಲವರ್ ಬಾಯ್ ಆಗಿ ನಾನು ಕಾಣಿಸಿಕೊಂಡಿಲ್ಲ. ಈ ಚಿತ್ರದಲ್ಲಿ ನಾನು ಸ್ಟೈಲೀಶ್ ಆಗಿ , ಲವ್ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ ಎಂದರು.

ನಟ ಪೃಥ್ವಿ ಅಂಬರ್ ಮಾತನಾಡಿ, ಮುನೇಗೌಡರ SVC ಫಿಲ್ಮಂಸ್ ದೊಡ್ಡ ಸಂಸ್ಥೆಯಾಗಿ ಚಿತ್ರರಂಗದಲ್ಲಿ ಹೊರಹೊಮ್ಮಬೇಕು. ಒಬ್ಬ ಸ್ಟ್ರಾಂಗ್ ಪ್ರೊಡ್ಯೂಸರ್ ಸಿಗುವುದು ಕಷ್ಟ. ಈ ಕಂಟೆಂಟ್ ಗೆ ಏನು ಬೇಕೋ ಅದನ್ನು ಮನಸಾರೆ, ತುಂಬಾ ಪ್ರೀತಿ ಇಟ್ಟು ಕೊಟ್ಟಿದ್ದಾರೆ. ಈ ಸಂಸ್ಥೆ ತುಂಬಾ ಒಳ್ಳೆ ಸಿನಿಮಾಗಳು ಬರಬೇಕು. ನನ್ನ ಪಾತ್ರವನ್ನು ತುಂಬಾದಲ್ಲಿ ಮಾಡಿದ್ದೇನೆ. ತುಂಬಾ ಫ್ಯಾಷನೇಟೆಡ್ ಆಗಿ ನಿರ್ದೇಶಕರು ಮಾಡಿದ್ದಾರೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ನಿರ್ದೇಶಕ ಗಿರೀಶ್ ಮೂಲಿಮನಿ ಮಾತನಾಡಿ, ಒಂದೂವರೆ ವರಷ್ದ ಹಿಂದೆ ಭುವನಂ ಗಗನಂ ಜರ್ನಿ ಶುರುವಾಗಿತ್ತು. ಅಲ್ಲಿಂದ ಇಲ್ಲಿವರೆಗೆ ನಾವು ನಿಮ್ಮನ್ನು ಭೇಟಿಯಾಗಲು ಆಗಿರಲಿಲ್ಲ. ಈಗ ಚಿತ್ರೀಕರಣ ಮುಕ್ತಾಯಗೊಂಡಿದೆ. ಇನ್ಮೇಲೆ ನಿಮ್ಮ ಸಹಕಾರ ನಮ್ಮ ಸಿನಿಮಾ ಮೇಲೆ ಇರಲಿ ಎಂದರು.

ನಿರ್ಮಾಪಕ ಎಂ ಮುನೇಗೌಡ ಮಾತನಾಡಿ, ಒಂದೂವರೆ ವರ್ಷ ಹಿಂದೆ ಶುರುವಾದ ಜರ್ನಿ ಇದು. ಸುಮಾರು 75 ದಿನಗಳ ಕಾಲ ಮೈಸೂರು, ಹಾವೇರಿ, ಕುದುರೆಮುಖ, ಕಳಸ, ಕನ್ಯಾಕುಮಾರಿ. ಬೆಂಗಳೂರು..ಇಷ್ಟು ಜಾಗ ಸುತ್ತಿಕೊಂಡು..ಕೊನೆಯಲ್ಲಿ ಈ ಜಾಗದಲ್ಲಿ ಅದ್ಧೂರಿಯಾಗಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ಒಂದೊಳ್ಳೆ ಕಥೆ ಇಟ್ಕೊಂಡು ಸಿನಿಮಾ ಮಾಡಿದ್ದೇವೆ. ನನಗೆ ಹೋಪ್ ಇದೆ. ಈ ಸಿನಿಮಾ ಯಾವುದೋ ಒಂದು ರೇಂಜ್ ನಲ್ಲಿ ಹೋಗುತ್ತದೆ ಎಂದರು.

ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸ್ತಿರುವ ಭುವನಂ ಗಗನಂ ಸಿನಿಮಾಗೆ ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ರಾಜರು ಎಂಬ ಚಿತ್ರ ಮಾಡಿದ್ದರು. ಇದೀಗ ಭುವನಂ ಗಗನಂ ಮೂಲಕ ಮತ್ತೊಂದು ಫ್ರೆಶ್ ಕಥೆಯನ್ನು ಹೇಳೋದಿಕ್ಕೆ ಬರ್ತಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡ್ಬೇಕೆಂಬ ಕನಸಿನೊಂದಿಗೆ ನಿರ್ಮಾಪಕ ಎಂ ಮುನೇಗೌಡ ತಮ್ಮದೇ ಎಸ್ ವಿಸಿ ಫಿಲ್ಮಂಸ್ ಪ್ರೊಡಕ್ಷನ್ ನಡಿ ಭುವನಂ ಗಗನಂಗೆ ಹಣ ಹಾಕಿದ್ದಾರೆ.

ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor