Bhairadevi movie celebrity show. ಭೈರಾದೇವಿಗೆ ಸಾಥ್ ನೀಡಲು ಬಂದ್ರು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು.
ಭೈರಾದೇವಿಗೆ ಸಾಥ್ ನೀಡಲು ಬಂದ್ರು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು.
ಭೈರಾದೇವಿ ಚಿತ್ರ ಬಿಡುಗಡೆಗೆ ಮುಂಚೆಯೇ ಒಂದಷ್ಟು ಸದ್ದು ಮಾಡುತ್ತಿದೆ. ರಾಧಿಕಾ ಮತ್ತು ರಮೇಶ್ ಅರವಿಂದ್, ಅನು ಪ್ರಭಾಕರ್ ಮುಖ್ಯಭೂಮಿಕೆಯಲ್ಲಿ ನಿರ್ಮಾಣವಾಗಿರುವ ಭೈರಾದೇವಿ ಚಿತ್ರಕ್ಕೆ ಚಿತ್ರ ಪ್ರೇಮಿಗಳಿಂದ ಒಳ್ಳೆಯ ಪ್ರಶಂಸೆ ಮೂಡಿಬರುತ್ತಿದೆ. ಜಾಲ ತಾಣಗಳಲ್ಲಿ ಚಿತ್ರದ ಟ್ರೇಲರ್ ನೋಡಿರುವ ಪ್ರೇಕ್ಷಕರಿಂದ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿದೆ. ಇತ್ತೀಚಿಗೆ ಚಿತ್ರ ಬಿಡುಗಡೆಯ ಪೂರ್ವ ಭಾವಿಯಾಗಿ ಚಿತ್ರರಂಗದ ಗಣ್ಯರಿಗೆ ಹಾಗೂ ಕಲಾವಿದರಿಗೆ ಸಿನಿಮಾ ತೋರಿಸಲಾಯ್ತು.

ಚಿತ್ರ ನೋಡಿದ ಪ್ರತಿಯೊಬ್ಬರ ಬಾಯಲ್ಲೂ ಮೈ ಜುಮ್ಮೆನ್ನಿಸೋ ಹಾಗಿದೆ, ತುಂಬಾ ಚನ್ನಾಗಿ ಸಿನಿಮಾ ಮಾಡಿದ್ದಾರೆ ಎಂದು ರಾಧಿಕಾ ಕುಮಾರಸ್ವಾಮಿ , ರಮೇಶ್ ಅರವಿಂದ್‌ಹಾಗೂ ಅನು ಪ್ರಭಾಕರ್ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಾರೆ. ಹಾಗೆಯೇ ಚಿತ್ರ ನಿರ್ದೇಶಕ ಶ್ರೀಜೈ ಯವರ ಕೆಲಸಕ್ಕೆ ಫುಲ್ ಮಾರ್ಕ್ ಕೊಟ್ಟಿದ್ದಾರೆ.

ಸಿನಿಮಾ ವೀಕ್ಷಣೆ ಮಾಡಿದ ಹಿರಿಯ ನಟಿ ಜಯಮಾಲ, ಪ್ರಿಯಾಂಕ ಉಪೇಂದ್ರ, ನಟ ಶರಣ್, ಚಿನ್ನೇಗೌಡ, ಧೃವಸರ್ಜಾ, ಸುಚೀಂದ್ರ ಪ್ರಸಾದ್, ರಘು ಮುಖರ್ಜಿ, ಇನ್ನೂ ಹಲವಾರು ಕಲಾವಿದರು, ನಟ, ನಟಿಯರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರ ಇದೇ ಅಕ್ಟೋಬರ್ 3ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.
ಕಾಂತಾರದಂತೆ ಈ ಚಿತ್ರವೂ ಕೂಡ ಒಳ್ಳೆಯ ಪ್ರದರ್ಶನ ಕಂಡು ದೇಶದಾದ್ಯಂತ ಕೀರ್ತಿಗಳಿಸಲಿ ಎಂಬುದು ನಮ್ಮ ಆಶಯ.